ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಆನೆ ತುಳಿತದಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲ್ಲೂಕಿನ ಬಂಡೀಗುಡ್ಡದಲ್ಲಿ ನಿನ್ನೆ ರಾತ್ರಿ ನಡೆದಿದೆ. ತಾಲೂಕಿನ ಬಂಡಿಗುಡ್ಡ ಗ್ರಾಮದ ಕುಮಾರ್ (53) ಮೃತ ದುರ್ದೈವಿಯಾಗಿದ್ದಾನೆ.
ವಿಐಎಸ್ ಎಲ್ ಭೂಮಿಯ ಕಾವಲು ಕಾಯಲು ಹೋಗುವಾಗ ಆನೆ ತುಳಿದಿದೆ.ಬಂಡಿಗುಡ್ಡ ಗ್ರಾಮವು ಕುಗ್ರಾಮವಾಗಿದ್ದು ಅರಣ್ಯದೊಳಗೆ ಇದೆ.
ಈ ಭಾಗದಲ್ಲಿ ಒಂಟಿ ಸಲಗವೊಂದು ಸಂಚಾರದಲ್ಲಿದ್ದು ಆನೆಯೆ ತುಳಿದು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ 9.30ರ ಹೊತ್ತಿಗೆ ಘಟನೆ ನಡೆದಿದ್ದು ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ.