ಶಿವಮೊಗ್ಗ | ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ; ಸಭೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಜಟಾಪಟಿ

Date:

Advertisements

ಸಾಗರದ ಸ್ಥಾಯಿ ಸಮಿತಿ ಆಯ್ಕೆ ಸಂಬಂಧ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಹೈಡ್ರಾಮ ನಡೆದಿದೆ. ಆಡಳಿತರೂಢ ಬಿಜೆಪಿ 11 ಸದಸ್ಯರನ್ನು ಘೋಷಣೆ ಮಾಡಿದ ಬೆನ್ನಲ್ಲೆ ವಿಪಕ್ಷ ಕಾಂಗ್ರೆಸ್‌, ತಮಗೆ ಬಹುಮತ ಇದ್ದು ತಾವು ಘೋಷಣೆ ಮಾಡುವ ಸ್ಥಾಯಿ ಸಮಿತಿಯನ್ನು ಅಂತಿಮಗೊಳಿಸಿ ಎಂದು ಪಟ್ಟು ಹಿಡಿದಿತ್ತು.

ಮೈತ್ರಿ ಪಾಟೀಲ್‌ ಅಧ್ಯಕ್ಷತೆಯಲ್ಲಿ ಗುರುವಾರ ನಗರಸಭೆ ಮೊದಲ ಸಾಮಾನ್ಯ ಸಭೆ ಆಯೋಜನೆಗೊಂಡಿತ್ತು. ಸಭೆಯಲ್ಲಿ ಮೊದಲ ವಿಷಯವಾಗಿ ಸ್ಥಾಯಿ ಸಮಿತಿ ಆಯ್ಕೆ ವಿಷಯ ಪ್ರಸ್ತಾಪಿಸಲಾಯಿತು. ಆಡಳಿತ ಪಕ್ಷದ ಪರವಾಗಿ ಸದಸ್ಯ ಟಿ.ಡಿ.ಮೇಘರಾಜ್‌ ಮಾತನಾಡಿ, ಕಾನೂನು ಪ್ರಕಾರ ನಿಯಮಾನುಸಾರ ಸ್ಥಾಯಿ ಸಮಿತಿ ಸದಸ್ಯರನ್ನು ನೇಮಕ ಮಾಡುವಂತೆ ಮನವಿ ಮಾಡಿದರು.

ಬಿಜೆಪಿ ಸದಸ್ಯ ಗಣೇಶ್ ಪ್ರಸಾದ್‌ ಆಡಳಿತ ಮತ್ತು ವಿಪಕ್ಷ ಸದಸ್ಯರನ್ನು ಒಳಗೊಂಡ 11 ಸದಸ್ಯರ ಹೆಸರನ್ನು ಘೋಷಣೆ ಮಾಡಿದರು. ಇದಕ್ಕೆ ವಿಪಕ್ಷ ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಸೈಯದ್ ಜಾಕೀರ್, ತಸೀಫ್, ರವಿಕುಮಾ‌ರ್ ಇನ್ನಿತರರು ವಿರೋಧ ವ್ಯಕ್ತಪಡಿಸಿ. ಸಭೆಯಲ್ಲಿ ಬಹುಮತದ ಮೂಲಕ ಆಯ್ಕೆ ನಡೆಸಿ. ನಿಮ್ಮಲ್ಲಿ ಬಹುಮತ ಇಲ್ಲ ಎಂದು ಪಟ್ಟು ಹಿಡಿದರು.

Advertisements
WhatsApp Image 2025 03 06 at 8.40.04 PM

ಅಧ್ಯಕ್ಷೆ ಮೈತ್ರಿ ಪಾಟೀಲ್‌ ಸಭೆಯಲ್ಲಿನ ಬಹುಮತದ ತೀರ್ಮಾನದಂತೆ ಸ್ಥಾಯಿ ಸಮಿತಿಗೆ 11 ಸದಸ್ಯರನ್ನು ಆಯ್ಕೆ ಮಾಡಿದ್ದಾಗಿ ಘೋಷಣೆ ಮಾಡಿದರು. ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ಹೆಸರು ಘೋಷಣೆ ಮಾಡಲು ಅಡ್ಡಿಪಡಿಸಿದರು. ಆದರೂ ಮೈತ್ರಿ ನಿಮ್ಮಲ್ಲಿ ಬಹುಮತ ಇಲ್ಲ ಎಂದು ಪಟ್ಟು ಹಿಡಿದರು. ಅಧ್ಯಕ್ಷೆ ಮೈತ್ರಿ ಪಾಟೀಲ್‌ ಸಭೆಯಲ್ಲಿನ ಬಹುಮತದ ತೀರ್ಮಾನದಂತೆ ಸ್ಥಾಯಿ ಸಮಿತಿಗೆ 11 ಸದಸ್ಯರನ್ನು ಆಯ್ಕೆ ಮಾಡಿದ್ದಾಗಿ ಘೋಷಣೆ ಮಾಡಿದರು.

ಈ ಸಂದರ್ಭದಲ್ಲಿ ವಿಪಕ್ಷ ಸದಸ್ಯರು ಹೆಸರು ಘೋಷಣೆ ಮಾಡಲು ಅಡ್ಡಿಪಡಿಸಿದರು. ಆದರೂ ಮೈತ್ರಿ ಪಾಟೀಲ್ ಹೆಸರು ಘೋಷಣೆ ಮಾಡಿ ಸಭೆಯಿಂದ ಹೊರಗೆ ನಡೆದರು. ಅವರ ಹಿಂದೆಯೆ ಆಡಳಿತ ಪಕ್ಷದ ಎಲ್ಲ ಸದಸ್ಯರು ಹೊರಗೆ ಹೊರಟರು. ಸದಸ್ಯರು ನಗರಸಭೆ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ದಿಕ್ಕಾರ ಕೂಗಿದ ಘಟನೆ ನಡೆಯಿತು.

ಏಕಾಏಕಿ ಸಭೆಯನ್ನು ಬರಕಾಸ್ತುಗೊಳಿಸಿ ಸದಸ್ಯರೆಲ್ಲರ ಒಮ್ಮತದ ಅಭಿಪ್ರಾಯ ಕೇಳದೆ ಸ್ಥಾಯಿ ಸಮಿತಿ ಹೆಸರು ಘೋಷಣೆ ಮಾಡಿ ಸಭೆಯಿಂದ ಹೊರಗೆ ನಡೆದ ಅಧ್ಯಕ್ಷರ ವಿರುದ್ಧ ಶಾಸಕರಾದಿಯಾಗಿ ವಿಪಕ್ಷ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ಹೆಸರು ಘೋಷಣೆ ಕಾನೂನು ಬದ್ದವಾಗಿಲ್ಲ. ಸಭೆಯಲ್ಲಿ ಅವರಿಗೆ ಬಹುಮತ ಇಲ್ಲ. ಆದರೂ ಹೆಸರು ಘೋಷಣೆ ಮಾಡಿರುವ ಕ್ರಮ ಕಾನೂನು ಬಾಹಿರವಾಗಿದ್ದು, ಸಭೆಯನ್ನು ಅಸಿಂಧುಗೊಳಿಸಿ, ಅವರು ಘೋಷಣೆ ಮಾಡಿರುವ ಹೆಸರನ್ನು ಮಾನ್ಯ ಮಾಡಬಾರದು ಎಂದರು.

WhatsApp Image 2025 03 06 at 8.40.05 PM

ಪೌರಾಯುಕ್ತ ಎಚ್‌.ಕೆ.ನಾಗಪ್ಪ, ಸ್ಥಾಯಿ ಸಮಿತಿ ಸದಸ್ಯರ ಹೆಸರನ್ನು ಘೋಷಣೆ ಮಾಡುವುದು ಸ್ಥಾಯಿ ಸಮಿತಿ ಸದಸ್ಯರ ಹೆಸರನ್ನು ಘೋಷಣೆ ಮಾಡುವುದು ಚುನಾವಣಾಧಿಕಾರಿಯೂ ಆಗಿರುವ ನಗರಸಭೆ ಅಧ್ಯಕ್ಷರ ಪರಮಾಧಿಕಾರ. ಇದಕ್ಕೆ ನಾನು ಆಕ್ಷೇಪಣೆ ವ್ಯಕ್ತಪಡಿಸಲು ಬರುವುದಿಲ್ಲ. ಅವರು ಘೋಷಣೆ ಮಾಡುವ ಮೊದಲು ಕಾನೂನಿನ ಬಗ್ಗೆ ಅವರಿಗೆ ತಿಳಿಸಿದ್ದೇನೆ. ನೀವು ಅಧ್ಯಕ್ಷರ ನಿರ್ಣಯಕ್ಕೆ ಆಕ್ಷೇಪ ಸಲ್ಲಿಸಿದರೆ ನಾನು ಅದನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿ ಕೊಡುತ್ತೇನೆ” ಎಂದು ಸಭೆಗೆ ಪ್ರತಿಕ್ರಿಯಿಸಿದರು.

ಶಾಸಕ ಗೋಪಾಲ್ಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿ, “ಬಿಜೆಪಿಯವರಿಗೆ ಕಾನೂನು ಬದ್ದವಾಗಿ ಆಡಳಿತ ನಡೆಸಲು ಮನಸ್ಸಿದ್ದಂತೆ ಕಾಣುತ್ತಿಲ್ಲ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆಯದೆ ಸ್ಥಾಯಿ ಸಮಿತಿ ಹೆಸರು ಘೋಷಣೆ ಮಾಡಿ ಇನ್ನು ಚರ್ಚಿಸುವ ವಿಷಯ ಇದ್ದಾಗ್ಯೂ ಸಭೆಯಿಂದ ಪಲಾಯನಗೈದಿದ್ದಾರೆ ಎಂದರು.ಟಿ.ಡಿ.ಮೇಘರಾಜ್ ಕಾನೂನು ಪಂಡಿತರಂತೆ ಮಾತನಾಡುತ್ತಾರೆ. ಹಿಂದೆ ಒಳಚರಂಡಿ ಕಾಮಗಾರಿಗೆ ನಗರಸಭೆ ಅನುದಾನ 20 ಕೋಟಿ ಬಳಸಿ ಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕನಾಗಿ ಊರಿನ ಅಭಿವೃದ್ದಿಗೆ ಎಲ್ಲ ರೀತಿಯ ಸಹಕಾರ ಕೊಡಲು ನಾನು ಬದ್ಧನಿದ್ದೇನೆ. ಆದರೆ ಪಲಾಯನ ರಾಜಕಾರಣ ಮಾಡುವ ಇವರಿಗೆ ಯಾವ ರೀತಿ ಬೆಂಬಲ ಕೊಡಬೇಕು. ಸಾಮಾನ್ಯ ಸಭೆಯಲ್ಲಿ ಬಿಜೆಪಿಗೆ ಬಹುಮತ ಇರಲಿಲ್ಲ. ಆದರೂ ಸ್ಥಾಯಿ ಸಮಿತಿ ಘೋಷಣೆ ಮಾಡಿ ಅಧ್ಯಕ್ಷರು ಸಭೆಯಿಂದ ಹೊರನಡೆದರು. ಈ ರೀತಿ ರಾಜಕಾರಣ ಮಾಡುವ ಇವರಿಗೆ ಯಾವ ರೀತಿ ಬೆಂಬಲ ಕೊಡಬೇಕು. ನಮ್ಮ ಸದಸ್ಯರು ಡಿಸೆಂಟ್ ಬರೆದಿದ್ದು, ಜಿಲ್ಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕೆ ಕಳಿಸಲಾಗುತ್ತದೆ. ಇದರ ವಿರುದ್ದ ಕಾನೂನು ಹೋರಾಟ ಸಹ ನಡೆಸಲಾಗುತ್ತದೆ” ಎಂದರು.

WhatsApp Image 2025 03 06 at 8.40.06 PM

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಧ್ಯಕ್ಷೆ ಮೈತ್ರಿ ಪಾಟೀಲ್‌, “ರೂಲಿಂಗ್ ನೀಡಿ ನಾವು ಹೊರ ಬಂದ ನಂತರ ಸಭೆ ಮುಕ್ತಾಯವಾಗಿದೆ. ಸಭೆ ಮುಕ್ತಾಯವಾದರೂ ವಿಪಕ್ಷದವರು ಮತ್ತೆ ಸಭೆ ನಡೆಸಿರುವುದು ಎಷ್ಟು ಸರಿ. ನಗರಸಭೆ ನಿಯಮಾನುಸಾರ ಆಡಳಿತ ನಡೆಸಲು ಬಿಡುತ್ತಿಲ್ಲ. ಆಯುಕ್ತರು, ಅಧಿಕಾರಿಗಳನ್ನು ಬೆದರಿಸಿ ನಗರಸಭೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಅಧ್ಯಕ್ಷೆ, ಉಪಾಧ್ಯಕ್ಷರು ಅಧಿಕಾರ ನಡೆಸುತ್ತಿರುವ ಸಂದರ್ಭದಲ್ಲಿ ಇಂತಹ ದಬ್ಬಾಳಿಕೆ ನಡೆಸುತ್ತಿರುವುದು ಕಾಂಗ್ರೆಸ್ಸಿನ ಮಹಿಳಾ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ. ಇದನ್ನು ಖಂಡಿಸಲಾಗುವುದು” ಎಂದು ತಿಳಿಸಿದರು.

ಇಷ್ಟೆಲ್ಲಾ ಆದ ನಂತರ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸಂಜೆ ವೇಳೆಗೆ ಮನವಿ ನೀಡಿದ ಸಾಗರದ ಕಾಂಗ್ರೆಸ್ ಮುಖಂಡರು ಈ ಕೂಡಲೇ ಸ್ಥಾಯಿ ಸಮಿತಿ ರಚನೆ ಸಂಬಂಧ ಅಧ್ಯಕ್ಷರ ಕಾನೂನು ಬಾಹಿರ ನಿರ್ಣಯವನ್ನು ವಜಾ ಮಾಡಬೇಕು. ಮತ್ತೆ ಸದಸ್ಯರ ಸಭೆ ಕರೆಯಬೇಕು. ಕಾಯಿದೆ 56 ಸೆಕ್ಷನ್ ಅಡಿ ಚುನಾವಣೆ ನಡೆಸಿ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಕಾಂಗ್ರೆಸ್‌ ಸದಸ್ಯರು ಮನವಿ ನೀಡಿದರು.

ಇದನ್ನೂ ಓದಿ: ಶಿವಮೊಗ್ಗ | ಕಲಿಕಾ ಹಬ್ಬ; ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾದ ಸರ್ಕಾರಿ ಶಾಲೆ

ಈ ಸಂದರ್ಭದಲ್ಲಿ ಮಂಡಗಳಲೆ ಗಣಪತಿ, ಲಲಿತಮ್ಮ, ಸಬೀನಾ ಪರ್ವಿನ್, ಶಾಹಿನಾಬಾನು, ಮದುಮಾಲತಿ, ಕುಸುಮಾ ಸುಬ್ಬಣ್ಣ, ನಾದಿರಾ, ಶಂಕರ್ ಅಳ್ವೆಕೋಡಿ, ಜಾಕಿರ್, ಉಮೇಶ್, ಶಂಕರ್, ಸರಸ್ವತಿ ನಾಗರಾಜ್, ಸುರೇಶ್ ಬಾಬು, ದಿನೇಶ್ ಡಿ ಹಾಗೂ ಪಕ್ಷದ ಮುಖಂಡರುಗಳು ಹಾಜರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X