ನಾಳೆ ವಕ್ಫ್ ತಿದ್ದುಪಡಿ ಕಾನೂನು ವಿರುದ್ಧ ನಗರದಲ್ಲಿ ಮುಸಲ್ಮಾನ್ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಇರುವ ಈದ್ಗ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆ ಹಿನ್ನಲೆಯಲ್ಲಿ ಪೊಲೀಸ್ ಪಥ ಸಂಚಲನ ನಡೆದಿದೆ. ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಿತ ದೃಷ್ಟಿಯಿಂದ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಈ ದಿನ ದಿನಾಂಕಃ 02-05-2025 ರಂದು ಸಂಜೆ ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನವನ್ನು ಹಮ್ಮಿಕೊಂಡಿದ್ದರು.
ಪಥ ಸಂಚಲನವನ್ನು ಶಿವಮೊಗ್ಗ ನಗರದ ಡಿ.ಎ.ಆರ್ ಪೊಲೀಸ್ ಮೈಧಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಎ.ಎ. ವೃತ್ತ, ಎಸ್. ಎನ್ ವೃತ್ತ, ಕರ್ನಾಟಕ ಸಂಘ, ಡಿ. ವಿ. ಎಸ್ ವೃತ್ತ, ಮಹಾವೀರ ವೃತ್ತ, ಗೋಪಿ ವೃತ್ತ ದಿಂದ ಪುನ್ಹ ಎ.ಎ. ವೃತ್ತದಿಂದ ಅಶೋಕ ವೃತ್ತ ಮೂಲಕ ಡಿ.ಎ.ಆರ್ ಪೊಲೀಸ್ ಮೈಧಾನಕ್ಕೆ ಬಂದು ಮುಕ್ತಾಯ ಮಾಡಲಾಯಿತು.
ಪೊಲೀಸ್ ಪಥ ಸಂಚಲನದಲ್ಲಿ, ಅನಿಲ್ ಕುಮಾರ್ ಭೂಮ ರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ, ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, 06 ಕೆ.ಎಸ್.ಆರ್.ಪಿ ತುಕಡಿ, 05 ಡಿ.ಎ.ಆರ್ ತುಕಡಿ ಮತ್ತು 700 ಜನ ಪೊಲೀಸ್ ಅಧಿಕಾರಿ & ಸಿಬ್ಬಂಧಿಗಳು ಸಿಬ್ಬಂಧಿಗಳು ಭಾಗವಹಿಸಿದ್ದರು.