ಶಿವಮೊಗ್ಗ ನಗರದ ಶಿವಪ್ಪ ನಾಯಕ ವೃತ್ತದ ಬಳಿ ಚರ್ಚ್ ಎದುರಿದ್ದ್ದ ಹೂವಿನ ಅಂಗಡಿಗಳನ್ನು ಸೋಮವಾರ ಪೊಲೀಸರು ತೆರವು ಮಾಡಿಸುವ ಮೂಲಕ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ.
ಹೂವಿನ ಮಾರುಕಟ್ಟೆ ಇದ್ದ ಜಾಗದಲ್ಲಿ ಸ್ಮಾರ್ಟ್ ಸಿಟಿಯಿಂದ ಬಹುಮಹಡಿ ವಾಹನ ಪಾರ್ಕಿಂಗ್ ಕಟ್ಟಡಕ್ಕಾಗಿ ಹೂವಿನ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ತಾತ್ಕಾಲಿಕ ಹೂವಿನ ಶೆಡ್‌ಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇವು ದಿನೇ ದಿನೇ ವಿಸ್ತಾರವಾಗುತ್ತಾ ಕಾಲೇಜಿಗೆ ತೆರಳುವ ಮಕ್ಕಳಿಗೆ, ಜನರಿಗೆ ಮತ್ತು ವಾಹನ ಸಂಚಾರಕ್ಕೆ ತೊಂದರೆಯಾಗುವಂತೆ ಮಾಡಿದ್ದವು. ರಸ್ತೆಯ ಅರ್ಧದವರೆಗೆ ಅಂಗಡಿಗಳನ್ನು ನಿರ್ಮಿಸಿ ಸಂಚಾರಕ್ಕೆ ತೊಂದರೆ ಮಾಡುತ್ತ್ತಿದ್ದರು.

ಇವುಗಳೊಟ್ಟಿಗೆ ಇತರೆ ಕೆಲವು ವಸ್ತುಗಳ ಮಾರಾಟದ ಅಂಗಡಿಗಳೂ ಅಲ್ಲಿ ತಲೆ ಎತ್ತಿದ್ದವು. ಅವುಗಳನ್ನೆಲ್ಲ ಸೋಮವಾರ ಮುಂಜಾನೆ ಸಂಚಾರಿ ಪೊಲೀಸರು ತೆರವುಗೊಳಿಸಿದ್ದಾರೆ. ಸದ್ಯ ಫುಟ್ಪಾತ್‌ನಲ್ಲಿ ಈ ಅಂಗಡಿಗಳಿಗೆವೆ. ಅಲ್ಲಿಂದಲೂ ತೆರವುಗೊಳಿಸಿ, ಸಂಚಾರಕ್ಕೆ ಮುಕ್ತ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹಾಕಲಿಕ್ಕೆ ಬಿಡುವುದು ನಂತರ ತೆಗೆಯುವುದು ಯಾಕೇ, ಹಾಕುವುದಕ್ಕಿಂತ ಮುಂಚಿತವಾಗಿಯೇ ತಡೆದರೆ ಒಳ್ಳೆಯದಲ್ಲವೇ ನಮ್ಮವರು ಬೆರಳು ಕೊಟ್ಟರೆ ಹಸ್ತ ನುಂಗುತ್ತಾರೆ