ಶಿವಮೊಗ್ಗದಲ್ಲಿ ನಟ ಕಮಲ ಹಾಸನ್ ವಿರುದ್ಧ ಕನ್ನಡ ಸಂಘಟನೆಗಳು ಸಾಲು ಸಾಲು ಪ್ರತಿಭಟನೆಗಳು ನಡೆಸಲಾರಂಭಿಸಿದೆ.
ಇಂದು ಕರವೇ ನಾರಾಯಣ ಗೌಡರ ಬಣ ಶಿವಮೊಗ್ಗದ ಅಶೋಕ ವೃತ್ತದಲ್ಲಿ ಕರವೇ ನಾರಾಯಣ ಗೌಡರ ಬಣ ಇಂದು ಬೆಳಿಗ್ಗೆ ಪ್ಲೆಕ್ಸ್ ಹಿಡಿದು ನಟ ಕಮಲ ಹಾಸನ್ ವಿರುದ್ಧ ಘೋಷಣೆ ಕೂಗಿದರು. ಕ್ಷಮೆ ಕೇಳಿದರೆ ಶಾಂತಿ ಇಲ್ಲವಾದಲ್ಲಿ ಕ್ರಾಂತಿ ಎಂಬ ಘೋಷಣೆ ಕೂಗುವ ಮೂಲಕ ನಟ ಕಮಲ ಹಾಸನ್ ತನ್ನ ಹೇಳಿಕೆಯನ್ನ ವಾಪಾಸ್ ಪಡೆದು ಕ್ಷಮೆ ಕೇಳುವಂತೆ ಆಗ್ರಹಿಸಿದರು. ಪ್ರತಿಭಟನೆ ನಡೆಸಿ ನಟ ಕಮಲ್ ಹಾಸನ್ ಪ್ರತಿಕೃತಿ ದಹಿಸಿದರು.

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಕೇಬಲ್ ಮಂಜು, ಜಿಲ್ಲಾ ಉಪಾಧ್ಯಕ್ಷ ಶೈಲೇಶ್ ಕುಮಾರ್, ರಾಜ್ಯ ಸಹಕಾರ್ಯದರ್ಶಿ ಮಧು, ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಸೋಮ ಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರೇಶ್ ಗೌಡ ಮತ್ತು ವಿಜಯ ಕುಮಾರ್, ಪದಾಧಿಕಾರಿಗಳು, ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.