ಕ್ರೀಡಾ ಚಟುವಟಿಕೆಗೆ ಹೆಚ್ಚಿನ ಅನುಕೂಲ ಕಲ್ಪಿಸುವಂತೆ ಅಭಿವೃದ್ಧಿ ಕಾರ್ಯಕೈಗೊಳ್ಳಬೇಕೆಂದು ಶಿವಮೊಗ್ಗ ನಗರದ ಕ್ರೀಡಾಪಟುಗಳು ಹಾಗೂ ಕ್ರೀಡಾಸಕ್ತರು ಮಾಡಿದ್ದ ಬಹುದಿನಗಳ ಮನವಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಂದಿಸಿದ್ದಾರೆ.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ ಆರ್ ಚೇತನ್ ಹಾಗೂ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರೊಂದಿಗೆ ನಗರದ ನೆಹರೂ ಕ್ರೀಡಾಂಗಣ, ಗೋಪಾಲಗೌಡ ಬಡಾವಣೆಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಹಾಗೂ ಡಿ ಬ್ಲಾಕ್ ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಸ್ ಬಂಗಾರಪ್ಪ ಇಂಡೋರ್ ಶಟಲ್ ಕೋರ್ಟ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಶಟಲ್ ಕೋರ್ಟ್ ಅನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಿಸಬೇಕಾಗಿದ್ದು, ಕಾಮಗಾರಿಗೆ ಬೇಕಾಗುವ ಹೆಚ್ಚುವರಿ ಹಣವನ್ನು ತಾವೇ ಇಲಾಖೆಯಿಂದ ಭರಿಸಲು ಸಮ್ಮತಿಸಿದರು.
ಉತ್ತಮ ಕಾರ್ಯಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿಯವರಿಗೆ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಗೋಪಾಲ್ ಗೌಡ ಬಡಾವಣೆಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ತುರ್ತಾಗಿ ಲಾಂಗ್ ಟೆನ್ನಿಸ್ ಗ್ರೌಂಡ್‌ಗೆ ಮೇಲ್ಛಾವಣೆ, ಟೇಬಲ್ ಟೆನ್ನಿಸ್ ನಿರ್ಮಾಣ, ಸ್ಕೇಟಿಂಗ್ ಗ್ರೌಂಡ್ ರಿನ್ನೋವೇಶನ್, ಬೇಬಿ ಸ್ವಿಮ್ಮಿಂಗ್ ಪೂಲ್, ಕುಸ್ತಿ ಅಕಾಡೆಮಿ ಹಾಗೂ ವಾಲಿಬಾಲ್ ಹಾಸ್ಟೆಲ್ ಗೆ ಸಿಎ ಸೈಟ್ ಖರೀದಿ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಿದರು.
ಇದನ್ನೂ ಓದಿ: ಶಿವಮೊಗ್ಗ | ಹೆಚ್ಚಿದ ಶುಂಠಿ ಲಾಬಿ; ಮಲೆನಾಡ ರೈತರು ಕಂಗಾಲು
ಈ ಸಂದರ್ಭದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ ಮಂಜುನಾಥ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯ ನಾಯ್ಕ್, ಸಿದ್ದಿ ವಿನಾಯಕ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯ ಟಿ.ಡಿ ಗಿತೇಂದ್ರಗೌಡ, ಜಿ. ಎಸ್. ಶಿವಕುಮಾರ್ ಸಿದ್ಧಿ ಬುದ್ಧಿ ಗಣಪತಿ ದೇವಸ್ಥಾನದ ಅಧ್ಯಕ್ಷರಾದ ಬ್ಯಾಂಕ್ ಸುರೇಶ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.