ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ ಭಾರತದ ಸೈನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು, ಶಿವಮೊಗ್ಗದ ಮುಸ್ಲಿಂ ಸಮುದಾಯದವರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.
ಇಂದು ಶಿವಮೊಗ್ಗ ನಗರದ ಎಲ್ಲಾ ಮಸೀದಿಗಳಲ್ಲಿ ಮುಸಲ್ಮಾನ್ ಬಾಂಧವರು ಶುಕ್ರವಾರದ ನಮಾಜ್ ನಂತರ ಭಾರತ ದೇಶದ ಸೇನೆಯ ಯಶಸ್ಸಿಗೆ ಮತ್ತು ದೇಶದ ಭದ್ರತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಾವು ಯಾವ ದೇಶದಲ್ಲಿ ವಾಸಿಸುತ್ತೇವೆ ಆ ದೇಶದ ಪರ ಮತ್ತು ದೇಶದ ಒಳಿತಿಗಾಗಿ ಸದಾ ಕಾಲ ತಮ್ಮ ಜೀವನವನ್ನು ಮುಡಿಪಾಗಿ ಇಡುವ ಬಗ್ಗೆ ಕುರಾನ್ ನಲ್ಲಿ ವಿಶ್ಲೇಷಣೆ ಮಾಡಿರುವ ಶ್ಲೋಕ ಪಠಿಸಿ ಪ್ರಾರ್ಥನೆ ಸಲ್ಲಿಸಿದರು.