ಶಿವಮೊಗ್ಗ | ನಂಜಪ್ಪ ಲೈಫ್ ಕೇರ್ ನಲ್ಲಿ ಮೆದುಳಿನ ರಕ್ತಸ್ರಾವ ತಪ್ಪಿಸಿದ ತಜ್ಞ ವೈದ್ಯರು : ಯುವತಿಯ ಜೀವ ಉಳಿಸಿದ ಸಣ್ಣ ರಂಧ್ರದ ಚಿಕಿತ್ಸೆ

Date:

Advertisements

ಶಿವಮೊಗ್ಗ, 21 ವರ್ಷದ ಯುವತಿಯು ತಲೆನೋವಿನಿಂದ ಬಳಲುತ್ತಿದ್ದಾಗ ಪರೀಕ್ಷಿಸಿದಾಗ ಮೆದುಳಿನ ಎಂ ಆರ್ ಐ ಎಡಭಾಗದಲ್ಲಿರುವ ಪುಮುಖ ರಕ್ತನಾಳದಲ್ಲಿ ಬಲೂನ್ ತರಹದ ಊತ (ಅರಿಸಮ್) ಕಂಡುಬಂದಿದೆ.

ಮೆದುಳು ರಕ್ತಸ್ರಾವ ವಾಗುವ ಸಂದರ್ಭ ಇತ್ತು. ಸಣ್ಣ ರಂಧ್ರದ ಮೂಲಕ ಚಿಕಿತ್ಸೆ ಮಾಡಿ ನಂಜಪ್ಪ ಲೈಫ್ ಕೇರ್ ವೈದ್ಯರು ಜೀವವುಳಿಸಿದ ಘಟನೆ ನಡೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಆಸ್ಪತ್ರೆಯ ಇಂಟರ್ ವೆನ್ಶನಲ್ ರೇಡಿಯಾಲಜಿಸ್ಟ್ ಡಾ!! ನಿಶಿತಾ ಮತ್ತು ಅರವಳಿಕೆ ತಜ್ಞ ಡಾ!! ಪ್ರವೀಣ್ ಕುಮಾರ್, ಮೆದುಳಿನ ವೈದ್ಯಕೀಯ ಭಾಷೆಯಲ್ಲಿ “ಡಿಸ್ಸಂಗ್ ಅರಿಸಮ್” ಎಂದು ಕರೆಯಲ್ಪಡುವ ಈ ರೀತಿಯ ಊತವು ಗಂಭೀರ ಸಮಸ್ಯೆಯನ್ನು ಉಂಟುಮಾಡುತ್ತದೆ.

Advertisements

ಈ ರೀತಿಯ ಊತವು ಯುವತಿಯ ಮೆದುಳಿನಲ್ಲಿ 9 ಮಿಲಿಮೀಟರ್ ದೊಡ್ಡ ಗಾತ್ರ ಮತ್ತು ಅಪಾಯಕಾರಿಯಾಗಿತ್ತು. ಬಲೂನ್ ತರಹ ಊದಿರುವ ಈ ಊತವು ಹೊಡೆದು ಹೋಗಿದ್ದರೆ ಮೆದುಳಿನಲ್ಲಿ ತೀವ್ರ ರಕ್ತಸ್ರಾವ ಉಂಟಾಗಿ ಸಾವು ಅಥವಾ ಜೀವಿತಾವಧಿಯ ಅಂಗವೈಕಲ್ಯಕ್ಕೆ ಕಾರಣವಾಗುತ್ತಿತ್ತು ಎಂದರು.

ಎಂ.ಆರ್ ಐ ಸ್ಕ್ಯಾನ್ ರಿಪೋರ್ಟ್ ನೋಡಿದಾಗ ಈ ಸಮಸ್ಯೆಗೆ ತಕ್ಷಣದ ಚಿಕಿತ್ಸೆ ಅಗತ್ಯವೆಂದು ನಿರ್ಧರಿಸಲಾಯಿತು. ಆದರೆ ರಕ್ತನಾಳದಲ್ಲಿರುವ ಊತದ ಆಕಾರ ಮತ್ತು ಸ್ಥಳದಿಂದದಾಗಿ ತೆರೆದ ಮೆದುಳಿನ ಶಸ್ತ್ರಚಿಕಿತ್ಸೆ (ಓಪನ್ ನ್ಯೂರೋಸರ್ಜರಿ) ಸರಿಯಾದ ಆಯ್ಕೆಯಲ್ಲ ಎಂದು ತೀರ್ಮಾನಿಸಿ “ವೋ ಡ್ರೈವರ್ಟರ್ ಬಳಸಿ ಪ್ರಮುಖ ರಕ್ತನಾಳ ಪುನರ್ನಿರ್ಮಾಣ” ಎಂಬ ವಿಶೇಷ, ಸುಧಾರಿತ ವಿಧಾನವನ್ನು ಮಾಡಲು ನಿರ್ಧರಿಸಲಾಯಿತು ಎಂದರುಈ ರೀತಿಯ ಕಾರ್ಯವಿಧಾನಗಳನ್ನು ಸುಸಜ್ಜಿತ, ಉನ್ನತ ಮತ್ತು ಆಧುನಿಕ ತಂತ್ರಜ್ಞಾನನವನ್ನು ಒಳಗೊಂಡ ಅನುಭವಿ ನ್ಯೂರೋ ಇಂಟರ್ವೆನ್ನನಲಿಜಿಸ್ಟ್ ಗಳಿರುವ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತ್ತದೆ.“ಫೋ ಡ್ರೈವರ್ಟರ್” ಎನ್ನುವುದು ಒಂದು ಸಣ್ಣ, ಮೃದುವಾದ ಜಾಲರಿಯ(ಮೆಶ್) ಕೊಳವ (ಅತ್ಯಂತ ಸೂಕ್ಷ್ಮವಾದ ಜಾಲದಂತೆ) ಇದನ್ನು ಮುಖ್ಯ ರಕ್ತನಾಳದೊಳಗೆ ಅಂದರೆ ಊತವಿರುವ ಜಾಗದ ಪಕ್ಕದಲ್ಲಿ ಇರಿಸಲಾಗುತ್ತದೆ.

ಇದು ಊತದ ಕಡೆಗೆ ಸಂಚರಿಸುವ ರಕ್ತವನ್ನು ತಡೆದು ಬೇರೆ ರಕ್ತನಾಳಕ್ಕೆ ರಕ್ತ ಸಂಚರಿಸಲು ಅನುವುಮಾಡಿಕೊಡುತ್ತದೆ. ಇದರಿಂದಾಗಿ ಊತವಿರುವ ರಕ್ತನಾಳದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಚಿಕಿತ್ಸೆಯ ನಂತರ ರಕ್ತಸಂಚಾರ ಕಡಿಮೆಯಾಗುವುದರಿಂದ ಕಾಲಾಂತರದಲ್ಲಿ ಊತವು ನಿಧಾನವಾಗಿ ಕುಗ್ಗುತ್ತದೆ ಮತ್ತು ಮೆದುಳಿನಲ್ಲಿ ರಕ್ತ ಸ್ರಾವವಾಗುವುದನ್ನು ತಡೆಗಟ್ಟುತ್ತದೆ ಎಂದರು. ಈ ಕಾರ್ಯವಿಧಾನವನ್ನು ಬಳಸಿ ತಮ್ಮ ತಂಡವು ಅನಸ್ತೇಶಿಯಾ ಅಡಿಯಲ್ಲಿ ಮೆದುಳಿನ ಪಮುಖ ರಕ್ತನಾಳ ತಲುಪಲು ತೊಡೆಯಲ್ಲಿ ಸಣ್ಣ ಸೂಜಿ ಗಾತ್ರದ ರಂಧ್ರದ ಮೂಲಕ ತೆಳುವಾದ ಟ್ಯೂಬ್ ಅನ್ನು ಬಳಸಿ ಊತವಿರುವ ಮೆದುಳಿನ ರಕ್ತನಾಳದೊಳಗೆ ತಲುಪಿ ಪೂ ಡ್ರೈವರ್ಟರ್ ಸೂಕ್ಷ್ಮಜಾಲರಿ(ಮೆಶ್) ಇರಿಸಿತು.

ಇದು ಊತವಿರುವ ರಕ್ತನಾಳಕ್ಕೆ ರಕ್ತ ಸಂಚರಿಸುವುದನ್ನು ನಿಲ್ಲಿಸಿ, ಊತವಿರುವ ರಕ್ತನಾಳವು ನೈಸರ್ಗಿಕವಾಗಿ ಗುಣವಾಗಲು ಸಹಾಯ ಮಾಡುತ್ತದೆ ಎಂದರು. ಯಶಸ್ವಿ ಚಿಕಿತ್ಸೆಯ ನಂತರ ರೋಗಿಯು ಚೇತರಿಸಿಕೊಂಡು ಯಾವುದೇ ತೊಂದರೆ ಇಲ್ಲದ ಮರುದಿನವೇ ಬಿಡುಗಡೆಯಾಗಿದ್ದಾರೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X