ಶಿವಮೊಗ್ಗ ನಗರದ ಹರಿಗೆ ಸಮೀಪದ ವಡ್ಡಿನ ಕೊಪ್ಪದ ರಂಗನಾಥ ಲೇಔಟ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇವರಿಂದ ಅಂದಾಜು 1,ಲಕ್ಷ 70,000 ರೂಪಾಯಿ ಮೌಲ್ಯದ 5 ಕೆ.ಜಿ 780 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ.ಬೊಮ್ಮನಕಟ್ಟೆ ನಿವಾಸಿ ಕಾರ್ತಿಕ್ ವಿ @ ಸಾಪಾಡ್ (21), ಕಡೇಕಲ್ ಕಾಳಿಕಾ ಪರಮೇಶ್ವರಿ ದೇವಸ್ಥಾನ ರಸ್ತೆಯ ನಿವಾಸಿ ಎನ್. ರಾಜೇಶ್ @ ರಾಜು (24)ಬಂಧಿತರು.
ಸಿಇಎನ್ ಠಾಣೆಯ ಡಿವೈಎಸ್‌ಪಿ ಕೆ.ಕೃಷ್ಣಮೂರ್ತಿ, ಇನ್‌ಸ್ಪೆಕ್ಟರ್ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಎಎಸ್‌ಐ ಶೇಖರ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಬಿ.ಧರ್ಮನಾಯ್ಕ ಮತ್ತು ಅವಿನಾಶ್, ಕಾನ್‌ಸ್ಟೆಬಲ್‌ಗಳಾದ ನಾರಾಯಣ ಸ್ವಾಮಿ, ಫಿರ್ದೋಷ್ ಅಹಮದ್, ಬಿ.ರವಿ, ಆಂಡ್ರಸ್ ಜೋನ್ಸ್, ಎಲ್.ಬಿ. ಪ್ರಮೋದ್, ಬಿ. ಸಂಗಮೇಶ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.