ಪ್ರತಿ ದಿನ ಸ್ಮಾರ್ಟ್ ಫೋನಿನ ದುರ್ಗ್ಬಳಕೆ ಹೆಚ್ಚುತ್ತಿದೆ. ತಂತ್ರಜ್ಞಾನ ಮುಂದುವರೆದ ಹಾಗೆ ಆಕರ್ಷಣೆಗೆ ಒಳಗಾಗಿ ಬೇಡವಾದ ವೆಬ್ ಸೈಟ್ಗಳನ್ನು ಓಪನ್ ಮಾಡಿ ನಾವಾಗಿಯೇ ಸಿಕ್ಕಿಹಾಕಿಕೊಳ್ಳುತ್ತೇವೆ,ಇತ್ತೀಚಿಗೆ ತುಂಬಾ ಹೆಚ್ಚಾಗುತ್ತಿದೆ ಪ್ರತಿದಿನ ಶಿವಮೊಗ್ಗ ಜಿಲ್ಲೆಯಲ್ಲಿ ನಾಲಕ್ಕರಿಂದ ಐದು ಕೇಸುಗಳು ದಾಖಲಾಗುತ್ತಿವೆ ಎಂದು ಆಡಿಷನಲ್ ಎಸ್ಪಿ ಭೂಮ್ ರೆಡ್ಡಿ ಹೇಳಿದರು.
ಕಾಯ್ದೆ ದಾಖಲಾಗುವಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಎಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಅನಿಲ್ ಬೊಮರೆಡ್ಡಿ ಅವರು ನುಡಿದರು ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಹೆನ್ರಿ ಡುನಂಟ್ ಹುಟ್ಟುಹಬ್ಬ ಹಾಗು ವಿಶ್ವ ರೆಡ್ ಕ್ರಾಸ್ ದಿನಾಚರಣೆ ಅಂಗವಾಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ನಾವು ಮೊಬೈಲ್ ಮುಖಾಂತರ ಒಟಿಪಿ ಗಳನ್ನು ಹಾಗೂ ಫೇಸ್ಬುಕ್ ಇನ್ಸ್ಟಾಗ್ರಾಮ್ ನಲ್ಲಿ ನಮ್ಮ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳುವುದರಿಂದ ಸಾಕಷ್ಟು ಅನಾಹುತಗಳು ಇಂದಿಗೂ ನಡೆಯುತ್ತಾ ಇವೆ ಆದ್ದರಿಂದ ಆದಷ್ಟು ವಾಟ್ಸಪ್ ಸಂದೇಶಗಳನ್ನು ಮೊಬೈಲ್ ಮಾಹಿತಿಗಳನ್ನು ಪರಾಮರ್ಶಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಫ್ ಪಿ ದಿನೇಶ್ ಮಾತನಾಡುತ್ತ ಮನು ಕುಲದ ಸೇವೆಯಲ್ಲಿ ರೆಡ್ ಕ್ರಾಸಿನ ಕೊಡುಗೆ ತುಂಬಾ ಅಪಾರವಾಗಿದೆ ಹೆನ್ರಿ ಡುನಂಟ್ ರವರು ಸ್ಥಾಪಿಸಿದ ರೆಡ್ ಕ್ರಾಸ್ ಪ್ರಪಂಚಾದ್ಯಂತ ಮಾನವೀಯ ಸೇವೆಗಳ ಮುಖಾಂತರ ತನ್ನದೇ ಆದ ಛಾಪು ಮೂಡಿಸಿದ ಯುದ್ಧ ಹಾಗೂ ಪ್ರಕೃತಿ ವಿಕೋಪ. ಕರೋನದಂತ ಸಂದರ್ಭದಲ್ಲಿ ಸಹಾಯ ಹಸ್ತ ನೀಡುವುದರ ಜೊತೆಗೆ ಯುವ ಜನರಿಗೆ ಜೀವನ ಕೌಶಲ್ಯ ತರಬೇತಿ ನೀಡುವುದರ ಮುಖಾಂತರ ಅವರಿಗೆ ಬದುಕನ್ನು ಕಟ್ಟಿಕೊಡುತ್ತದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಎರಡು ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ!ದಿನೇಶ್ ರೆಡ್ ಕ್ರಾಸ್ ಸಂಸ್ಥೆ ನಡೆದು ಬಂದ ದಾರಿ ಹಾಗೂ ಸಮುದಾಯದಲ್ಲಿ ಈಗಾಗಲೇ ಸಲ್ಲಿಸಿರುವ ಸೇವೆಗಳ ಬಗ್ಗೆ ವಿವರ ನೀಡಿದರು, ಮುಖ್ಯ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ನಿರ್ದೇಶಕರಾದ ಅಶ್ವತ್ ನಾರಾಯಣ್ ಶೆಟ್ಟಿ ಅವರು ಮಾತನಾಡಿ ಶುಭಾಶಯ ತಿಳಿಸಿದರು.
ರೆಡ್ ಕ್ರಾಸ್ ನಿರ್ದೇಶಕ ವಸಂತ್ ಹೋಬಳಿದಾರ್ ಮಾತನಾಡುತ್ತಾ ರೆಡ್ ಕ್ರಾಸ್ ಸಂಸ್ಥೆಯ ಈ ವರ್ಷದ ಧ್ಯೇಯ ಮಾನವೀಯತೆಯ ನೆಲೆಯಲ್ಲಿ ಸೇವೆ ಮಾಡುವ ಏಕೈಕ ಸಂಸ್ಥೆ ರೆಡ್ ಕ್ರಾಸ್ ಎಂದು ನುಡಿದರು ವೇದಿಕೆಯಲ್ಲಿ ರೆಡ್ ಕ್ರಾಸ್ ಅಜೀವ ಸದಸ್ಯರಾದ ಶ್ರೀ ಜಿ ವಿಜಯಕುಮರ್, ಎನ್ ಗೋಪಿನಾಥ, ಪ್ರೊಫೆಸರ್ ಕೆ ಎಂ ನಾಗರಾಜ್, ರೆಡ್ ಕ್ರಾಸ್ ನಿರ್ದೇಶಕ ನವೀನ್. ಸೌಪರ್ಣಿಕಾ, ಉಮೇಶ್, ಶೃತಿ ಕೆ. ಹಾಗೂ ವಿವಿಧ ಕಾಲೇಜುಗಳಿಂದ ರೆಡ್ ಕ್ರಾಸ್ . ಎನ್ಎಸ್ಎಸ್. ವಿದ್ಯಾರ್ಥಿಗಳು ಉಪಸ್ಥಿತರಿದ್ದರು