ಶಿವಮೊಗ್ಗದ ರಿಪ್ಪನ್ ಪೇಟೆಯಲ್ಲಿ ಅತಿಯಾದ ಕೆಲಸದ ಒತ್ತಡ ಹಾಗೂ ಕಡಿಮೆ ಸಂಬಳದಿಂದ ಬೇಸತ್ತ ಐದು ಜನ ಆಶಾ ಕಾರ್ಯಕರ್ತೆಯರು ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಆಶಾ ಕಾರ್ಯಕರ್ತೆಯರಾದ ಶರಾವತಿ , ಪದ್ಮಾವತಿ , ನಗೀನಾ , ಸುಶೀಲ ಮತ್ತು ಹಸೀನಾ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
“ನಾವುಗಳು ಸುಮಾರು 16 ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಮಾಸಿಕ ವೇತನ ರೂ. 5,000=00ಗಳು ಮತ್ತು ಗೌರವ ಧನ ರೂ.2,000=00ಗಳನ್ನು ನೀಡುತ್ತಿದ್ದು, ಇದರಿಂದ ನಮ್ಮಗಳ ಜೀವನ ನಿರ್ವಾಹಣೆ ಕಷ್ಟವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಮತ್ತು ಕೆಲಸದ ಅತಿಯಾದ ಒತ್ತಡದಿಂದ ನಮ್ಮ ಆರೋಗ್ಯ ತುಂಬಾ ಹದಗಟ್ಟಿರುತ್ತದ. ನಮಗೆ ಗರ್ಭಿಣಿ, ಮತ್ತು ಬಾಣಂತಿ ಆರೈಕ, ಮಕ್ಕಳ ಆರೈಕೆ, ಮಕ್ಕಳ ಲಸಿಕೆ ಕಾರ್ಯಕ್ರಮ, ಕಫ ಸಂಗ್ರಹಣೆ, ಲಾರ್ವ ಸರ್ವೆ, ಮನ ಮನೆ ಸಮೀಕ್ಷೆ, ಮೊಬೈಲ್ ಆಪ್ ಮೂಲಕ ಎನ್.ಸಿ.ಡಿ ಕಾರ್ಯಕ್ರಮ, ಅಂದತ್ವ ನಿವಾಹರಣಾ ಕಾರ್ಯಕ್ರಮ ಮತ್ತು 1-18 ವರ್ಷ ದೊಳಗಿನ ಮಕ್ಕಳ ಆಧಾರ್ ಕಾರ್ಡ್ ಸಂಗ್ರಹಣೆ ಇನ್ನಿತರ ಹಲವಾರು ಕೆಲಸಗಳನ್ನು ನಾವುಗಳು ಮಾಡಬೇಕಾಗಿದ್ದು,
ಇದರಿಂದ ನಮಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಉಂಟಾಗುತ್ತಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ತಾವುಗಳು ಪರಿಶೀಲಿಸಿ, ಕೆಲಸದ ಒತ್ತಡ ಹೆಚ್ಚಿದ್ದು, ಸಂಬಳ ಕಡಿಮೆ ಇದ್ದು ಜೀವನ ನಿರ್ವಾಹಣೆ ಮಾಡಲು ತೊಂದರೆಯಾಗುತ್ತಿದ್ದು, ಈ ಕಾರಣದಿಂದ ನಮ್ಮಗಳ ಕೆಲಸಕ್ಕೆ ಸಾಮೂಹಿಕ ರಾಜಿನಾಮೆ” ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.