ಶಿರಾಳಕೊಪ್ಪ ಪೊಲೀಸ್ ಠಾಣೆ ವ್ಯಾಪ್ತಿಯ ಕುರುಬರ ಕೇರಿ ನಿವಾಸಿ ಮಹಿಳೆಯೋರ್ವರ ಮನೆಯಲ್ಲಿ, ಯಾರು ಇಲ್ಲದ ವೇಳೆ 18/3/2025 ರಂದು ಮನೆ ಮುಂಬಾಗಿಲಿನ ಬೀಗ ಮುರಿದು ಮನೆಯಲ್ಲಿದ್ದ 45 ಗ್ರಾಂ ತೂಕದ ಚಿನ್ನಾಭರಣ ಹಾಗೂ 12 ಸಾವಿರ ನಗದು ಅಪಹರಿಸಲಾಗಿತ್ತು.
ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಆರೋಪದ ಮೇರೆಗೆ, ಓರ್ವನನ್ನು ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.ಹಾವೇರಿ ಜಿಲ್ಲೆ ಹಿರೆಕೇರೂರು ತಾಲೂಕಿನ ನಿಡನೇಗಿಲು ಗ್ರಾಮದ ನಿವಾಸಿ ಕೃಷ್ಣಪ್ಪ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.ಆರೋಪಿಯಿಂದ 44 ಗ್ರಾಂ 840 ಮಿಲಿ ತೂಕದ 4.36 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಶಿಕಾರಿಪುರ ಡಿವೈಎಸ್ಪಿ ಕೇಶವ ಕೆ ಇ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಸಂತೋಷ್ ಪಾಟೀಲ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಪ್ರಶಾಂತ್ ಕುಮಾರ್ ಟಿ ಬಿ, ಶರತ್,ಸಿಬ್ಬಂದಿಗಳಾದ ಸಿಹೆಚ್’ಸಿ ಸಂತೋಷ್ ಕುಮಾರ್ ಆರ್, ಸಿಪಿಸಿಗಳಾದ ರಾಕೇಶ್ ಜಿ, ಸಲ್ಮಾನ್ ಖಾನ್ ಹಾಜಿ, ಹಜರತ್ ಅಲಿ, ಪ್ರಶಾಂತ್ ಕುಮಾರ್, ಜಗದೀಶ್, ಗಿರೀಶ್ ನಾಯ್ಕ್, ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಇಂದ್ರೇಶ್, ಗುರುರಾಜ್, ವಿಜಯ್ ಕುಮಾರ್, ಎಪಿಸಿ ಆದರ್ಶ್ ಅವರ ಆರೋಪಿ ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.