ಶಿವಮೊಗ್ಗ, ಹೊಳೆಹೊನ್ನುರು, ಪಟ್ಟಣ ಸಮೀಪದ ಕೂಡ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಉದ್ಘಾಟನೆ ಇಂದು ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂಗ್ಲಿಷ್ ಕಲಿಕೆಯಿಂದ ಜ್ಞಾನದ ಗ್ರಹಿಕೆ ಸುಲಭವಾಗುತ್ತದೆ ಎಂದುಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ತಿಳಿಸಿದರು.
ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ಇಂಗ್ಲಿಷ್ ಕಲಿಕೆ ಸಹಕಾರಿಯಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಕನ್ನಡದ ಜೊತೆಯಲ್ಲಿ ಇಂಗ್ಲಿಷ್ ಕಲಿತು ಉನ್ನತ ವಿದ್ಯಾಭ್ಯಾಸ ಮಾಡಲು ಸರ್ಕಾರವು ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಆರಂಭಿಸುತ್ತಿದೆ.ಇದರ ಸದುಪಯೋಗ ಪಡಿಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸುವಂತೆ ಸಲಹೆ ನೀಡಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಅಧ್ಯಕ್ಷತೆ ವಹಿಸಿದ್ದರು.ಗ್ರಾಮ ಪಂಚಾಯತಿ ಅದ್ಯಕ್ಷೆ ರತ್ನಮ್ಮ ಸದಸ್ಯ ಕುಮಾರಪ್ಪ, ಶಾಲೆ ಮುಖ್ಯ ಶಿಕ್ಷಕ ಕೆ.ಪ್ರಕಾಶ್ ಗ್ರಾಮದ ಹಿರಿಯರಾದ ರಮೇಶಪ್ಪ, ಕರಿಯಪ್ಪ ಗಣೇಶಪ್ಪ ಫಕ್ಕೀರಪ್ಪ ರಂಗಪ್ಪ ಹನುಮಂತಪ್ಪ,ಯುವ ಮುಖಂಡ ವಾಗೀಶ್,ಎಸ್.ಡಿ.ಎಂ.ಸಿ ಸದಸ್ಯರಾದ ಪಾಲಾಕ್ಷಪ್ಪ, ಸಿದ್ದಪ್ಪ ಅನ್ನಪೂರ್ಣ, ಜಗಧೀಶಪ್ಪ,ಲಕ್ಷ್ಮಿ, ಜಿಲ್ಲಾ ಸಮನ್ವಯ ಸಮಿತಿ ಅದ್ಯಕ್ಷ ವೀರಾಚಾರ್, ಶಿಕ್ಷಣ ಸಂಯೋಜಕ ಮೋಹನ್,ಸಿ ಆರ್ ಪಿ ದೊರಿಗ್ಯಾನಾಯ್ಕ ಶಿಕ್ಷಕಿಯರಾದ ವನಿತಾ,ವಿನುತಾ ಮತ್ತು ದೀಪಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶಾಲಾ ವಿದ್ಯಾರ್ಥಿನಿಯರಾದ ಹೇಮಾವತಿ, ಸಿಂಚನ ಯಶಸ್ವಿನಿ ಪ್ರಾರ್ಥಿಸಿದರು.ಶಿಕ್ಷಕ ಪಿ.ಕೆ.ರಮೇಶ್ ಸ್ವಾಗತಿಸಿದರು. ಕೃಷ್ಣಮೂರ್ತಿ ನಿರೂಪಿಸಿದರು, ವಿಜಯಕುಮಾರ್ ವಂದಿಸಿದರು.