ಶಿವಮೊಗ್ಗದ ನಿರ್ಮಿತಿ ಕೇಂದ್ರಗಳು ಸಾರ್ವಜನಿಕ ಅನುದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿರುವುದನ್ನು ಈದಿನ ನಿನ್ನೆ (ಜು.31) “ಶಿವಮೊಗ್ಗ | ನಿರ್ಮಿತಿ ಕೇಂದ್ರವನ್ನು ಸ್ವಂತ ಉದ್ದಿಮೆ ಮಾಡಿಕೊಂಡರೇ ಅಧಿಕಾರಿಗಳು?” ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿಗೆ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರತಿಕ್ರಿಯಿಸಿದ್ದಾರೆ.
“ಆರ್‌ಟಿಐ ಕಾಯ್ದೆಯಡಿಯಲ್ಲಿ ಮಾಹಿತಿಯನ್ನು ಯಾವಾಗಲೂ ಒದಗಿಸಲಾಗುತ್ತದೆ. ಇದರ ಬಗ್ಗೆ ಯಾವುದೇ ದೂರುಗಳಿದ್ದರೆ, ಮೇಲ್ಮನವಿ ಪ್ರಾಧಿಕಾರವು ಮೊದಲ ಪ್ರತಿವಾದಿಯು ಮಾಹಿತಿಯನ್ನು ನೀಡುವಂತೆ ಆದೇಶಿಸಬಹುದು. ಅರ್ಜಿದಾರರೂ ಕೂಡ ಆರ್‌ಟಿಐ ಕಾಯ್ದೆಯಡಿಯಲ್ಲಿ ಅಪ್ರಸ್ತುತ/ಅಸ್ಪಷ್ಟ ಮಾಹಿತಿ ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೇಳದಿರುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಈ ಲೇಖನದ ಶೀರ್ಷಿಕೆ ಮತ್ತು ವಿಷಯವು ದಾರಿತಪ್ಪಿಸುವಂತಿದೆ ಮತ್ತು ಯಾವುದೇ ವಿಷಯ ಅಥವಾ ಪುರಾವೆಗಳಿಲ್ಲದೆ ಅಧಿಕಾರಿಗಳನ್ನು ಆರೋಪಿಸುತ್ತದೆ” ಎಂದು ಆರೋಪಿಸಿದ್ದರು.
ಆದರೆ ಅರ್ಜಿದಾರರು ಆರ್‌ಟಿಐ ಕಾಯ್ದೆಯಡಿಯಲ್ಲಿ ಕೇಳಿರುವ ಮಾಹಿತಿಯ ದಾಖಲೆಗಳನ್ನು ಒದಗಿಸಿರುತ್ತದೆ. ಕಾಯ್ದೆಯಡಿಯಲ್ಲಿ ಕೇಳಬಹುದಾದ ಮಾಹಿತಿಗಳನ್ನೇ ಕೇಳಿದ್ದರೂ ನಿರ್ಮಿತಿ ಕೇಂದ್ರವು ಕುಂಟು ನೆಪ ಹೇಳಿಕೊಂಡು ಮಾಹಿತಿ ಒದಗಿಸಲು ನಿರ್ಲಕ್ಷ್ಯ ತೋರುತ್ತಿದೆ ಎಂದು ಅವರು ಆರೋಪಿಸಿದೆ. ಅದರ ದಾಖಲೆಗಳನ್ನೂ ಒದಗಿಸಿದೆ.
“ಇತ್ತೀಚೆಗೆ ಮಾಹಿತಿ ಆಯೋಗ ರುದ್ರಣ್ಣ ಹರ್ತಿಕೋಟಿ ಪೀಠವು ನಿರ್ಮಿತಿ ಕೇಂದ್ರದ ಶಿವಮೊಗ್ಗ ಇದರ ಪ್ರಕರಣವೊಂದರ ತೀರ್ಪಿನಲ್ಲಿ ಕಲಂ ೪ ರಡಿ ಎಲ್ಲ ದಸ್ತಾವೇಜುಗಳನ್ನು ಅಂದರೆ ಸೆಕ್ಷನ್ 4(1)(a) 4(1)(b) ರಡಿ ಅರವತ್ತು ದಿವಸಗಳೊಳಗೆ ಪ್ರಕಟಿಸಬೇಕೆಂದು ಆದೇಶಿಸಿತು. ಇದೀಗ ಅರವತ್ತು ದಿವಸಗಳು ಕಳೆದಿದ್ದು ನಿರ್ಮಿತಿ ಕೇಂದ್ರ ಪ್ರಕಟಣೆಯ ನಿರೀಕ್ಷೆಯಲ್ಲಿ ಅರ್ಜಿದಾರರಿದ್ದು. ಒಂದು ವೇಳೆ ಪ್ರಕಟಿಸದಿದ್ದರೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಾರೆ. ಮುಂದುವರೆದು ಕಲಂ ೪ ಅನ್ನು ಅನುಸರಿಸದೆ ಇದ್ದರೆ ಕಾನೂನು ಹೋರಾಟ ಮಾಡುವುದಾಗಿ ಅರ್ಜಿದಾರರು ತಿಳಿಸಿರುತ್ತಾರೆ”



ಈ ದಾಖಲೆಗಳನ್ನು ಪರಿಶೀಲಿಸಿ ಕಾನೂನು ಉಲ್ಲಂಘನೆ ಮಾಡುತ್ತಿರುವ ನಿರ್ಮಿತಿ ಕೇಂದ್ರದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.