ಶಿವಮೊಗ್ಗದಲ್ಲಿ ಲೋಕಸಭೆ ಮತ್ತು ವಿಧಾನಸಭೆಯಂತಹ ಶಾಸನ ಸಭೆಗಳಲ್ಲಿ ಮಹಿಳೆಗೆ ಸಮಾನ ಅವಕಾಶ ಸಿಗುವ ತನಕ ಮಹಿಳಾ ಸಮಾನತೆ ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್. ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ಅವರು ಸಂವಿಧಾನ ಓದು ಕರ್ನಾಟಕ ಮತ್ತು ಶಿವಮೊಗ್ಗದ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಗರ ಹೊರವಲಯದ ಸನ್ನಿಧಿ ಸಭಾಂಗಣದಲ್ಲಿ ಎರಡು ದಿನಗಳ ಆಯೋಜಿಸಿದ್ದ ಸಂವಿಧಾನ ಓದು ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದ ಕೊನೆ ದಿನವಾದ ಭಾನುವಾರ ಸಮಾರೋಪಕ್ಕೂ ಮುನ್ನ ಅವರು ಸಂವಿಧಾನ ಮತ್ತು ಮಹಿಳೆ ವಿಷಯ ಕುರಿತು ಮಾತನಾಡಿದರು.

ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಮಹಿಳೆಯರಿದ್ದಾರೆ. ಹಾಗೆಯೇ ಆರ್ಥಿಕ ಶ್ರಮ ಶಕ್ತಿಯಲ್ಲೂ ಅವರದೇ ಹೆಚ್ಚು ಪಾಲು ಇದೆ. ಆದರೂ ಅವರನ್ನ ಇಂದಿಗೂ ಎರಡನೇ ದರ್ಜೆಯ ವ್ಯಕ್ತಿಯನ್ನಾಗಿ ಪರಿಗಣಿಸಿದ್ದರ ಹಿಂದೆ ಮಹಿಳೆಯರು ರಾಜಕೀಯ, ಅರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರದಿಂದ ದೂರು ಇರುವುದೇ ಕಾರಣವಾಗಿದೆ ಎಂದರು.
ದೇಶದ ಲೋಕಸಭೆ ಸೇರಿದಂತೆ ಶಾಸನ ಸಭೆಗಳಲ್ಲಿ ಈಗಲೂ ಮಹಿಳೆಯರಿಗೆ ಸಮಾನ ಅವಕಾಶ ಸಿಕ್ಕಿಲ್ಲ. ಶೇ 33 ಮಹಿಳಾ ಮೀಸಲಾತಿ ಮಸೂದೆ ಅನುಷ್ಠಾನಕ್ಕೆ ಬರುತ್ತಿಲ್ಲ. ಆಳುವವರ ಪುರುಷಾಧಿಪತ್ಯದ ಮನಸ್ಥಿತಿ ಈಗಲೂ ಬದಲಾಗಿಲ್ಲ ಎಂದು ವಿಷಾಧಿಸಿದ ಅವರು,ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕಿದೆ ಎಂದು ಪ್ರತಿಪಾದಿಸಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಈ ದೇಶದ ಮಹಿಳೆಯರ ಪಾತ್ರವೂ ದೊಡ್ಡದಿದೆ ಎಂದು ಅವರು ತಮ್ಮೂರಿನ ಪಾಲ್ಗೊಳ್ಳಬೇಕೆನ್ನುವುದನ್ನು ವೆಂಕಟಮ್ಮನ ಉದಾಹರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆ ಅಂದಾಕ್ಷಣ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅಂತಲೇ ಉದಾಹರಿಸಲಾಗುತ್ತದೆ ಎಂದರು. ಯಾಕೆಂದರೆ ಅವರು ಅಮರರಾದವರು.
ಹಾಗೆಯೇ ಈ ದೇಶದ ದೊಡ್ಡ ಮಹಿಳಾ ಶಕ್ತಿ ಶಕ್ತಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದೆ.ಹಾಗೆಯೇ ಅನೇಕ ಮಹಿಳಾ ಪರವಾದ ಕಾನೂನುಗಳ ಜಾರಿಗೆ ಬರುವುದಕ್ಕೂಕಾರಣವಾಗಿದ್ದಾರೆ ಎಂದರು. ಕೋಮುವಾದ, ಮೂಲಭೂತವಾದ ಇವತ್ತು ಸಮಾಜದ ಅಭಿವೃದ್ದಿ ಮತ್ತು ಐಕ್ಯತೆಗೆ ದೊಡ್ಡ ತೊಡಕಾಗಿದೆ ಎಂದು ತಿಳಿಸಿದರು. ಅವು ನಾಶವಾಗದ ಹೊರತು ಮಹಿಳಾವಿಮೋಚನೆ ಸಾಧ್ಯವಿಲ್ಲ ಎಂದರು. ವಿಶೇಷವಾಗಿ ಕಾನೂನು ಅರಿವು ಎಲ್ಲರಿಗೂ ಬೇಕಿದೆ ಎಂದರು.
ಮೊದಲು ದೇಶದಲ್ಲಿ ಬಹಳ ಕಡಿಮೆ ಸಂಖ್ಯೆ ಜನರು ಶಿಕ್ಷಿತರಿದ್ದರು. ಈಗ ಈ ಪ್ರಮಾಣ ಶೇ. 90 ಕ್ಕೆ ಏರಿದೆ. ಆದರೆ ಕಾನೂನು ಅರಿವು ಹೆಚ್ಚಾಗಿಲ್ಲ. ಸಂವಿಧಾನದ ಮಹತ್ವ ಗೊತ್ತಾಗಬೇಕಾದರೆ ಕಾನೂನು ಅರಿವು ಬರಬೇಕು. ಆ ಕೆಲಸ ತುರ್ತಾಗಿ ಆಗಬೇಕು ಎಂದರು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್. ಆರ್.ಬಸವರಾಜಪ್ಪ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಮೂರ್ತಿ, ವಕೀಲರು ಹಾಗೂಸಮಾಜ ಸೇವಕ ಅನಂತ್ ನಾಯ್ಕ, ಜನಶಕ್ತಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಲ್ .ಅಶೋಕ್, ಜನಪರ ಹೋರಾಟಗಾರ ಅನಂತ ರಾಮು, ರಾಜು ಗೋರೂರು ಮಾತನಾಡಿದರು. ಪಾಧರ್ ಪಿಂಟೋ, ಫಾದರ್ ಡಿಸೋಜ ಉಪಸ್ಥಿತರಿದ್ದರು. ಶಿಬಿರದ ಪ್ರಧಾನ ಆಯೋಜಕರು ಹಾಗೂ ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾದ ಕೆ.ಪಿ. ಶ್ರೀಪಾಲ್ ವಂದಿಸಿದರು. ಕೊನೆಯಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.