ದಿನಾಂಕ 03.05.2025ರಂದು ಈ ಆರೋಪಿಗಳು ರಾಜಾರೋಷವಾಗಿ ಕೇಂದ್ರ ಸರ್ಕಾರದ ವಿರುದ್ಧ ವಕ್ಫ ಕಾಯ್ದೆ ವಿಚಾರವಾಗಿ, ಜಿಲ್ಲಾಧಿಕಾರಿಗಳವರ ಕಚೇರಿಯ ಎದುರು ಭಾಗದಲ್ಲಿ ಹಾಗೂ ಮಹಾವೀರ ಸರ್ಕಲ್ ಮತ್ತು ಅದಕ್ಕೆ ಸೇರಲಾಗುವ ಎಲ್ಲಾ ರಸ್ತೆಗಳನ್ನು ಬಂದು ಮಾಡಿ ರಸ್ತೆಯಲ್ಲಿ ಮೆರವಣಿಗೆಯೊಂದಿಗೆ ಪ್ರತಿಭಟನೆಯನ್ನು ಮಾಡಿದ್ದು ಸುಮಾರು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೂ ಸಾರ್ವಜನಿಕ ಓಡಾಟಕ್ಕೆ ಅಡ್ಡಪಡಿಸಿದ್ದು ಅಲ್ಲದೆ ಪ್ರಚೋದನಾತ್ಮಕ ಭಾಷಣವನ್ನು ಕಾನೂನು ಬಾಹಿರವಾಗಿ ಮಾಡಿ ಸಾರ್ವಜನಿಕ ನೆಮ್ಮದಿಗೆ ಭಂಗ ತಂದಿರುತ್ತಾರೆ ಎಂದು ಆರೋಪಿಸಿ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಶಾಸಕ ಚೆನ್ನಬಸಪ್ಪ ನೇತೃತ್ವದಲ್ಲಿ ಮನವಿ ಸಲ್ಲಿಸಿದ್ದು.
ಈಗಾಗಲೇ ತಿಳಿದಿರುವಂತೆ, ವಕ್ಸ್ ಕಾಯ್ದೆ ವಿಚಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪರಿಶೀಲನೆಗೆ ಒಳಪಟ್ಟಿರುವ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 11753/2025 ರಲ್ಲಿ ಸರ್ಕಾರವು ಪ್ರತಿಭಟನೆಗೆ ಯಾವುದೇ ರೀತಿಯ ಅನುಮತಿಯನ್ನು ಅಥವಾ ಅವಕಾಶವನ್ನು ನೀಡಬಾರದೆಂದು ಸ್ಪಷ್ಟವಾಗಿ ಆದೇಶಿಸಿರುತ್ತದೆ.

ಈ ಮಧ್ಯೆ ದಿನಾಂಕ 29.04.2025 ರಂದು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಸರ್ಕಾರವು ಯಾವುದೇ ಪ್ರತಿಭಟನೆಗೆ ಅನುಮತಿಯನ್ನು ನೀಡುವುದಿಲ್ಲ ಹಾಗೂ ಅವಕಾಶವನ್ನು ಕಲ್ಪಿಸಿ ಕೊಡುವುದಿಲ್ಲ ಎಂದು ವಚನ ಬದ್ಧ ಹೇಳಿಕೆಯನ್ನು (ಅಂಡರ್ ಟೇಕಿಂಗ್), ನೀಡಿದ್ದು ಅದನ್ನು ನ್ಯಾಯಾಲಯವು ತನ್ನ ಆದೇಶದ ಪ್ರತಿಯಲ್ಲಿ ಸಹ ನಮೂದಿಸಲಾಗಿರುತ್ತದೆ ಎಂದು ತಿಳಿಸಿದರು.
ಈ ಬಗ್ಗೆ ಮಾನ್ಯ ನ್ಯಾಯಾಲಯದಲ್ಲಿ ಆದ ಆಗುಹೋಗುಗಳ ಹಾಗೂ ವಿಚಾರಣೆಯ ಉದ್ಭುತ ಭಾಗದ ವಿಡಿಯೋ ಕ್ಲಿಪಿಂಗ್ ಅನ್ನು ಈಗಾಗಲೇ ನೀಡಲಾಗಿದ್ದರು ಸಹ, ಸಾವಿರಾರು ಸಂಖ್ಯೆಯಲ್ಲಿ ಮುಸಲ್ಮಾನ ಬಂಧುಗಳು ರಾಜಾರೋಷವಾಗಿ ಪ್ರತಿಭಟನೆಯ ಬಗ್ಗೆ ಊರಿನಲ್ಲಿಡೆ ಅಬ್ಬರದ ಪ್ರಚಾರವನ್ನು ಮಾಡಿ ದಿನಾಂಕವನ್ನು ನಿಗದಿಪಡಿಸಿಕೊಂಡು ಕಾನೂನುಬಾಹಿರವಾಗಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಾ ಪ್ರಚೋದನಾ ಭಾಷಣಗಳನ್ನು ಮಾಡಿದ್ದು ಆ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಸಹ ಈ ಪ್ರತಿಭಟನೆಯನ್ನು ತಡೆಯದೆ ಪರೋಕ್ಷವಾಗಿ ಸರ್ಕಾರವು ಪ್ರತಿಭಟನೆಗೆ ಅವಕಾಶ ಕಲ್ಪಿಸಿಕೊಟ್ಟು ಪ್ರತಿಭಟನಾಕಾರರಿಗೆ ರಕ್ತಣೆಯನ್ನು ನೀಡಿದ ಬಗ್ಗೆ ಈ ಕೂಡಲೇ ತಪ್ಪಿತಸ್ಥರೆಲ್ಲರ ವಿರುದ್ಧವಾಗಿ ಎನ್ ಐ ಆರ್ ದಾಖಲಿಸಿ ಕ್ರಿಮಿನಲ್ ಮುಖದ್ದಮೆಯನ್ನು ಹೂಡುವಂತೆ ಈ ಮೂಲಕ ಆಗ್ರಹ ಪಡಿಸುತ್ತೇವೆ ಎಂದರು.

ಈ ಬಗ್ಗೆ ಯಾವುದೇ ಕ್ರಮವನ್ನು ತಾವು ಜರುಗಿಸದಿದ್ದಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಇರುವ ನಂಬಿಕೆ ಹೊರಟು ಹೋಗುತ್ತದೆ ಹಾಗಾಗಿ ನ್ಯಾಯಾಲಯದ ಆದೇಶ ಗಾಳಿಗೆ ತೂರುವ ಈ ವ್ಯಕ್ತಿಗಳಿಗೆ ಕ್ರಮ ಅಗತ್ಯವಾಗಿದೆ ಎಂದರು.

ಆದ ಕಾರಣ ಈ ಪ್ರತಿಭಟನೆಯಲ್ಲಿ ಬಾಗವಾಹಿಸಿದ ಎನ್ ವೈ ಓ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್, ಜಾಮಿಯಾ ಮನೀದಿ ಮೌಲ್ವಿ ಮುತ್ತಿ ಅಖಿಲ್ ರಝ, ಎಬಿಸಿಆರ್ ರಾಜ್ಯಾಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ, ವಿಧಾನ ಪರಿಷತ್ ಸದಸ್ಯೆ ಬಾಲ್ಕಿಶ್ ಬಾನು ಮಾರ್ಕಜಿ ಸುನ್ನೀ ಜಮೀಯತ್ ಮಸೀದಿಯ ಉಪಾಧ್ಯಕ್ಷ ಬೊಹಮ್ಮದ್ ಅರ್ಫಾನ್ ಖಾನ್, ಕುನ್ನಿ ಜಮಾತ್ ಉಲಮಾ ಕಮಿಟಿ ಕಾರ್ಯದರ್ಶಿ ಐಜಾಲ್ ಪಾಷಾ, ಮುಹರ್ ಉಲ್ ಉಲೂಮ್‌ನ ಮುತ್ತಿ ಸಯ್ಯದ್ ಮಜೀಬುಲ್ಲಾ, ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‌ನ ಮುಸ್ಲಿ ಮೊಹಮ್ಮದ್ ಸಫಿಯುಲ್ಲಾ ಖಾಸ್ಕಿ, ಜಮಾತ್ ಅತ್ತೆ ಹದೀಸ್‌ನ ಶೇಖ್ ಅಲಿ, ಜಮಾತ್ ಇಸ್ಲಾಮಿ ಹಿಂದ್‌ನ ಶಿವಮೊಗ್ಗದ ಕಾರ್ಯದರ್ಶಿ ಮೌಲಾನಾ ಹಾಮಿದ್ ಉಮರಿ, ಮರ್ಕಝ್ ಸಂದನ ಪ್ರಾಂಶುಪಾಲ ಮೌಲಾನಾ ಅಬ್ದುಲ್ ಜಬ್ಬಾರ್ ನಾದಿ, ಇವರುಗಳ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಈ ದೂರನ್ನು ಸಲ್ಲಿಸುತ್ತಿದ್ದೇನೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ರವರಿಗೆ ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕರಾದ ಚೆನ್ನಬಸಪ್ಪ,ವಿಧಾನ ಪರಿಷತ್ ಸದಸ್ಯರಾದ ಅರುಣ್ ಡಿ ಎಸ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಜಗದೀಶ್, ಮೋಹನ್ ರೆಡ್ಡಿ ಬಿಜೆಪಿ ನಗರ ಅಧ್ಯಕ್ಷರು,ದೀನದಯಾಳ್ ಹೆಚ್.ಕೆ.ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ,ಮಂಜುನಾಥ್ ಕೆ.ನವುಲೆಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಮತ್ತಿತರರು ಉಪಸ್ಥಿತರಿದ್ದರು.