ಶಿವಮೊಗ್ಗ ನಗರಕ್ಕೆ ನೆನ್ನೆ ದಿವಸ ಉಡುಪಿ ಜಿಲ್ಲೆಯಿಂದ ಡಿಜಿಟಲ್ ಮಾಧ್ಯಮದ ಪತ್ರಕರ್ತರೋಬ್ಬರು ಕೆಲಸದ ನಿಮಿತ್ತ ಶಿವಮೊಗ್ಗ ನಗರಕ್ಕೆ ಬಂದಿದ್ದು, ಈ ವೇಳೆಯಲ್ಲಿ ಮಳೆ ಇರುವ ಕಾರಣ ಬ್ಯಾಗ್ ನಲ್ಲಿ ಜೆರ್ಕಿನ್ ತಂದಿದ್ದರೂ, ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳು ಅಂದಮೇಲೆ ವಿಪರೀತ ಕೆಲಸ ಸರ್ವೇ ಸಾಮಾನ್ಯ ಅದರಲ್ಲೂ ಮಳೆಗಾಲದಲ್ಲಿ ಛತ್ರಿ ಅಥವಾ ಜೆರ್ಕಿನ್ ತೀರ ಅವಶ್ಯಕತೆ ಇರತ್ತೆ ಹೀಗಾಗಿ ಜೆರ್ಕಿನ್ ತಂದಿದ್ದರೂ.
ಸಂಜೆ ನಂತರ ಕೆಲಸ ಮುಗಿಸಿ ವಾಪಾಸ್ ಉಡುಪಿ ತೆರಳುವ ಸಂದರ್ಭದಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಜೆರ್ಕಿನ್ ಬೀಳಿಸಿಕೊಂಡು ಹೋಗಿದ್ದರು.
ವಿಶೇಷವೆಂದರೆ ಮಲೆನಾಡ ಶಿವಮೊಗ್ಗದಲ್ಲಿ ಮಳೆಗಾಲದಲ್ಲಿ ವಿಪರೀತ ಮಳೆ ಇಂತಃ ಸಮಯದಲ್ಲಿ ಅದರಲ್ಲೂ ಬಸ್ ನಿಲ್ದಾಣದಲ್ಲಿ ಜೆರ್ಕಿನ್ ಸಿಕ್ಕರೆ ಬಿಡುವುದುಂಟೆ?
ಖಂಡಿತ ಬೇರೆ ಯಾರಿಗೆ ಸಿಕ್ಕಿದ್ದರು ಸಹ ಜೆರ್ಕಿನ್ ಸಿಗುತ್ತಿರಲಿಲ್ಲ.
ಈ ವೇಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದ ರೇಣುಕಾಂಬ ಬಸ್ ಚಾಲಕ ನಿರ್ವಾಹಕರು, ಬಸ್ ನಿಲ್ದಾಣದಲ್ಲಿ ಬಿದ್ದಿದ್ದ ಬ್ಯಾಗ್ ಗಮನಿಸಿ ಪರಿಶೀಲಿಸಿದ್ದಾರೆ. ಬ್ಯಾಗ್ ನಲ್ಲಿದ್ದ ಜೆರ್ಕಿನ್ ತೆಗೆದು ಜೋಪಾನವಾಗಿ ಬಸ್ ನಲ್ಲಿ ಇಟ್ಟು ಹುಡುಕಾಟ ನಡೆಸಿದ್ದಾರೆ.
ನಂತರ ಹೇಗೋ ಪತ್ತೆ ಮಾಡಿ ಉಡುಪಿ ಪತ್ರಕರ್ತರಿಗೆ ಕರೆ ಮಾಡಿ ನಿಮ್ಮ ಜೆರ್ಕಿನ್ ಸಿಕ್ಕಿದೆ ಜೋಪಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ನಂತರ ಉಡುಪಿ ಜಿಲ್ಲೆಯ ಪತ್ರಕರ್ತರು ಶಿವಮೊಗ್ಗ ಜಿಲ್ಲೆಯ ಈದಿನ ಡಾಟ್ ಕಾಮ್ ಪತ್ರಕರ್ತರಿಗೆ ಘಟನೆ ಕುರಿತು ಮಾಹಿತಿ ನೀಡಿದ್ದು ನಂತರ ಇಂದು ಬೆಳಿಗ್ಗೆ ಬಸ್ ಚಾಲಕ ಹಾಗೂ ನಿರ್ವಾಹಕರು ಶಿವಮೊಗ್ಗ ಪತ್ರಕರ್ತರಿಗೆ ಜೆರ್ಕಿನ್ ಹಿಂದುರುಗಿಸುವ ಮುಖೇಣ ಪ್ರಾಮಾಣಿಕತೆ ಮೆರದಿದ್ದಾರೆ.
ನಂತರ ಶಿವಮೊಗ್ಗ ಪತ್ರಕರ್ತರು ಉಡುಪಿ ಖಾಸಗಿ ಬಸ್ ಗೆ ಜೆರ್ಕಿನ್ ಕೊಟ್ಟು ಪತ್ರಕರ್ತರಿಗೆ ತಲುಪಿಸಲು ತಿಳಿಸಲಾಯಿತು.
ಉಡುಪಿ ಜಿಲ್ಲೆಯ ಪತ್ರಕರ್ತ, ರೇಣುಕಾಂಬ ಖಾಸಗಿ ಬಸ್ ಹಾಗೂ ಸಿಬ್ಬಂದಿಗಳಿಗೆ ಈ ಮೂಲಕ ಧನ್ಯವಾದ ತಿಳಿಸಿದ್ದಾರೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.