ಶಿವಮೊಗ್ಗ ಜಿಲ್ಲಾ ಆಟೋ ಚಾಲಕರ ಒಕ್ಕೂಟದಿಂದ ಸಾರಿಗೆ ಅಧಿಕಾರಿಯಾದ ಭೀಮನ ಗೌಡ ಪಾಟೀಲ್ ಜಂಟಿ ಸಾರಿಗೆ ಆಯುಕ್ತರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಈ ಕೆಳಕಂಡ ಬೇಡಿಕೆಗಳನ್ನು ಅಧಿಕಾರಿಗಳಿಗೆ ತಿಳಿಸಿದ್ದು,
ಅದರಂತೆ ಮೊದಲನೇಯಾದಾಗಿ ತ್ವರಿತಗತವಾಗಿ ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಕೌಂಟರ್ ಆರಂಭ ಮಾಡಬೇಕು ಎಂದಿರುತ್ತಾರೆ.
ಎರಡನೇಯಾದಾಗಿ ಡ್ರೈವಿಂಗ್ ಲೈಸನ್ಸ್ ಇಲ್ಲದೆ ಆಟೋ ಚಾಲನೆ ಮಾಡುತ್ತಿರುವವರಿಗೆ ಸಾರಿಗೆ ಅಧಿಕಾರಿಗಳು ಸೂಕ್ತ ಕ್ರಮ ಜರುಗುಸಿಬೇಕು ಎಂದು ತಿಳಿಸಿದ್ದಾರೆ.ಹಾಗೂ ಹೆಚ್ಚಿನ ಆಟೋಗಳಿಗೆ ಪರ್ಮಿಟ್ ಇನ್ನು ಮುಂದೆ ನಿಲ್ಲಿಸಿ ಜೊತೆಗೆ ನಗರದಲ್ಲಿ ಹಾಲಿ ಇರುವ ಆಟೋಗಳಿಗೆ ಸೂಕ್ತ ಸ್ಟಾಂಡ್ ವ್ಯವಸ್ಥೆ ಇಲ್ಲದಾಗಿದೆ ಇದಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ತಿಳಿಸಿದ್ದಾರೆ.

ಆಟೋ ಚಾಲಕರ ದಾಖಲೆಗಳು ಸರಿ ಇಲ್ಲದೆ ಇರುವ ಆಟೋಗಳನ್ನು ಅಧಿಕಾರಿಗಳು ಕೂಡಲೇ ಮಟ್ಟ ಹಾಕಬೇಕು ಎಂದು ತಿಳಿಸಿದ್ದಾರೆ. ನಗರದಲ್ಲಿ ಸಾವಿರಾರು ಆಟೋಗಳು ಆಗಿದ್ದು ಇದರ ಕುರಿತಾಗಿ ಮುಂದಿನ ದಿನಗಳಲ್ಲಿ ಈಗಿರುವ ಆಟೋಗಳನ್ನು ಹೊರತುಪಡಿಸಿ ಬೇರೆ ನೂತನ ಪರ್ಮಿಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ.
ನಂತರ ಸಾರಿಗೆ ಆಯುಕ್ತರು ಮಾತನಾಡಿ ಪ್ರತಿಯೊಬ್ಬ ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು, ಆಟೋ ಮೀಟರ್ ಕಡ್ಡಾಯವಾಗಿ ಬಳಸಬೇಕು, ಆಟೋ ಚಾಲನೆ ಮಾಡುವಾಗ ಕಡ್ಡಾಯವಾಗಿ ದಾಖಲೆ ಲೈಸನ್ಸ್ ಇಟ್ಟುಕೊಳ್ಳತಕ್ಕದ್ದು ಎಂದಿದ್ದಾರೆ ಎಂಬ ಮಾಹಿತಿಯಾಗಿದೆ.

ಹಾಗೆಯೇ ಬಹಳ ಆಟೋ ಚಾಲಕರು ನಗರದಲ್ಲಿ ಪ್ರಯಾಣಿಕರೊಂದಿಗೆ ದರ್ಪ ತೋರುತ್ತಿರುವುದು ಕಂಡು ಬರುತ್ತಿದೆ ಇದನ್ನು ಸರಿಪಡಿಸಿಕೊಂಡು ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಡೆದುಕೊಳ್ಳಬೇಕು, ಇಲ್ಲವಾದರೆ ಕಾನೂನು ರೀತಿಯ ಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿಯಾಗಿದೆ.

ನಂತರ ಸಾರಿಗೆ ಆಯುಕ್ತರು ಆಟೋ ಚಾಲಕರ ಒಕ್ಕೂಟದವರಿಗೆ ನಿಮ್ಮ ಬೇಡಿಕೆಗಳನ್ನು ಮನವಿ ರೂಪದಲ್ಲಿ ನೀಡಿ ನಂತರ ಪರಿಷ್ಕರಿಸಿ ಮಾಹಿತಿ ತಿಳಿಸುತ್ತೇವೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಆಟೋ ಚಾಲಕರ ಒಕ್ಕೂಟದ ಅಧ್ಯಕ್ಷರಾದ ಕಿರಣ್, ಜಿಲ್ಲಾ ಉಪಾಧ್ಯಕ್ಷ ಯುಕೆ ವಿಜಯ್ ಕುಮಾರ್ ಉಪ್ಪಿನ ಮತ್ತು ಸತೀಶ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.