ದಿನಾಂಕ 13.05.2025 ರಂದು ಟ್ರಾಫಿಕ್ ಹೆಲ್ಪ್ಲೈನ್ ನಂಬರ್ ಗೆ ಸಾರ್ವಜನಿಕರೊಬ್ಬರು, ನಗರದಲ್ಲಿ ಸಂಚಾರ ಮಾಡುವ ಖಾಸಗಿ ಬಸ್ ವೀರಭದ್ರೇಶ್ವರ ಬಸ್ ನ ಚಾಲಕ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಸ್ಸನ್ನು ಚಲಾಯಿಸಿಕೊಂಡು ಹೋಗುವ ವಿಡಿಯೋವನ್ನು ಕಳುಹಿಸಿರುತ್ತಾರೆ.
ಇದರ ಸಂಬಂಧ ದೇವರಾಜ ಸಿಪಿಐ ರವರ ಮಾರ್ಗದರ್ಶನದಲ್ಲಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಶ್ರೀ ತಿರುಮಲೇಶ್ ಪಿ. ಎಸ್. ಐ. ರವರು ಮತ್ತು ಮಂಜುನಾಥ್ ಎ. ಹೆಚ್. ಸಿ., ಪ್ರವೀಣ್ ಪಾಟೀಲ್ ಸಿಹಿಚ್ ಸಿ., ಮಂಜುನಾಥ್ ಪಿಸಿ ಹರೀಶ್ ಪಿಸಿ ರವರು ಬಸ್ಸನ್ನು ಠಾಣೆಗೆ ಕರೆಸಿ ಚಾಲಕ ಅವರಿಗೆ, 5,000 ದಂಡವನ್ನು ವಿಧಿಸಿರುತ್ತಾರೆ.
ಹಾಗೆ ಚಾಲಕರಿಗೆ ಬಸ್ಸನ್ನು ಚಲಾಯಿಸುವಾಗ ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗಬಾರದೆಂದು ತಿಳುವಳಿಕೆಯನ್ನು ನೀಡಿ ಕಳುಹಿಸಿರುತ್ತಾರೆ.