ಶಿವಮೊಗ್ಗ ತಾಲೂಕಿನ ಹೊಳಲೂರು ಹೋಬಳಿಯ ಹಾಡೋನಹಳ್ಳಿ ಗ್ರಾಮದಲ್ಲಿ ಅನಧಿಕೃತವಾಗಿ ತುಂಗಾ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಮೇಲೆ ಉಪವಿಭಾಗಾಧಿಕಾರಿ ಸತ್ಯನಾರಾಯಣ್, ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದಲ್ಲಿ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಸುಮಾರು 50 ಟನ್ ಮರಳು ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ಕೆಲವು ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರ ದೂರಿನ ಹಿನ್ನೆಲೆ ದಾಳಿ ನಡೆಸಲಾಗಿದ್ದು, ಅಕ್ರಮ ಮರಳು ದಂಧೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ. ಹೀಗೆ ಮರಳು ಗಣಿಗಾರಿಕೆ ಮುಂದುವರೆದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಕ್ರಮ ಮರಳುಗಾರಿಕೆಗೆ ಬಳಸಿದಂತಹ ಕೆಲವೊಂದು ಸಲಕರಣೆಗಳನ್ನು ವಶಕ್ಕೆ ಪಡೆದು ಪೊಲೀಸ್ ಇಲಾಖೆಗೆ ಹಸ್ತಾಂತರಿಸಿ ಈ ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಕಾನೂನು ತಿಳಿವಳಿಕೆ ಸುಗಮ ಬದುಕಿಗೆ ದಾರಿ: ನ್ಯಾ. ಸಂತೋಷ್
ಹೊನ್ನಾಳಿ ಇಂದ ಶಿಕಾರಿಪುರ ಕಡೆಗೆ ಬರುತ್ತಿರುವ ಮರಳು ಸಾಗಾಣಿಕೆ ತಡೆಯಲು ಆಗಲ್ಲ 50 ಟನ್ ಬರೆ ಹೆಸರಿಗೆ
ಹೊಸನಗರ ದಿಂದ ಶಿಕಾರಿಪುರ ಕ್ಕೆ ಬರುವ ಮರಳು ಸಾಗಣೆ
ಬೆಳಗಿನ ಜಾವ ಹಿಡಿದಿರುವ ದಾಖಲೆ ತೋರಿಸಿ ಇದರಲ್ಲಿ
ಎಲ್ಲರು ಹಂಚಿಕೊಂಡು ತಿನ್ನದೇ ಯಾರು ಇಲ್ಲ ಕೆಲವರು ಬಿಟ್ಟು