ಶಿವಮೊಗ್ಗದ ಜಿಲ್ಲಾ ಕಾಂಗ್ರೇಸ್ ವತಿಯಿಂದ ಯೋಧನಿಗೆ ಗೌರವಪೂರ್ವಕ ಅಭಿನಂದನೆ ಹಾಗೂ ಸನ್ಮಾನ ಮಾಡಲಾಯಿತು.
ಕಾಶ್ಮೀರದಲ್ಲಿ ನಡೆದ ಪಹಾಲ್ಗಮ್ ಉಗ್ರರ ದಾಳಿಗೆ ಪ್ರತಿ ದಾಳಿಯಾಗಿ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯನ್ನು ಭಾರತ ಸೇನೆ ನಡೆಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ದಾಳಿಯನ್ನು ಎದುರಿಸಿದ ಯೋಧರಲ್ಲಿ ನಮ್ಮ ಶಿವಮೊಗ್ಗ ಮೂಲದ ನಮ್ಮ ಸೇನೆಯ ಹೆಮ್ಮೆಯ ಯೋಧ ವಿಜಯ್ ಕುಮಾರ್ ಅವರು ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪ್ರಥಮ ಬಾರಿಗೆ ಶಿವಮೊಗ್ಗಕ್ಕೆ ಇಂದು ಆಗಮಿಸಿದರು.

ಶಿವಮೊಗ್ಗ ಜಿಲ್ಲಾ NSUI ವತಿಯಿಂದ ಇವರನ್ನು ಗೌರವಪೂರ್ವಕವಾಗಿ ಅದ್ದೂರಿಯಾಗಿ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಯುವ ಕಾಂಗ್ರೆಸ್ ಮುಖಂಡರಾದ ಸಿಜಿ ಮಧುಸೂದನ್, ಚೇತನ್ ಕೆ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರ್ಷಿತ್ ಗೌಡ, NSUI ಅಧ್ಯಕ್ಷರಾದ ವಿಜಯಕುಮಾರ್, ಯುವ ಕಾಂಗ್ರೆಸ್ ಶಿವಮೊಗ್ಗ ನಗರಾಧ್ಯಕ್ಷರಾದ ಚರಣ್ NSUI ಕಾರ್ಯಾಧ್ಯಕ್ಷರಾದ ಕಾಟಿಕೆರೆ, ರವಿ, ಯುವ ಕಾಂಗ್ರೆಸ್ ಹಾಗೂ NSUI ಪದಾಧಿಕಾರಿಗಳಾದ ಅಬ್ದುಲ್ ಸತ್ತಾರ್ ‘ಶಿವಕುಮಾರ್ ,ಧನರಾಜ್, ಗೌತಮ್, ರವಿ ,ಚಂದ್ರೋಜಿ, ವರುಣ್, ಸುಭಾನ್, ಪರಾಜ್ ತೌಪಿಕ್, ಅರ್ಫತ್, ಅಭಿಷೇಕ್, ಶ್ರೀಕಾಂತ್, ಜೀವನ್, ನಂದೀಶ್, ಇನ್ನು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.