ಡಾ. ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಟ್ರಸ್ಟ್ (ರಿ), ಭದ್ರಾವತಿಯ ರಾಜೀವ್ ಗಾಂಧಿ ಬಿ.ಇಡಿ ಕಾಲೇಜಿನಲ್ಲಿ ದಿನಾಂಕ 12-05-2025 ರಂದು ಬುದ್ಧ ಪೂರ್ಣಿಮಾ ಜಯಂತಿಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಸಿದ್ದರಾಜು ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಯುದ್ಧ ಮಾಡುವ ಕಾಲಕ್ಕೆ ನಾವು ಬಂದು ನಿಂತಿದ್ದೇವೆ. ಇಂದಿನ ಜಗತ್ತಿನಲ್ಲಿ ಅನೇಕ ಕಾರಣಗಳಿಗೆ, ಸಮಸ್ಯೆಗಳಿಗೆ ನಮ್ಮ ದುರಾಸೆಯೇ ಕಾರಣ ಎಂದರು. ಆಸೆಯೇ ದುಃಖಕ್ಕೆ ಮೂಲ ಕಾರಣ, ಹಾಗಾಗಿ ಇಂದಿನ ಯುವಪೀಳಿಗೆ ಋಣಾತ್ಮಕ ಅಂಶಗಳನ್ನು ಕಡಿಮೆ ಮಾಡಿ, ಧನಾತ್ಮಕ ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರಸ್ತುತ ಜಗತ್ತಿಗೆ ಬುದ್ಧನ ತತ್ವಗಳು, ಶಾಂತಿ ಮಾರ್ಗ ಅವಶ್ಯಕ, ಬುದ್ದನೆಂದರೆ ಜ್ಞಾನ, ಅರಿವು, ಹಾಗಾಗಿ ಬುದ್ಧನನ್ನು ಆರಾಧಿಸುವುದರ ಬದಲು, ಅನುಸರಣೆ ಮಾಡಬೇಕು. ಸತ್ಯ, ಪ್ರಾಮಾಣಿಕತೆ, ಅಹಿಂಸೆ, ಶಾಂತಿ ಈ ತತ್ವಗಳನ್ನು ಅಳವಡಿಸಿಕೊಳ್ಳಬೇಕು.
ಭಾವೀ ಶಿಕ್ಷಕರಾಗುವ ತಾವೆಲ್ಲರೂ ಈ ಮೇಲಿನ ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ಮುಂದಿನ ಪೀಳಿಗೆಗೆ ಪರಿಣಾಮಕಾರಿ ಮಾರ್ಗದರ್ಶಕರಾಗಿ, ಉತ್ತಮ ಜೀವನವನ್ನು ನಡೆಸಿ, ಜೀವನದಲ್ಲಿ ಸಫಲತೆಯನ್ನು ಕಾಣಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಾದ ಧರ್ಮರಾಜ್ ಪೂಜಾರಿ, ಹಾಗೂ ಶರಣಪ್ಪ ಗದ್ದಿಗೇರಾ, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಬುದ್ಧನ ಕುರಿತು ಮಾತನಾಡಿದರು.
ಪ್ರಾರ್ಥನೆಯನ್ನು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳಾದ ದೀಕ್ಷಾ ಮತ್ತು ಸಂಗಡಿಗರು, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಅರುಣ ರಾಜೇಂದ್ರ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ರಾಮಲಿಂಗಪ್ಪ, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರುಗಳಾದ ಡಾ. ಕಾವ್ಯ, ಶ್ರೀಮತಿ ಪೂರ್ಣಿಮಾ, ಶ್ವೇತಾ, ಶ್ರೀಮತಿ ರೂಪ, ಅಶ್ವಿನಿ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಜರಾಗಿದ್ದರು.