ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ನಿವೃತ್ತ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ ಅವರಿಗೆ ತಿಳಿಯದ ಹಾಗೆ ₹5.70 ಲಕ್ಷ ಹಣ ಆನ್‌ಲೈನ್‌ನಲ್ಲಿ ವರ್ಗಾವಣೆಯಾಗಿದೆ. ವಿಚಲಿತರಾದ ನಿವೃತ್ತ ಉದ್ಯೋಗಿ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಮೊಬೈಲ್ ಆಪ್ ಅನ್ನು ಹ್ಯಾಕ್ ಮಾಡಿರುವುದು ಗೊತ್ತಾಗಿದೆ.
ಭದ್ರಾವತಿಯ ನಿವೃತ್ತ ಉದ್ಯೋಗಿಯ (ಹೆಸರು ಗೌಪ್ಯ) ಮೊಬೈಲ್‌ಗೆ ಬ್ಯಾಂಕ್‌ನಿಂದ ಎರಡು ಎಸ್‌ಎಂಎಸ್ ಬಂದಿತ್ತು. ಅದನ್ನು ತೆರೆದು ನೋಡಿದಾಗ ₹5.70 ಲಕ್ಷ ಹಣ ಕಡಿತವಾಗಿರುವುದು ಗೊತ್ತಾಗಿದೆ. ಕೂಡಲೆ ನಿವೃತ್ತ ಉದ್ಯೋಗಿಯು ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದಾರೆ. ಪರಿಶೀಲನೆ ನಡೆಸಿದ ಮ್ಯಾನೇಜರ್, ನಿವೃತ್ತ ಉದ್ಯೋಗಿಯ ಮೊಬೈಲ್ ಬ್ಯಾಂಕಿಂಗ್ ಆಪ್ ಹ್ಯಾಕ್ ಆಗಿದೆ ಎಂದು ತಿಳಿಸಿದ್ದಾರೆ.
ನಿವೃತ್ತ ಉದ್ಯೋಗಿಯ ಮಾಹಿತಿಯನ್ನು ಕದ್ದು ಅವರ ಮೊಬೈಲ್‌ನಲ್ಲಿದ್ದ ಬ್ಯಾಂಕ್ ಆಪ್ ಹ್ಯಾಕ್ ಮಾಡಲಾಗಿದೆ. ತಮಗೆ ಒ.ಟಿ.ಪಿ ಬಾರದೆ ಹಣ ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಶಿವಮೊಗ್ಗದ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ