ಶಿವಮೊಗ್ಗ ನಗರದ ನೇತಾಜಿ ವೃತ್ತದಲ್ಲಿ ಕನ್ನಡಿಗರ ಆಟೋ ಚಾಲಕರ ಸಂಘದ ವತಿಯಿಂದ ಕಾಶ್ಮೀರದ ಪಹಾಲ್ಗಮ್ ನಲ್ಲಿ ಭಯೋತ್ಪಾದಕರ ಗುಂಡೇಟಿಗೆ ಬಲಿಯಾದ ಮಂಜುನಾಥ್ ರವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಜೊತೆಗೆ ಮಡಿದ 26 ಮೃತರಿಗೆ ಚಿರ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.
ಮೃತ ಮಂಜುನಾಥ್ ಮನೆಗೆ ಭೇಟಿ ನೀಡಿ ಕುಟುಂಬಸ್ತರಿಗೆ ಸಾಂತ್ವನ ತಿಳಿಸಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಧೈರ್ಯ ತುಂಬಿದರು. ನಂತರ ನೇತಾಜಿ ವೃತ್ತದಲ್ಲಿ ಕ್ಯಾಂಡಲ್ ದೀಪದ ಮೂಲಕ ಮೌನಚಾರಣೆ ನಡೆಸಿ ಶ್ರದ್ದಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜಯಪ್ಪ, ಪ್ರಧಾನ ಕಾರ್ಯದರ್ಶಿ ಪ್ರಫುಲ್ಲ ಚಂದ್ರ, ಮಂಜುನಾಥ್ ಗೌಡ,ಮತ್ತು ಆಟೋ ಚಾಲಕರು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.