ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ದೊಡ್ಡಮನೆ ಮತ್ತಿ ಕೈ ಗ್ರಾಮದಲ್ಲಿ 12 ಗ್ರಾಂ ತೂಕದ ಚಿನ್ನದ ಸರ ಹಾಗೂ ₹15,000 ನಗದು ಕದ್ದು ಪರಾರಿಯಾಗಿದ್ದ ಮನೆಗಳ್ಳನ್ನು ಪೊಲೀಸರು ಬಂಧಿಸಿದ್ದಾರೆ. ಕೆ ಆರ್ ಶರತ್ ಕುಮಾರ್ ಬಂಧಿತ ಆರೋಪಿ.
ಗ್ರಾಮದ ಪರಮೇಶ್ವರ್ ಎಂಬುವವರು, ಮನೆಯ ಕಪಾಟಿನಲ್ಲಿದ್ದ ಬಂಗಾರದ ಸರ ಹಾಗೂ ಹಣ ಕಳುವಾಗಿದೆ ಎಂದು ದೂರು ದಾಖಲಿಸಿದ್ದರು.
ಹೊಸನಗರದ ವೃತ್ತ ನಿರೀಕ್ಷಿಕ ಗುರಣ್ಣ ಹೆಬ್ಬಾರ್ ಮತ್ತು ನಗರ ಠಾಣೆಯ ಪಿಎಸ್ಐ ಶಿವಾನಂದ್ ವೈ ಕೆ ನೇತೃತ್ವದಲ್ಲಿ ತನಿಖೆ ಆರಂಭಿಸಿದ್ದ ತಂಡ ಆರೋಪಿ ಕಟ್ಟಿನಹೊಳೆ ಗ್ರಾಮದ ಶರತ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವೃತ್ತಿಯಲ್ಲಿ ಜೀಪ್ ಚಾಲಕನಾಗಿದ್ದು, ಈತನಿಂದ 12 ಗ್ರಾಂ ಚಿನ್ನದ ಸರ ಹಾಗೂ ಕಳ್ಳತನಕ್ಕೆ ಬಳಸಿದ್ದ ಅಂದಾಜು ₹65,000 ಮೌಲ್ಯದ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ | ಜೋಗದ ಕಾಮಗಾರಿ ವಿಳಂಬ; ಏಪ್ರಿಲ್ 30ರವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ