ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ತಡರಾತ್ರಿ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಮಾನವೀಯತೆ ಮೆರೆದ ಘಟನೆಗೆ ಸಾಕ್ಷಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾಗರದಿಂದ ಶಿವಮೊಗ್ಗದ ಕಡೆ ತೆರಳುತ್ತಿದ್ದ ಅಶ್ವಮೇಧ KSRTC ಬಸ್ ನಲ್ಲಿ ಪ್ರಯಾಣಿಕರು ತೆರಳುತ್ತಿದ್ದ ವೇಳೆ ಆನಂದಪುರ ಸಮೀಪ ಅಬ್ದುಲ್ ಗಫರ್ ಎನ್ನುವ ಪ್ರಯಾಣಿಕರಿಗೆ ಉಸಿರು ಕಟ್ಟಿದ ಹಾಗೆ ಅನುಭವವಾಗಿ ಅಸ್ವಸ್ಥಗೊಂಡಿದ್ದರು ಎಂದು ತಿಳಿದು ಮನಗಂಡ ಬಸ್ ಚಾಲಕ ಬಹಳ ತುರ್ತು ಆಸ್ಪತ್ರೆ ಅವಶ್ಯಕತೆ ಇರುವ ಹಿನ್ನೆಲೆ ಪ್ರಯಾಣಿಕರನ್ನು ಒಳಗೊಂಡಂತೆ ಕೆಎಸ್‌ಆರ್ಟಿಸಿ ಬಸ್ ಅನ್ನು ಆನಂದಪುರದ ಸರ್ಕಾರಿ ಆಸ್ಪತ್ರೆ ಕಾಂಪೌಂಡ್ ಒಳಗೆ ಬಸ್ಸನ್ನು ಚಲಾಯಿಸಿ ತುರ್ತು ಪರಿಸ್ಥಿತಿಯಲ್ಲಿದ್ದ ಪ್ರಯಾಣಿಕರಾದ ಅಬ್ದುಲ್ ಗಫರ್ ರನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಶಿವಮೊಗ್ಗದ ಕಡೆ ಬಸ್ ತೆರಳಿದ ಅಪರೂಪದ ಘಟನೆ ನಡೆದಿದೆ.

ಮಾನವೀಯತೆ ತೋರಿದ ಬಸ್ ಚಾಲಕನಿಗೆ ಅಬ್ದುಲ್ ಗಫರ್ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಶ್ಲಾಘಿಸಿದ್ದಾರೆ.