ಶಿವಮೊಗ್ಗ | ಜಿಲ್ಲಾಧಿಕಾರಿಗಳಿಂದ, ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ

Date:

Advertisements

ಶಿವಮೊಗ್ಗ ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು. ಆಗಸ್ಟ್ 25 ರಿಂದ 15 ಸೆಪ್ಟೆಂಬರ್ 2025 ವರೆಗೆ ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಂಬಂಧ ಇಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಶಿವಮೊಗ್ಗ ಜಿಲ್ಲಾ ಘಟಕದ ವತಿಯಿಂದ ಡಿಜಿಟಲ್ ಸ್ವಾತಂತ್ರ್ಯ ರಾಜ್ಯವ್ಯಾಪಿ ಅಭಿಯಾನದ ಪೋಸ್ಟರನ್ನು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಬಿಡುಗಡೆ ಬಿಡುಗಡೆಗೊಳಿಸಿದರು.

1002123957

ಡಿಜಿಟಲ್ ಸ್ವಾತಂತ್ರ್ಯ- ಸೈಬರ್ ವಂಚನೆ, ಜೂಜಾಟ ಮತ್ತು ಅನೈನ್ ಗೇಮಿಂಗ್ ವ್ಯಸನದಿಂದ ಯುವಕರನ್ನು ರಕ್ಷಿಸುವುದು ಜಾಗೃತಿ ಅಭಿಯಾನದ ಮುಖ್ಯ ಉದ್ದೇಶ ಎಂಬುದನ್ನು ಸೋಲಿಡಾರಿಟಿ ಯೂತ್ ಮೂವೆಂಟ್ ತಿಳಿಸಿದೆ.

Advertisements

ಪ್ರಸ್ತುತ ಯುವಕರು ಮತ್ತು ಕುಟುಂಬಗಳು ಸೈಬರ್ ವಂಚನೆ, ಸೈಬರ್ ದಾಳಿಗಳು, ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಮತ್ತು ಗೇಮಿಂಗ್ ವ್ಯಸನದಿಂದ ಹೆಚ್ಚುತ್ತಿರುವ ಅಪಾಯಗಳನ್ನು ಎದುರಿಸುತ್ತಿವೆ. ಇವುಗಳು ಜೀವನವನ್ನು ಹಾಳುಮಾಡುವುದು, ಮತ್ತು ಉಳಿತಾಯವನ್ನು ನಾಶಮಾಡುವುದು, ಜನರನ್ನು ಸಾಲದ ಕೂಪಕ್ಕೆ ತಳ್ಳುವುದು ಮತ್ತು ಆತ್ಮಹತ್ಯೆಗಳಿಗೆ ಕಾರಣವಾಗುತ್ತಿರುವುದರಿಂದ ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ಮಾಹಿತಿಯಾಗಿದೆ.

ಅಭಿಯಾನದ ಮುಖ್ಯ ಉದ್ದೇಶಗಳು:

ಯುವಕರು, ಪೋಷಕರು ಮತ್ತು ಸಾರ್ವಜನಿಕರಿಗೆ ಡಿಜಿಟಲ್ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.ಬಲಿಪಶುಗಳು ಮತ್ತು ಕುಟುಂಬಗಳ ಕಥೆಗಳನ್ನು ಹಂಚಿಕೊಳ್ಳಲು ಹಾಗೂ ಸಹಾಯ ಪಡೆಯಲು ಪ್ರೋತ್ಸಾಹಿಸುವುದು ಅಭಿಯಾನದ ಮೂಲ ಉದ್ದೇಶವಾಗಿದೆ.

ಈ ಅಭಿಯಾನದ ಮುಖೇಣ ಸರ್ಕಾರದ ಬಳಿ ಕಠಿಣ ಕಾನೂನುಗಳು ಹಾಗೂ ವ್ಯಸನಮುಕ್ತ ಸೇವೆಗಳಿಗಾಗಿ ಒತ್ತಾಯಿಸುವುದಾಗಿದೆ.

ಪ್ರಮುಖ ಸಂದೇಶಗಳು

ಸೈಬರ್ ವಂಚನೆಯು ಸಂಪತ್ತನ್ನು ಕದಿಯುತ್ತಿದೆ.ಜೂಜು, ತ್ವರಿತ ಸಾಲ ಮತ್ತು ಬೆಟ್ರೆಂಗ್ ಕುಟುಂಬಗಳನ್ನು ನಾಶಪಡಿಸುತ್ತಿವೆ.ಅನೈನ್ ಗೇಮಿಂಗ್ ವ್ಯಸನ ಯುವಕರ ಅಧ್ಯಯನ, ಆರೋಗ್ಯ ಮತ್ತು ಸಂಬಂಧಗಳನ್ನು ಹಾಳುಮಾಡುತ್ತಿದೆ.

ವಿವಿಧ ಹಂತಗಳ ಚಟುವಟಿಕೆಗಳು

ತಾಲೂಕು/ಸ್ಥಳೀಯರಲ್ಲಿ ಬೀದಿ ನಾಟಕಗಳು, ಜಾಗೃತಿ ಭಾಷಣ, ಪೋಸ್ಟರ್ಗಳು, ಸಾಮಾಜಿಕ ಮಾಧ್ಯಮ ಸವಾಲು.ಬೀದಿ ನಾಟಕಗಳು, ವಿಚಾರ ಸಂಕಿರಣಗಳು, ರ್ಯಾಲಿಗಳು, ಸಾಕ್ಷ್ಯಗಳು,ರಾಜ್ಯ ಮಟ್ಟದಲ್ಲಿ ಬೀದಿ ನಾಟಕಗಳು, ಫ್ರೀಡಂ ಪಾರ್ಕ್‌ನಲ್ಲಿ ಧರಣಿ, ಮಾಧ್ಯಮ ವರದಿ, ವಕಾಲತ್ತು. ಹಾಗೂ ಇವುಗಳನ್ನು ಜಿಲ್ಲಾಧಿಕಾರಿ/ತಹಶೀಲ್ದಾರರಿಗೆ ಮನವಿ ಪತ್ರ ನೀಡುವುದಾಗಿದೆ ಎಂದು ತಿಳಿಸಿದ್ದಾರೆ.

ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಕರ್ನಾಟಕದ ರಾಜ್ಯಾಧ್ಯಕ್ಷರು ಈ ಮೂಲಕ ತಿಳಿಸಿರುವುದೇನಂದರೆ,

“ಯುವಕರು ನಮ್ಮ ದೇಶದ ಭವಿಷ್ಯ. ಡಿಜಿಟಲ್ ಅಪಾಯಗಳಿಂದ ಅವರನ್ನು ರಕ್ಷಿಸುವುದು ಸಮಾಜದ ಜವಾಬ್ದಾರಿಯಾಗಿದೆ. ಈ ಅಭಿಯಾನದ ಮೂಲಕ ನಾವು, ಸರ್ಕಾರ, ಸಮಾಜ ಮತ್ತು ಕುಟುಂಬಗಳನ್ನು ಒಗ್ಗೂಡಿಸಿ ಭವಿಷ್ಯವನ್ನು ಸುರಕ್ಷಿತಗೊಳಿಸಲು ಈ ಮೂಲಕ ಪ್ರಯತ್ನಿಸುತ್ತೇವೆ.

ಸಮಾಜಕ್ಕೆ ಕರೆ

ಈ ಅಭಿಯಾನಕ್ಕೆ ಎಲ್ಲಾ ಸಮಾಜ ಸುಧಾರಕ ಮತ್ತು ಯುವ ಸಂಘಟನೆಗಳು ಸಹಕರಿಸಿ ಯುವ ಸಮುದಾಯದ ಭವಿಷ್ಯ ರೂಪಿಸುವಲ್ಲಿ ತಾವೆಲ್ಲರೂ ಒಗ್ಗೂಡಬೇಕೆಂದು ಸೋಲಿಡಾರಿಟಿ ಯೂತ್ ಮೂವೆಂಟ್ ಈ ಮೂಲಕ ಕರೆ ನೀಡುತ್ತದೆ ಎಂದು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ Mob: 70199 51060 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬೆಳೆ ಹಾನಿ: ಎಕರೆಗೆ 25 ಸಾವಿರ ಪರಿಹಾರ ನೀಡುವಂತೆ ಒತ್ತಾಯಿಸಿ ಎಐಕೆಕೆಎಂಎಸ್‌ ಪ್ರತಿಭಟನೆ

ಕಲಬುರಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟಕ್ಕೆ ಕೂಡಲೇ ಪರಿಹಾರವನ್ನು ಬಿಡುಗಡೆ...

ಚಿಕ್ಕಬಳ್ಳಾಪುರ | ಮಂತ್ರಾಲಯದಲ್ಲಿ ಡಾ.ಕೈವಾರ ಶ್ರೀನಿವಾಸ್‌ರವರಿಗೆ ಕನ್ನಡಸಿರಿ ಪ್ರಶಸ್ತಿ ಪ್ರದಾನ

ಮಂತ್ರಾಲಯದ ಸದ್ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಪ್ರಪ್ರಥಮ ಅಂತಾರಾಜ್ಯ ಕನ್ನಡ...

ಕೋಲಾರ | ರಸ್ತೆ ವಿಸ್ತರಣೆಗೆ ಕಾನೂನು ಬಾಹಿರವಾಗಿ ಜಾಗ ಅತಿಕ್ರಮಣ; ಕುರ್ಕಿ ರಾಜೇಶ್ವರಿ ಆರೋಪ

ಕೋಲಾರ ತಾಲೂಕಿನ ನರಸಾಪುರ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿಗೆ...

ವಿಜಯಪುರ | ಬಿಜೆಪಿ ಮುಖಂಡ ರವೀಂದ್ರ ಲೋಣಿ ಮಾತಿಗೆ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಿರುಗೇಟು

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಅಭಿವೃದ್ಧಿ ಆಗಿಲ್ಲ....

Download Eedina App Android / iOS

X