ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಖಾಸಗಿ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ. ಆನಂದಪುರ ಸಮೀಪದ ಮುಂಬಾಳುವಿನಲ್ಲಿ ಇಂದು ಸಂಜೆ ಘಟನೆ ಸಂಭವಿಸಿದೆ.
ಕೆರೆ ಏರಿ ಮೇಲೆ ಅಪಘಾತ ಸಂಭವಿಸಿದ್ದು ಕಾರಿನ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಶರತ್ ಮತ್ತು ಭರತ್ ಎಂಬುವವರಿಗೆ ಗಾಯವಾಗಿದೆ.
ಬಸ್ಸಿನ ಮುಂಭಾಗಕ್ಕು ಹಾನಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಕೆರೆಯ ತಡೆಗೋಡೆ ಮೇಲೆ ನಿಂತಿದೆ. ಬಸ್ಸು ರಸ್ತೆಯ ಬದಿಗೆ ಸರಿದಿದೆ.
ಖಾಸಗಿ ಬಸ್ಸು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತಿತ್ತು. ಕಾರು ಸಾಗರದ ದಿಕ್ಕಿಗೆ ಹೋಗುತಿತ್ತು. ಘಟನೆ ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.