ಶಿವಮೊಗ್ಗ | ದೇಹದ ಮೋಹ ಮರೆತು ವಚನ ಸಾಹಿತ್ಯ ಬೆಳೆಸಿದವರು ಡಾ.ಫ.ಗು.ಹಳಕಟ್ಟಿ : ಡಾ ಬಸವ ಮರುಳಸಿದ್ಧ ಸ್ವಾಮೀಜಿ

Date:

Advertisements

ಶಿವಮೊಗ್ಗ,ದೇಹದ ಮೇಲಿನ ಮೋಹ ಮರೆತು ವಚನ ಸಾಹಿತ್ಯ ಬೆಳೆಸಿದವರು ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ಎಂದು ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮಿಗಳು ಹೇಳಿದರು.

ಅವರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ವತಿಯಿಂದ ನಡೆದ ಡಾ.ಫ.ಗು.ಹಳಕಟ್ಟಿರವರ ಜನ್ಮದಿನ ಮತ್ತು ವಚನ ಸಾಹಿತ್ಯ ಸಂರಕ್ಷಣೆ ದಿನಾಚರಣೆ ಯಲ್ಲಿ ಮಾತನಾಡಿದರು..

ಬಣಜಿಗ ಸಮುದಾಯದ ಮೂಲಪುರುಷ ಗುಜರಾತಿನ ಆದಯ್ಯನವರಂತೆ ಹಳಕಟ್ಟಿ ಕೆಲಸ ಮಾಡಿದರು.ತನ್ನ ಮಗ ತೀರಿಕೊಂಡ ಮೇಲೆ ಸಂಪೂರ್ಣ ವಚನ ಸಂಗ್ರಹ ಮಾಡುವುದರಲ್ಲಿ ತೊಡಗಿ ಒಂದು ಸಾವಿರಕ್ಕೂ ಹೆಚ್ಚು ವಚನ ಸಂಗ್ರಹ ಮಾಡಿದರು. ಅದಕ್ಕೂ ಮೊದಲು ಕೇವಲ 50 ಕ್ಕಿಂತ ಕಡಿಮೆ ವಚನಗಳಿದ್ದವು. ತಾವು ಸಂಗ್ರಹಿಸಿದ ವಚನಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲು ತಮ್ಮ ಸ್ವಂತ ಮನೆ ಮಾರಿ ಮುದ್ರಣಾಲಯ ಸ್ಥಾಪನೆ ಮಾಡಿ ವಚನ ಸಾಹಿತ್ಯ ಸಂಗ್ರಹ ಮಾಡಿದರು ಎಂದರು.

Advertisements

ಆಲೂರು ವೆಂಕಟರಾಯರ ಜೊತೆ ಬಾಂಬೆಯಲ್ಲಿ ಲಾ ಶಿಕ್ಷಣ ಪಡೆದ ಇವರು ಮುಂದೆ ಶಿವಾನುಭವ ಎಂಬ ಮಾಸಿಕ ಪತ್ರಿಕೆ ಹೊರಡಿಸಿದರು..ಜೊತೆಗೆ ಕನ್ನಡಿಗರಿಗಾಗಿ ನವ ಕರ್ನಾಟಕ ಎಂಬ ವಾರಪತ್ರಿಕೆ ಸ್ಥಾಪಿಸಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದರು. ಬಿಜಾಪುರದ ನಗರಸಭೆ ಅಧ್ಯಕ್ಷ ರಾಗಿ ಇಡೀ ನಗರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು ಎಂದು ವಿವರಿಸಿದರು.

ಮುಂಬೈ ಸರ್ಕಾರದಿಂದ ರಾವ್ ಬಹದ್ದೂರ್ ಪ್ರಶಸ್ತಿ ಪಡೆದರು. ವಚನಗಳನ್ನು ಸಂಗ್ರಹಿಸಿ ಇವರು ಜನ ಸಾಮಾನ್ಯರಿಂದ ವಚನ ಪಿತಾಮಹ ವಚನ ಗುಮ್ಮಟ ಎಂಬ ಬಿರುದು ಪಡೆದರು.ಇಂದು ಇಪ್ಪತ್ತು ಸಾವಿರಕ್ಕೂ ಹೆಚ್ಚು ವಚನ ಸಂಗ್ರಹವಿದೆ ಎಂದರು.

ಕರ್ನಾಟಕ ಸರ್ಕಾರ ಕೂಡ ವಚನ ಸಾಹಿತ್ಯಕ್ಕೆ ಆದ್ಯತೆ ನೀಡಿ ಕಡಿಮೆಯಾದ ಬೆಲೆಯಲ್ಲಿ ಪುಸ್ತಕ ಮುದ್ರಿಸಿ ಜನರಿಗೆ ನೀಡಿದೆ ಎಂದು ಹೇಳಿದರು. ಫ.ಗು.ಹಳಕಟ್ಟಿಯವರು ಶ್ರೀ ಗಂಧದ ಮರವಿದ್ದಂತೆ . ಅವರು ತೀರಿಕೊಂಡರೂ ಕೂಡ ಅವರು ಮಾಡಿದ ಕೆಲಸ ನಾಡಿನಾದ್ಯಂತ ಕೆಂಪು ಬೀರುತ್ತಲೇ ಇದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗದ ಸಹಾಯಕ ನಿರ್ದೇಶಕ ಉಮೇಶ್ ಸ್ವಾಗತಿಸಿದರು.ವೇದಿಕೆಯಲ್ಲಿ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್, ಗ್ಯಾರಂಟಿ ಯೋಜನೆಯ ಅಧ್ಯಕ್ಷ ಚಂದ್ರಭೂಪಾಲ್,ನೃಪತುಂಗ ನಿರೂಪಣೆ ಮಾಡಿದರು. ಹೊಸನಗರದ ಅಭಿನವ ಚನ್ನಬಸವ ಸ್ವಾಮೀಜಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X