ಸ್ವತಃ ಶ್ರಮದಾನ ಮಾಡುವ ಮೂಲಕ ವಿವಿಧ ಕಾಮಗಾರಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.
ಇಂದು ಸೊರಬ ತಾಲೂಕಿನ ಹುರಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯೊಂದರ ಕಾಂಪೌಂಡ್ ಹಾಗೂ ಬಿಸಿಯೂಟ ತಯಾರಿಕಾ ಕೊಠಡಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಾರ್ಮಿಕರ ಜತೆಗೂಡಿ ಸ್ವತಃ ಕೆಲಸ ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಈದ್ಗ ಮೈದಾನದ ತುರ್ತು ಎಸ್ ಪಿ ಸಭೆಗೆ ಗೈರು ಹಿನ್ನಲೆ ವಿನೋಬನಗರ ಪಿ ಐ ಅಮಾನತು
ಈ ವೇಳೆ ಸಚಿವರು ಶ್ರಮದಾನ ಕಾರ್ಯದಲ್ಲಿ ಭಾಗಿಯಾಗಿದ್ದನ್ನು ಗಮನಿಸಿ ಅವರ ಬೆಂಬಲಿಗರು ಕೂಡ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದರು. ಸ್ಥಳೀಯ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.