ಶಿವಮೊಗ್ಗ ನಗರದ ಶಂಕರ ಮಠ ವೃತ್ತದ ಬಳಿ ಬೈಕ್ ಆಯತಪ್ಪಿ(ಸ್ಕಿಡ್) ಬೈಕ್‌ನಿಂದ ಬಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಅಭಿಷೇಕ್(23) ಮೃತ ದುರ್ದೈವಿ. ನವುಲೆ ಬಳಿ ಮಾರುತಿ ಬಡಾವಣೆಯ ಮೊದಲ ತಿರುವಿನ ವಾಸಿ ಅಭಿಷೇಕ್ ಬಡಗಿ(ಕಾರ್ಪೆಂಟರ್) ಕೆಲಸ ಮಾಡಿಕೊಂಡಿದ್ದರು.
ಕೆಲಸ ಮುಗಿಸಿ ಬರುವಾಗ ಮಳೆ ಮುನ್ಸೂಚನೆ ಇದ್ದ ಕಾರಣ ಮನೆಗೆ ಬೇಗ ತಲುಪುವ ಧಾವಂತದಲ್ಲಿದ್ದ ಅಭಿಷೇಕ್, ಶಂಕರ ಮಠ ವೃತ್ತದಲ್ಲಿ ಬರುವಾಗ ಬೈಕ್ ಆಯತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದರು. ಬಳಿಕ ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಾಕಾರಿಯಾಗದೆ ಅಭಿಷೇಕ್ ಮೃತಪಟ್ಟಿದ್ದಾರೆ.