ಶಿವಮೊಗ್ಗ | ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಆದ್ಯತೆ ನೀಡಿ : ಹಿರಿಯ ಸಿವಿಲ್ ನ್ಯಾ. ಸಂತೋಷ್ ಸಲಹೆ

Date:

Advertisements

ಶಿವಮೊಗ್ಗ, ಆಧುನಿಕತೆಯ ಜಾಡಿನಲ್ಲಿ ಕಾಣಸಿಗುವ ಕಾಲ್ಪನಿಕ ಆಕರ್ಷಣೆಗಳಿಗೆ ಸಿಲುಕಿ ಬಲಿಯಾಗಬೇಡಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ್ ಸಲಹೆ ನೀಡಿದರು.

ನಗರದ ಕಮಲಾ‌ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಧುನಿಕತೆಯ ಜಾಲತಾಣದಲ್ಲಿ ಕಾಣುವುದೆಲ್ಲವು ನಿಜವಲ್ಲ. ವಾಸ್ತವತೆಯ ಜ್ಞಾನವನ್ನು ಪಡೆಯಿರಿ. ಜಾಲತಾಣಗಳು ನಮ್ಮನ್ನು ಅಂಧತ್ವದ ಮೊಹದ ಬಲೆಗೆ ಸಿಲುಕಿಸುತ್ತಿದೆ. ಅಂತಹ ಆಕರ್ಷಣೆಗಳಿಂದ ಎಚ್ಚರದಿಂದಿರಿ ಎಂದರು.

ವಾಸ್ತವತೆಯನ್ನು ವಿಮರ್ಶಿಸಲು ಪ್ರಯತ್ನಿಸಿ. ಹಿರಿಯರ ಸಲಹೆಗಳನ್ನು ಕೇಳಿಸಿಕೊಳ್ಳುವ ಸಂಯಮತೆ ಬೇಕು.ನಮ್ಮ ಯುವ ಸಮೂಹದಲ್ಲಿ ಅದ್ಭುತವಾದ ಗುರಿಯಿದೆ, ಅದರೇ ಕ್ರಮಿಸುವ ಮಾರ್ಗ ಗೊತ್ತಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಆದ್ಯತೆ ನೀಡಿ. ಪೋಷಕರು ಮತ್ತು ಸಮಾಜದ ಋಣ ತೀರಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂಬುದು ಜ್ಞಾಪಕದಲ್ಲಿ ಇಡಿ. ಕಾನೂನು ಎಂಬುವುದು ಒಂದು ಸಾಮಾನ್ಯ ಜ್ಞಾನ. ಅಂತಹ ಜ್ಞಾನ ಸದಾ ನಮ್ಮನ್ನು ಜವಾಬ್ದಾರಿಯಿಂದ ನಡೆಯುವಂತೆ ಮಾಡುತ್ತದೆ. ಹೆಣ್ಣು ಮಕ್ಕಳ ಪ್ರತಿ ಹಂತದ ರಕ್ಷಣೆಯಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

Advertisements

ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮಹಿಳಾ ಸಮಾನತೆ ಸಬಲಿಕರಣದ ಬಗ್ಗೆ ದೊಡ್ಡ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಎರಡು ಆಯಾಮವಿದೆ. ಸಾಮಾಜಿಕ ಮತ್ತು ಕಾನೂನಿನ ಆಯಾಮದ ಅಡಿಯಲ್ಲಿ ಈ ಚರ್ಚೆಗಳು ನಡೆಯುತ್ತಿದೆ‌. ಕಾನೂನಿನ ಕುರಿತು ಅರಿವಿದೆ ಅದರೇ ಅದರ ಮೌಲ್ಯವೇನು ಎಂಬುದು ಗೊತ್ತಿಲ್ಲ. ಹದಿಹರೆಯದ ವಿದ್ಯಾರ್ಥಿನಿಯರು ಅನೇಕ ಗೊಂದಲದಲ್ಲಿದ್ದಾರೆ. ಅಂತಹ ಗೊಂದಲಗಳಿಗೆ ಮೂಲ ಕಾರಣ ಆಧುನಿಕ ಮಾಧ್ಯಮಗಳು, ಜಾಲತಾಣಗಳು. ಸಾಮಾಜಿಕ‌ ಜಾಲತಾಣದಲ್ಲಿ ನೋಡುವ ವಿಚಾರವೆಲ್ಲವು ನಿಜವೆಂಬ ಭ್ರಮೆ ನಮ್ಮಲ್ಲಿದೆ. ನಾವು ಕೂಡ ಆಧುನಿಕವಾಗಿ ಸಮಾಜಕ್ಕೆ ತೆರೆದುಕೊಳ್ಳಬೇಕು ಎಂಬ ಆತುರ ಶುರುವಾಗಿದೆ. ಹಕ್ಕುಗಳನ್ನು ಬಳಸುವಾಗ ನಿಮ್ಮ ಮೇಲಿರುವ ಜವಾಬ್ದಾರಿಗಳ ಬಗ್ಗೆಯೂ ಅರಿವಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ವಿದ್ಯಾರ್ಥಿ ನಿಲಯದ ಮುಖ್ಯಸ್ಥೆ ಸಂಜಿದಾ ಬಾನು, ದಿವ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X