ಕಾಶ್ಮೀರದ ಪಹಾಲ್ಗಮ್ ನಲ್ಲಿ ಭಯೋತ್ಪಾದಕರ ದಾಳಿಗೆ ಮೃತರಾದ ಮಂಜುನಾಥ್ ಮನೆಗೆ ಇಂದು ಶಿವಮೊಗ್ಗ ಮುಸ್ಲಿಂ ಬಾಂಧವ್ಯ ವೇದಿಕೆ ನೀಡಿ ಸಾಂತ್ವನ ತಿಳಿಸಿದರು.
ಈ ಒಂದು ದುರ್ಘಟನೆಯನ್ನು ಖಂಡಿಸುತ್ತೇವೆ ಹಾಗೆ ಈ ಕುಟುಂಬಕ್ಕೆ ಆಗಿರುವ ದುಃಖ ಅಘಾತ ಯಾರಿಗೂ ಸಹ ಬರಬಾರದು ಎಂದು ವಿಷಾದ ವ್ಯಕ್ತಪಡಿಸಿದರು, ಈ ದುಃಖದ ಸಮಯದಲ್ಲಿ ಕುಟುಂಬದೊಂದಿಗೆ ನಾವು ಭಾಗಿದ್ದಾರರಾಗಿರುತ್ತೇವೆ ಎಂದರು. ಕುಟುಂಬದ ನೆರವಿಗೆ ನಾವು ಸದಾ ಇರುತ್ತೇವೆ ಎಂದರು.

ಮಂಜುನಾಥ್ ಅವರ ಪತ್ನಿ ಪಲ್ಲವಿ ಅವರು ನಿಜಕ್ಕೂ ಸೌಹಾರ್ದವಾಗಿ, ಸಮಾಜದಲ್ಲಿ ಇಂತಃ ಒಂದು ಕಷ್ಟದ ಪರಿಸ್ಥಿತಿಯಲ್ಲಿ ತುಂಬಾ ಗಟ್ಟಿಯಾಗಿ ನಿಂತು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.
ಎಲ್ಲೂ ಸಹ ಯಾವದಕ್ಕು ಕುಗ್ಗದೆ ಜಗ್ಗದೆ ದುಃಖದ ಸಮಯದಲ್ಲಿ ಕುಟುಂಬ ಹಾಗೂ ಸಮಾಜವನ್ನು ನಿಭಾಯಿಸಿರುವುದಕ್ಕೆ ಅಭಿನಂದನೆಗಳನ್ನ ತಿಳಿಸಿದರು.
ಇಂತಹ ಉಗ್ರ ಪಾಪಿಗಳ ವಿರುದ್ದ ನಾವೆಲ್ಲರೂ ಸಹ ಒಂದಾಗಿರುತ್ತೇವೆ ಇದು ನಮ್ಮ ಹೃದಯದ ಮಾತಾಗಿದೆ ಎಂದು ತಿಳಿಸಿದರು.ಮುಸ್ಲಿಂ ಬಾಂಧವ್ಯ ವೇದಿಕೆ ಎಂದಿಗೂ ನಿಮಗೆ ನಿಮ್ಮ ಕುಟುಂಬಕ್ಕೆ ಸಹಕಾರದಿಂದ ಇರುತ್ತೇವೆ ಹಾಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಮೃತ ಮಂಜುನಾಥ್ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿ ಎಂದು ಈ ಮೂಲಕ ಅಗ್ರಹಿಸುತ್ತಿದ್ದೇವೆ ಎಂದು ತಿಳಿಸಿದರು.

ಹಾಗೆಯೇ ಕುಟಂಬಕ್ಕೆ ಆರ್ಥಿಕವಾಗಿ ನೆರವಾಗಿ ನಿಲ್ಲುವ ಮೂಲಕ ಕುಟುಂಬವನ್ನು ಸದೃಢಗೊಳಿಸಬೇಕೆಂದು ತಿಳಿಸಿದರು.
ನಮ್ಮ ಈದಿನ ಡಾಟ್ ಕಾಮ್ ನೊಂದಿಗೆ ಮಾತಾಡಿದ ಮೃತ ಮಂಜುನಾಥ್ ಪತ್ನಿ ಪಲ್ಲವಿ, ಹಲವರು ದಿನ ನಿತ್ಯ ಆಗಮಿಸಿ ಸಾಂತ್ವನ ತಿಳಿಸುತ್ತಿದ್ದಾರೆ, ಮುಸ್ಲಿಂ ಬಾಂಧವ್ಯ ವೇದಿಕೆ ಆಗಮಿಸಿ ಸಾಂತ್ವನ ತಿಳಿಸಿದ್ದಾರೆ ಈ ಸಂದರ್ಭದಲ್ಲಿ ಇವರುಗಳಿಗೆ ಧನ್ಯವಾದಗಳನ್ನು ತಿಳಿಸಲು ಬಯುಸುತ್ತೇನೆ ಎಂದರು.

ರಾಜ್ಯದ ಹಲವು ಭಾಗದಿಂದ ಮುಸ್ಲಿಂ ಬಾಂಧವ್ಯ ವೇದಿಕೆಯ ಮುಖಂಡರು ಇಂದು ಆಗಮಿಸಿ ಮೃತರ ಆತ್ಮಕ್ಕೆ ಶಾಂತಿ ಕೋರುವ ಮೂಲಕ ಕುಟಂಬಕ್ಕೆ ಧೈರ್ಯ ತುಂಬಿ ಸಾಂತ್ವನ ತಿಳಿಸಿದರು. ಈ ಸಂದರ್ಭದಲ್ಲಿ ಮುಶ್ತಾಕ್ ಹನ್ನೆಬೈಲ್, ಸೊಹೈಲ್, ವಹಾಬ್, ಆಯೇಷಾ, ಹಾಗೂ ಮತ್ತಿತರರು ಉಪಸ್ಥಿತರಿದ್ದರು