ಶಿವಮೊಗ್ಗ ಗ್ರಾಮಾಂತರ ಭಾಗದ ಬೇಡರ ಹೊಸಳ್ಳಿಯಲ್ಲಿ KSRTC ಬಸ್ ರಸ್ತೆ ಮಧ್ಯೆಯೇ ಮಗುಚಿಬಿದ್ದು ಹಲವರು ಗಾಯಗೊಂಡಿದ್ದಾರೆ. ರಾಯಚೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಎನ್ ಈ ಕೆ ಆರ್ರ ಟಿ ಸಿ ಬಸ್ ಇಂದು ಬೆಳಗಿನ ಜಾವ ಸುಮಾರು ಐದೂವರೆ ಸಮಯದಲ್ಲಿ ಮಗಚಿ ಬಿದ್ದಿದೆ.
ಬಸ್ ನಲ್ಲಿ 29 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಇದರಲ್ಲಿ ಮೂವರಿಗೆ ಸ್ವಲ್ಪಮಟ್ಟಿನ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಕೆಎಸ್ಆರ್ಟಿಸಿ ಡಿಟಿಓ ದಿನೇಶ್ ಕುಮಾರ್ ಭೇಟಿ ನೀಡಿದ್ದು ಗಾಯಾಳುಗಳನ್ನು ಖುದ್ದಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಬಳಿ ಉರುಳಿ ಬಿದ್ದಿದೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.