ಶಿವಮೊಗ್ಗ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸರ್ಕಾರ ಪ್ರಕಟಿಸಿದ ಮಧ್ಯಮಾವಧಿ ಕೃಷಿ ಸಾಲ (ಎಂ.ಐ.ಎಲ್.) ದ ಬಡ್ಡಿ ಹಣ ಮನ್ನಾ ಯೋಜನೆಯ 2.52 ಕೋಟಿ ರೂಪಾಯಿಗಳನ್ನು ಹಾಗೂ 2018 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದ ಸಾಲ ಮನ್ನಾ ಯೋಜನೆಯ ಜಿಲ್ಲೆಯ 1956 ರೈತ ಫಲಾನುಭವಿಗಳ 12.54 ಕೋಟಿ ರೂ.ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಆಗ್ರಹಿಸಿದೆ.
ಸುದ್ದಿಗೊಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಕೇಂದ್ರದ ಟ್ರಸ್ಟಿ ಕಲ್ಲೂರು ಮೇಘರಾಜ, ಇದರಿಂದ ರೈತರು ಡಿ.ಸಿ.ಸಿ. ಬ್ಯಾಂಕ್‌ಗಳಲ್ಲಿ ಅಡಮಾನ ಮಾಡಿರುವ ತಮ್ಮ ಭೂದಾಖಲೆಗಳನ್ನು ವಾಪಾಸ್ ಪಡೆದು, ಮುಂದಿನ ಕೃಷಿ ಚಟುವಟಿಕೆಗೆ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ಅನುಕೂಲಾಗುತ್ತದೆ ಎಂದರು.
ಮಧ್ಯಮಾವಧಿ ಕೃಷಿ ಸಾಲದ ಸಿದ್ದರಾಮಯ್ಯನವರ ಸರ್ಕಾರ 2023 ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ರೈತರ ಮಾಡಿದ್ದರಿಂದ ಶಿವಮೊಗ್ಗ ಜಿಲ್ಲೆಯ 144 ರೈತ ಫಲಾನುಭವಿಗಳು ಸಾಲದ ಅಸಲು ಹಣವನ್ನು ಪಾವತಿಸಿದ್ದು, (ಎಂ.ಐ.ಎಲ್.) ಬಡ್ಡಿ ಹಣವನ್ನು ಮನ್ನಾ ಮಾಡುವುದಾಗಿ ಘೋಷಣೆ ಬಡ್ಡಿ ಮನ್ನಾ ಯೋಜನೆಯ ರೂ.2.52 ಕೋಟಿ ಬಾಕಿ ಹಣ ಬಿಡುಗಡೆಯಾಗದೇ ರೈತರು ಜಿಲ್ಲೆಯಲ್ಲಿ ಡಿ.ಸಿ.ಸಿ. ಬ್ಯಾಂಕ್‌ಗೆ ಅಡಮಾನ ಮಾಡಿದ ದಾಖಲೆಗಳನ್ನು ವಾಪಾಸ್ ಪಡೆಯದೇ ಬೇರೆ ವಾಣಿಜ್ಯ ಬ್ಯಾಂಕಿನಲ್ಲೂ ಸಾಲ ಪಡೆಯದ ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ.
ಅದೇ ರೀತಿ 2018 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರು ಸಾಲ ಮನ್ನಾ ಯೋಜನೆಯನ್ನು ಘೋಷಣೆ ಮಾಡಿದಾಗ ಜಿಲ್ಲೆಯಲ್ಲಿ 1956 ಫಲಾನುಭವಿಗಳಿಗೆ 12.54 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕಾಗಿದೆ ಎಂದರು.
ಭದ್ರಾವತಿ ತಾಲ್ಲೂಕಿಗೆ ರೂ.2.52 ಕೋಟಿ, ಹೊಸನಗರ ತಾಲ್ಲೂಕಿಗೆ ರೂ.2.62 ಕೋಟಿ, ಸಾಗರ ತಾಲ್ಲೂಕಿಗೆ ರೂ.1.32 ಕೋಟಿ, ಶಿಕಾರಿಪುರ ತಾಲ್ಲೂಕಿಗೆ ರೂ.0.52 ಕೋಟಿ, ಶಿವಮೊಗ್ಗ ತಾಲ್ಲೂಕಿಗೆ ರೂ. 3.27 ಕೋಟಿ, ಸೊರಬ ತಾಲ್ಲೂಕಿಗೆ ರೂ. 3.07 ಕೋಟಿ ಹಾಗೂ ತೀರ್ಥಹಳ್ಳಿ ರೂ.1.55 ಕೋಟಿ ಸೇರಿ ಒಟ್ಟು 12.54 ಕೋಟಿ ತಾಲ್ಲೂಕಿಗೆ ರೂಪಾಯಿಗಳನ್ನು ಬಾಕಿ ಹಣ ಬಿಡುಗಡೆ ಮಾಡಬೇಕಾಗಿದೆ ಎಂದರು.
ಹೆಚ್.ಡಿ. ಕುಮಾರಸ್ವಾಮಿಯವರು ನಾನು ಮಣ್ಣಿನ ಮಗ ಎಂದು ಘೋಷಣೆ ಮಾಡಿಕೊಂಡು, ಸಾಲ ಮನ್ನಾ ಯೋಜನೆಯ ಹರಿಕಾರ ಎಂದು ಟಾಂ ಟಾಂ ಎಂದು ಸಾರುತ್ತಾ ಹೋದರು. ಆದರೆ ತಾವೇ ಘೋಷಣೆ ಮಾಡಿದ ಸಾಲ ಮನ್ನಾ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯ 1956 ರೈತ ಫಲಾನುಭವಿಗಳಿಗೆ 12.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡದೇ ಇರುವುದು ರೈತ ಕುಟುಂಬಗಳಿಗೆ ಕುಮಾರಸ್ವಾಮಿಯವರು ಮಾಡಿದ ಅನ್ಯಾಯವಾಗಿದೆ ಎಂದರು.
ನಂತರ 2019 ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪನವರಾಗಲೀ ಶಿವಮೊಗ್ಗ ಜಿಲ್ಲೆಯ 1956 ರೈತ ಫಲಾನುಭವಿಗಳಿಗೆ ಸಾಲ ಮನ್ನಾ ಯೋಜನೆಯ 12.54 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡದೇ ಅನ್ಯಾಯ ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಜನಮೇಜಿರಾವ್, ಶಂಕ್ರಾ ನಾಯ್ಕ್ ಮೊದಲಾದವರಿದ್ದರು.