ಶಿವಮೊಗ್ಗ ನಗರದ ಗೋಪಾಳದಲ್ಲಿರುವ ಲಗಾನ್ ಸ್ಕೈಲೇನ್ ಸಂಸ್ಥೆಯು ನಡೆಸುತ್ತಿರುವ ಕಟ್ಟಡ ನಿರ್ಮಾಣ ಗೊಂದಲದಿಂದ ಕೂಡಿದೆ. ಇಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಿಯಾ ದೊಡ್ಡಗೌಡರು ಮತ್ತು ಆರ್ ಐ ಅವರ ಸಮ್ಮುಖದಲ್ಲಿ ಅಳತೆ ನಡೆದಿದೆ. ಅಳತೆ ನಡೆದ ವೇಳೆ ಲಗಾನ್ ಸ್ಕೈಲೈನ್ ಮಾಲೀಕರಾಗಲಿ, ಪಾರ್ಟರ್ನ್ ಆಗಲಿ ಅಥವಾ ಜಿಪಿಎ ಹೋಲ್ಡರ್ ಆಗಲಿ ಜಾಗದಲ್ಲಿ ಹಾಜರಾಗದೆ ಇರುವುದು ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.
ಲಗಾನ ಸ್ಕೈಲೈನ್ ಸಂಸ್ಥೆಯು ಕೆರೆ ಬಫರ್ ಜೋನ್ ನನ್ನ ಒತ್ತುವರಿ ಮಾಡಿಕೊಂಡು ಸುಮಾರು 26 ಅಡಿ ಆಳ ಗುಂಡಿ ತೋಡಿ ಮಣ್ಣನ್ನ ಮಾರಾಟ ಮಾಡಿರುವ ಬಗ್ಗೆ ಮತ್ತು ಅಲ್ಲಿ ಪತ್ತೆಯಾದ ಕಲ್ಲು ಪತ್ತೆಯಾದರೂ ಸಂಬಂಧಪಟ್ಟ ಇಲಾಖೆಗೆ ಮಾಹಿತಿಯೂ ತಿಳಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು.

ಈ ಆರೋಪದ ಹಿನ್ನಲೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಇಂದು ಅಳತೆ ನಡೆದಿದೆ. ಅಳತೆ ನಡೆದ ವೇಳೆ ದೂರುದಾರರು, ಸಂಸ್ಥೆಯ ಇಂಜಿನಿಯರ್ ಹಾಜರಿದ್ದಿದ್ದು ಕಂಡು ಬಂದರೆ ಮಾಲೀಕರಾಗಲಿ, ಪಾಲುದಾರರಾಗಲಿ ಅಥವಾ ಜಿಪಿಎ ಹೋಲ್ಡರ್ ಆಗಲಿ ಹಾಜರಿರಲಿಲ್ಲ. ಸಂಸ್ಥೆಯ ಮಾಲೀಕರಿಗೆ 15 ದಿನಗಳ ಹಿಂದೆ ನೋಟೀಸ್ ನೀಡಿ ಸರ್ವೆಗೆ ಹಾಜರಾಗುವಂತೆ ಸೂಚಿಸಿದರೂ ಮಾಲೀಕರು ಹಾಜರಾಗದಿರುವುದು ಕುತೂಹಲ ಮೂಡಿಸಿದೆ.
ಇದು ಒಂದು ರೀತಿಯ ಮಾಲೀಕರ ನಿರ್ಲಕ್ಷತನವೇ ಎಂದು ಹೇಳಬಹುದಾಗಿದೆ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಏನು ಮಾಡಲಿದೆ ಕಾದು ನೋಡಬೇಕಿದೆ. ಮಾಲೀಕರ ನಿರ್ಲಕ್ಷತನವನ್ನ ಮಾಫಿ ಮಾಡಿ ಕಾನೂನು ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಮಣೆ ಹಾಕುತ್ತಾರೋ ಅಥವಾ ಕಾನೂನು ಉಲ್ಲಂಘಿಸಿ ನಿರ್ಮಿಸುವವರಿಗೆ ಖಡಕ್ ವಾರ್ನಿಂಗ್ ನೀಡುತ್ತದೋ ಕಾದು ನೋಡಬೇಕಿದೆ.
ಸರ್ವೆ ನಂಬರ್ 15 ರಲ್ಲಿ ಕೆರೆ ಬರಲಿದ್ದು ಈ ಕೆರೆಯನ್ನ 2004 ರಲ್ಲಿ ಡಿಸಿ ನೋಟಿಫಿಕೇಷನ್ ಹಾಕಿ ಕೆರೆಯ ಜಾಗವನ್ನ ಕ್ಲಬ್ ವೊಂದಕ್ಕೆ, ಸಾರ್ವಜನಿಕ ರಸ್ತೆಗೆ ಅನುಕೂಲವಾಗುವಂತೆ ಕೆರೆ ಜಾಗವನ್ನ ಒತ್ತುವರಿ ಮಾಡಿಕೊಳ್ಳಲಾಗಿದೆ. ಆದರೆ ಅದರ ಬಫರ್ ಜೋನ್ ಕಬಳಿಸುವಂತಿಲ್ಲ ಎಂಬ ನಿಯಮವಿದೆ. ದಿಶಾಂಕ್ ನ್ನ ನಿರ್ಮಾಣಗೊಳ್ಳುತ್ತಿರುವ ಕಟ್ಟಡದಲ್ಲಿ ನಿಂತು ಒಪನ್ ಮಾಡಿದರೆ ಸುಮಾರು 10 ಅಡಿ ಕೆರೆ ದಂಡೆಯ ಜಾಗವೇ ಒತ್ತುವರಿಯಾಗಿದೆ. ಇನ್ನು ಬಫರ್ ಜೋನ್ ಬಿಟ್ಟಿಲ್ಲವೆಂಬುದು ದೂರುದಾರರ ಆರೋಪವಾಗಿದೆ.
ಇಲ್ಲಿನ ಮಣ್ಣನ್ನ ಪಕ್ಕದಲ್ಲಿ ಹಾಕಲಾಗಿವೆ ಎಂದು ಅಲ್ಲಿನ ಇಂಜಿನಿಯರ್ ತೋರಿಸುತ್ತಾನೆ. ಜಾಗದಲ್ಲಿ ತೋಡಲಾದ ಗುಂಡಿಗೂ ಅದರ ಪಕ್ಕದಲ್ಲಿಯ ಮಣ್ಣು ಸಂಗ್ರಹಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ. ಒಟ್ಟಿನಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣವಾಗುತ್ತಿದೆ ಎಂಬುದು ದೂರುದಾರರ ಆರೋಪವಾಗಿದೆ.