ಶಿವಮೊಗ್ಗದಲ್ಲಿ ಇಂದು ಪತ್ರಿಕಾ ಪ್ರಕಟಣೆ ನೀಡಿರುವ ಕಾಂಗ್ರೇಸ್ ಮುಖಂಡರಾದ ಎಂ. ಎಸ್. ಶಿವಕುಮಾರ್ ನೆನ್ನೆ ದಿವಸ ಜೆಡಿಎಸ್ ಮುಖಂಡರಾದ ಕೆ.ಬಿ.ಪ್ರಸನ್ನ ಕುಮಾರ್ ಪಹಾಲ್ಗಮ್ ಭಯೋತ್ಪಾದಕರ ದಾಳಿಗೆ ಮೃತಾರಾದ ಮಂಜುನಾಥ್ ಕುಟುಂಬಕ್ಕೆ ಪರಿಹಾರ ಹೆಚ್ಚಿಸಲು ಅಗ್ರಹಿಸಿದ್ದುರು. ಇಂದು ಕಾಂಗ್ರೇಸ್ ಮುಖಂಡ ಶಿವಕುಮಾರ್ ಈ ವಿಚಾರಕ್ಕೆ ತಿರುಗೇಟು ನೀಡಿದರು. ಅದರಂತೆ ಈ ಕುರಿತಂತೆ ತಿಳಿಸಿದರು.
ಶಿವಮೊಗ್ಗ ನಗರದ ಮಾಜಿ ಶಾಸಕರು ಹಾಗೂ ಜೆಡಿಎಸ್ ಮುಖಂಡರಾದ ಕೆ.ಬಿ.ಪ್ರಸ್ತನಕುಮಾರ್ ಅವರು ನೆನ್ನೆ ದಿವಸ ಪತ್ರಿಕಾ ಗೋಷ್ಟಿಯಲ್ಲಿ ರಾಜ್ಯ ಸರ್ಕಾರದವರು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಯಿಂದ ಮೃತರಾದ ಮಂಜುನಾಥ್ ಅವರ ಕುಟುಂಬಕ್ಕೆ 50ಲಕ್ಷಗಳನ್ನು ಪರಹಾರವನ್ನ ಕೊಡಬೆಕೆಂದು ಆಗ್ರಹಿಸಿದ್ದಾರೆ.
ಆದರೆ ರಾಜ್ಯ ಸರ್ಕಾರದಿಂದ ಪಹಾಲ್ಗಮನಲ್ಲಿ ಆದ ದುರ್ಘಟನೆ ದಿನದಂದೆ 10 ಲಕ್ಷ ರೂಪಾಯಿಗಳನ್ನು ತತಕ್ಷಣವೇ ರಾಜ್ಯ ಸರ್ಕಾರ ಪರಿಹಾರ ಘೋಷನೆ ಮಾಡಿರುತ್ತಾರೆ. ರಾಜ್ಯ ಸರ್ಕಾರದಿಂದ ಮಂಜುನಾಥ್ ಅವರ ಕುಟುಬಂಕ್ಕೆ 50ಲಕ್ಷರೂ ಪರಿಹಾರ ಕೊಟ್ಟರೆ ತುಂಬಾ ಸಂತೋಷ ಪಡುತ್ತೇವೆ ಎಂದು ಕಾಂಗ್ರೇಸ್ ಮುಖಂಡ ಶಿವಕುಮಾರ್ ತಿಳಿಸಿದರು.

ಆದರೆ ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯದಿಂದ ಪಹಲ್ಗಾಮನಲ್ಲಿ ಭಯೋತ್ಪಾಧಕರಿಂದ ಮೃತರಾದ 26 ಕುಟುಂಬಗಳಿಗೆ ಇಲ್ಲಿಯ ವರೆಗೂ, ಕೇಂದ್ರ ಸರ್ಕಾರ ಬಿಡಿಗಾಸು ಪರಿಹಾರ ಘೋಷಣೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆ.ಬಿ.ಪ್ರಸನ್ನ ಕುಮಾರ್ ಅವರಿಗೆ ಕಾಂಗ್ರೇಸ್ ಮುಖಂಡ ಶಿವಕುಮಾರ್ ಅದರಂತೆ ತಿಳಿಸುತ್ತಿದ್ದೂ ನಿಮ್ಮದೆ ಜೆ.ಡಿ.ಎಸ್ ಪಾಲುದಾರಿಕೆ ಪಕ್ಷವಾದ ಬಿ.ಜೆ.ಪಿ.ಯ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿಯವರಿಂದ, ಪ್ರಧಾನ ಮಂತ್ರಿಯವರ ಅವರ ಮೇಲೆ ಒತ್ತಡ ತಂದು ಪಹಾಲ್ಗಮನಲ್ಲಿ ಮಡಿದ 26 ಕುಟುಂಬಗಳಿಗೆ ತಲಾ 2 ಕೋಟಿ ಪರಿಹಾರ ಕೊಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಎಂದು, ಎಂ.ಎಸ್.ಶಿವಕುಮಾರ್ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ, ಇಂದು ಪತ್ರಿಕಾ ಪ್ರಕಟಣೆಯಲ್ಲಿ ಅಗ್ರಹಿಸಿದ್ದಾರೆ.