ಶಿವಮೊಗ್ಗ ನಗರದ ಸರ್ಕಾರಿ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಬುದ್ಧ ನಗರ ಹಾಗೂ ಮಿಳಘಟ್ಟದ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಇರುವ ಕಾರಣ ಸಮಾಜ ಸೇವಕರು ಹಾಗೂ ಸ್ಥಳೀಯ ನಿವಾಸಿಯಾದ ಶಿವಕುಮಾರ್ ಪಶ್ಚಿಮ ಸಂಚಾರಿ ಠಾಣೆಯ ಪಿಎಸ್ಐ ತಿರುಮಲೇಶ್ ಅವರಿಗೆ ಇಲ್ಲಿ ಶಾಲೆ ಇರುವ ಕಾರಣ ನಿಧಾನವಾಗಿ ಚಲಿಸಿ ಎಂಬ ಸೂಚನಾ ಫಲಕ ಅಳವಡಿಸಿಕೊಡುವಂತೆ ಹಾಗೂ ಅಪಘಾತಗಳು ಆಗದಂತೆ ತಡಗಟ್ಟೆ ಎಂದು ತಿಳಿಸಿದ್ದರು.
ಅದರಂತೆ ನೆನ್ನೆ ದಿವಸ ಪಿಎಸ್ಐ ತಿರುಮಲೇಶ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಚನಾ ಫಲಕ ಹಾಕುವುದಾಗಿ ತಿಳಿಸಿದ್ದಾರೆ ಎಂದು ಶಿವಕುಮಾರ್ ನಮ್ಮ ಈದಿನ ಡಾಟ್ ಕಾಮ್ ಗೆ ತಿಳಿಸಿದರು.

ಹಾಗೆಯೇ ಅಲ್ಲೇ ರಸ್ತೆಯಲ್ಲಿ ಗುಂಡಿ ಬಿದ್ದಿರುವುದನ್ನ ಗಮನಿಸಿದ ತಿರುಮಲೇಶ್ ಮಾಹಿತಿ ಪಡೆದಿದ್ದಾರೆ, ಅದರಂತೆ ಶಿವಕುಮಾರ್ ಅವರು ಮಹಾನಗರ ಪಾಲಿಕೆಗೆ ಇಲ್ಲಿ ಗುಂಡಿ ಬಿದ್ದಿದೆ ಮುಚ್ಚಿ ಅಪಘಾತವಾಗುವ ಸಂಭವಯಿದೆ ಎಂದು ತಿಳಿಸಿದರು, ಮಹಾನಗರ ಪಾಲಿಕೆ ನಿರ್ಲಕ್ಷ ಮಾಡಿದ್ದಾರೆ ಎಂಬುದಾಗಿ ಶಿವಕುಮಾರ್ ತಿಳಿಸಿದರು.
ಹಾಗಾಗಿ ಸ್ವತಃ ಪಿಎಸ್ಐ ತಿರುಮಲೇಶ್ ತಂಡ ಇಂದು ಬೆಳಿಗ್ಗೆ ಗುಂಡಿಗೆ ಕಾಂಕ್ರೀಟ್ ಹಾಕಿಸಿ ಗುಂಡಿ ಮುಚ್ಚಿದ್ದಾರೆ.

ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಹೀಗಾಗಿ ಶಿವಕುಮಾರ್ ಹಾಗೂ ಬುದ್ಧನಗರ ತಮಿಳು ಯುವಕರ ಸಂಘದ ವತಿಯಿಂದ ತಿರುಮಲೇಶ್ ಅವರ ಸಾಮಾಜಿಕ ಕಾರ್ಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.