ಶಿವಮೊಗ್ಗ ಜಿಲ್ಲೆಯ ಹೊಸನಗರದ ವಿಜಾಪುರ ಗ್ರಾಮದಲ್ಲಿ ಘಟನೆಯಾಗಿದೆ.ಹಸುವಿನ ಕೆಚ್ಚಲು ಕೊಯ್ದ ಹೇಯ ಘಟನೆ ಹೊಸನಗರ ತಾಲೂಕಿನ ವಿಜಾಪುರದಲ್ಲಿ ನಡೆದಿದೆ.
ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿದ ಹಸುವಾಗಿದ್ದು, ಶನಿವಾರ ಮೇಯಲು ಹೋದ ಸಂದರ್ಭದಲ್ಲಿ ದುಷ್ಕರ್ಮಿಗಳು ಕೆಚ್ಚಲು ಕೊಯ್ದಿದ್ದಾರೆ. ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ ನಂತರ ಸ್ಥಳೀಯರ ಸಹಕಾರದಿಂದ ಹಸುವನ್ನು ಮನೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.