ತಾ: 6/5/2025 ರಂದು ಅಪರ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಭಗವಾನ್ ಬುದ್ಧರ ಜಯಂತಿಗೆ ಸಂಬಂಧಪಟ್ಟಂತೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು ಎಂದು ಪ್ರೊಫ್. ರಾಚಪ್ಪ ತಿಳಿಸಿದ್ದು.ಅದರಂತೆ ಸಭೆಯಲ್ಲಿ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆದು ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು ಎಂದರು. ಅದರಂತೆ ಕಾರ್ಯಕ್ರಮದಲ್ಲಿ
ಪ್ರೊ|| ರಾಚಪ್ಪ ಇವರನ್ನು ವಿಶೇಷ ಉಪನ್ಯಾಸಕರನ್ನಾಗಿ ಆಹ್ವಾನಿಸುವುದು. ಭಗವಾನ್ ಬುದ್ಧರ ಕುರಿತ ಕಿರುಪುಸ್ತಕವನ್ನು ಸಭಿಕರಿಗೆ ಹಂಚುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಮೂವರನ್ನು ಸನ್ಮಾನಿಸುವುದು ಇತ್ಯಾದಿಗಳ ಬಗ್ಗೆ ಚರ್ಚಿಸಿ ಅವುಗಳನ್ನು ಒಪ್ಪಿಕೊಳ್ಳಲಾಗಿತ್ತು ಎಂದು ರಾಚಪ್ಪ ತಿಳಿಸಿದರು.
ಆದರೆ ತಾ. 7/5/2025 ರಂದು ಸದರಿ ಕಾರ್ಯಕ್ರಮದ ಬಗ್ಗೆ ಮತ್ತಷ್ಟು ಚರ್ಚಿಸಲು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ಕಛೇರಿಗೆ ಹೋದಾಗ ಅಲ್ಲಿಯ ಸಿಬ್ಬಂದಿಗಳು ನೆನ್ನೆ ತೆಗೆದುಕೊಂಡಿರುವ ಮೂರು ವಿಚಾರಗಳು ಬದಲಾಗಿದೆ ಎಂದು ತಿಳಿಸಿದರಲ್ಲದೆ, ಹೆಚ್ಚಿನ ಮಾಹಿತಿಗಳಿಗೆ ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಬೇಕೆಂದು ತಿಳಿಸಿದರು.

ತಕ್ಷಣವೆ ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳನ್ನು ರಾಚಪ್ಪ ಅವರು ಭೇಟಿಯಾಗಿ ವಿಚಾರಿಸಿದಾಗ ಸಭೆಯಲ್ಲಿ ತೆಗೆದುಕೊಂಡ ಎಲ್ಲಾ ನಿರ್ಣಯಗಳನ್ನು ಬದಿಗಿಟ್ಟು ಏಕಪಕ್ಷೀಯವಾಗಿ ತಮ್ಮದೇ ತೀರ್ಮಾನಗಳನ್ನು ತೆಗೆದುಕೊಂಡಿರುವ ವಿಚಾರ ತಿಳಿದುಬಂತು ಎಂದು ತಿಳಿಸಿದರು.
ಈ ದಿಸೆಯಲ್ಲಿ ರಾಚಪ್ಪ ಅವರು ಸರ್ಕಾರದ ಗಮನಕ್ಕೆ ತರಬಯಸುವುದೇನೆಂದರೆ ಎಂದು ಪ್ರಶ್ನೆಗಳನ್ನು ಕೇಳಿದರು ಅದರಂತೆ
ಏಕಪಕ್ಷೀಯವಾಗಿ ತಮ್ಮ ಇಚ್ಛೆಗೆ ಬಂದಂತ ತೀರ್ಮಾನ ತೆಗೆದುಕೊಳ್ಳುವ ಅಧಿಕಾರವು ಅಪರ ಜಿಲ್ಲಾಧಿಕಾರಿಗಳಿಗೆ ಇದೆಯೇ ಎಂದು ಕೇಳಿದರು?
ಅಪರ ಜಿಲ್ಲಾಧಿಕಾರಿಗಳು ಏಕಪಕ್ಷೀಯವಾಗಿ ತೀರ್ಮಾನವನ್ನು ತೆಗೆದುಕೊಳ್ಳುವುದೇ ಆದಲ್ಲಿ ಸಭೆ ಕರೆಯುವ ಅವಶ್ಯಕತೆ ಏನಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು?
ಸಭೆಯಲ್ಲಿ ಪ್ರಜಾಸತ್ತಾತ್ಮಕವಾಗಿ ತೆಗೆದುಕೊಂಡ ತೀರ್ಮಾನಗಳಿಗೆ ಬೆಲೆ ಇಲ್ಲವೇ?ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದರು.
ಆದ್ದರಿಂದ ಸಂಬಂಧಪಟ್ಟವರಾದ ಜಿಲ್ಲಾಧಿಕಾರಿ ಅವರೇ ಈ ಬಗ್ಗೆ ಅಪರ ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ-ನಿರ್ದೇಶಕರನ್ನು ವಿಚಾರಿಸಿ, ಸೂಕ್ತ ಮಾರ್ಗದರ್ಶನ ನೀಡುವುದರ ಮೂಲಕ ನಮ್ಮ ಅಹವಾಲುಗಳಿಗೆ ನ್ಯಾಯ ಒದಗಿಸಬೇಕೆಂದು ಈ ಮೂಲಕ ಕೋರುತ್ತೇವೆ ಎಂದು ಪ್ರೊಫ್. ರಾಚಪ್ಪರವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನವಿಗೆ ಸಾಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಈ ಕುರಿತು ಮಾಹಿತಿ ಪಡೆದು ತಿಳಿಸುತ್ತೇನೆ ಎಂದರು.