ಶಿವಮೊಗ್ಗ ಈಗ ನಡೆಯುತ್ತಿರುವ ಒಳಮೀಸಲಾತಿ ಸಮೀಕ್ಷೆಯಲ್ಲಿ ಯಾವುದೇ ನೆಲೆ ಇಲ್ಲದ ಅಲೆಮಾರಿ ಜನಾಂಗಗಳು ಬಿಟ್ಟುಹೋಗುವ ಸಂಭವವಿದೆ ಎಂದು ಕರ್ನಾಟಕ ಪ.ಜಾ ಮತ್ತು ಪ.ಪಂಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲೆಮಾರಿ ಸಮುದಾದವರಲ್ಲಿ ಜಾಗೃತಿ ಮೂಡಿಸಲು ಸಮೀಕ್ಷೆಯನ್ನು ಹೋಬಳಿ ಮಟ್ಟದಲ್ಲಿ ಕನಿಷ್ಠ 3 ದಿನಗಳ ಕಾಲ ನಡೆಸುವಂತೆ ಮುಖ್ಯಮಂತ್ರಿಯ ಮೇಲೆ ಒತ್ತಡ ಹೇರಲು ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುವುದು ಎಂದರು.
ಯಾವುದೇ ಸಮುದಾಯಕ್ಕೆ ದತ್ತಾಂಶಗಳು ಇಲ್ಲದೆ ಒಳ ಮೀಸಲಾತಿ ನೀಡಲು ಸಾಧ್ಯವಿಲ್ಲ. ಆದುದರಿಂದಲೇ ಮೇ.5 ರಿಂದ ಮನೆ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡಲಾಗುತ್ತಿದೆ. ಅವಕಾಶ ವಂಚಿತರಾದ ಸಾಮಾಜಿಕ ಕಳಂಕಿತರಾದವರು ಕಣಿ ಹೇಳುವ, ಧಾರ್ಮಿಕ ಭಿಕ್ಷಾಟನೆ ಮಾಡುತ್ತಿದ್ದ ಪ.ಜಾತಿಯ ಅಲೆಮಾರಿಗಳಾಗಿದ್ದಾರೆ ಎಂದರು.
2016 ರಲ್ಲಿ ದೊಂಬರ, ಸುಡುಗಾಡುಸಿದ್ದ, ಕೊರಚ, ಕೊರಮ, ಹಂದಿ ಜೋಗಿ, ಶಿಳ್ಳೆಕ್ಯಾತ, ಬುಡುಗಜಂಗಮ, ಘಂಟಿಚೋರ, ಮುಕ್ರಿ, ಚನ್ನ ದಾಸರ, ಮಾಲದಾಸರ, ಮಾಂಗ್, ಗಾರುವಾಡಿ, ಗೋಸಂಗಿ, ಸಿಂಧೋಳ್ಳು, ಪಾಲೆ, ಅಜಿಲ, ಆದಿಲ ಇತ್ಯಾದಿ 51 ಸಮುದಾಯಗಳು ಅಲೆಮಾರಿಗಳು, ಮುಕ್ತ ಬುಡಕಟ್ಟು ಅತೀ ಸೂಕ್ಷ್ಮ ಎಂದು ಗುರುತಿಸಿದೆ ಎಂದರು.
24 ಜಿಲ್ಲೆಗಳ ಪ್ರವಾಸ ಮಾಡಿ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದೇನೆ. ತಿಳುವಳಿಕೆ ಶಿಕ್ಷಣ ಇಲ್ಲದೆ ಹೊಟ್ಟೆಪಿಗಾಗಿ ವಿವಿಧ ಕೆಲಸ ಮಾಡುತ್ತಿದ್ದಾರೆ. ವೋಟರ್ ಐಡಿ, ಕ್ಯಾಸ್ಟ್ ಚೋಪಡಿಯಲ್ಲಿ ವಾಸಚಾಗಿರುವ ವಿಶೇಷ ತಜ್ಞರ ಆಯೋಗವು ಹೋಬಳಿ ಮಟ್ಟದಲ್ಲಿ ಅಲೆಮಾರಿ ವಿಶೇಷ ಸಮೀಕ್ಷೆ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.
ನಿಗಮದಿಂದ ಪ್ರತ್ಯೇಕ ಸಮೀಕ್ಷೆ ಮಾಡಲು ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆಯೋಗ ಈ ಬಗ್ಗೆ ಕ್ರಮ ಜರುಗಿಸಿಲ್ಲ. ವಿಖಾಸವಿಲ್ಲದೆ ಬದುತ್ತಿರುವ ಈ ಸಮುದಾಯಕ್ಕೆ ಜಿಲ್ಲಾ ಅನುಷ್ಠಾನ ಸಮಿತಿ ನೀಡಬೇಕು. ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂದು ದೂರಿದರು. ಪ್ರವಾಸದಿಂದ ವಿಶೇಷ ಶಿಬಿರ ನಡೆಸಿ ಸ್ಥಳ ಮಹಜರ್ ಮಾಡಿ ವಂಶವೃಕ್ಷ, ಜಾತಿ ಸೆರ್ಟಿಫಿಕೇಟ್ ನೀಡಬೇಕು ಎಂದರು.