ಶಿವಮೊಗ್ಗ, “ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು” ಎಂಬ ತತ್ವಪದದಂತೆ ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಇದೇ ಜುಲೈ-27 ರಂದು ಭಾನುವಾರ ಸವ೯ ಜಾತಿ-ಜನಾಂಗಗಳ ವಿಧುರ-ವಿಧವೆ ಪುನರ್ವಿವಾಹ ಸಮಾಲೋಚನೆ ಸಭೆ ಏಪ೯ಡಿಸಲಾಗಿದೆ.
ಇದೊಂದು ಮಾನವೀಯ ಸಂಬಂಧ ಹಾಗು ಸಾಮಾಜಿಕ ಕಳಕಳಿಯ ಹೊಸ ದಿಕ್ಕಿನ ಕಡೆಗಿನ ಪ್ರಯತ್ನವಾಗಿದ್ದು ನಾಡಿನ ನಾನಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅಂದು ಬೆಳಿಗ್ಗೆ 11=00 ಗಂಟೆಗೆ ವಿವಿಧೆಡೆಗಳಿಂದ ವಿಧುರ-ವಿಧವೆ ಹಾಗು ಪರಿತ್ಯಕ್ತರು ಭಾಗವಹಿಸಲಿದ್ದಾರೆ.
ಆಸಕ್ತರು ಆರ್.ಟಿ. ನಟರಾಜ್ ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಒಂದನೆ ಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಪ್ರೆಸ್ ಕ್ಲಬ್ ಎದುರು, ಆರ್.ಟಿ.ಒ. ಆಫೀಸ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ.
ಮೊಬೈಲ್ : 9448143165/9449552635/9342158359 ಇವರಲ್ಲಿ ಹೆಸರು ನೊಂದಾಯಿಸಿಕೊಂಡು ಪೋಸ್ಟ್ ಕಾಡ್೯ ಸೈಜ್ ಫೋಟೋ, ಆಧಾರ್ ಕಾಡ್೯, ಇತರೆ ಸಮಂಜಸ ದಾಖಲೆಗಳ ಸಹಿತ ಕಾಯ೯ಕ್ರಮದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿರುತ್ತಾರೆ.