ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು, ಏ. 2 ರಂದು 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ – 1 ಪರೀಕ್ಷೆ ಫಲಿತಾಂಶ ಪ್ರಕಟಿಸಿದೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರೂರು ಶಿವಮೊಗ್ಗ ಜಿಲ್ಲೆಯು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ.ಶಿವಮೊಗ್ಗ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

ಶಿವಮೊಗ್ಗ ಜಿಲ್ಲೆಯು ಶೇ. 82.29 ರಷ್ಟು ಫಲಿತಾಂಶ ಪಡೆದಿದೆ. ಪ್ರಸ್ತುತ ವರ್ಷ 21,873 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 17,999 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 22 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳಿಸಿದ್ದಾರೆ. ಇದರಲ್ಲಿ ಶಿವಮೊಗ್ಗ ನಗರದ ವಿವಿಧ ಶಾಲೆಗಳ ಮೂವರು ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
ಕೆ. ನಮನ ಕಲ್ಲಹಳ್ಳಿಯ ಶಿವಪ್ಪನಾಯಕ ಬಡಾವಣೆಯ ಪ್ರಿಯದರ್ಶಿನಿ ಹೈಸ್ಕೂಲ್. ತಂದೆ: ಕೃಷ್ಣಮೂರ್ತಿ, ತಾಯಿ: ಪದ್ಮನಿ ,

ನಿತ್ಯ ಎಂ ಕುಲಕರ್ಣಿ ಶ್ರೀ ರಾಮಕೃಷ್ಣ ಇಂಗ್ಲೀಷ್ ಮಾಧ್ಯಮ ರೆಸಿಡೆನ್ಸಿಯಲ್ ಶಾಲೆ. ತಂದೆ: ಮುರಳೀಧರ ರಾವ್ ಕುಲಕರ್ಣಿ, ತಾಯಿ: ಕಲ್ಪನಾ ಎಂ.ಕುಲಕರ್ಣಿ

ಹಾಗೂ ಸಹಿಷ್ಣು ಎನ್ ಶರಾವತಿ ನಗರದ ಶ್ರೀ ಅದಿಚುಂಚನಗಿರಿ ಹೈಸ್ಕೂಲ್, ತಂದೆ: ನಾಗರಾಜ.ಎ.ಕೆ, ತಾಯಿ: ಪ್ರತಿಮಾ ಎಂಬುವರು ಔಟ್ ಆಫ್ ಔಟ್ ಅಂಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದ ವಿದ್ಯಾರ್ಥಿಗಳಾಗಿದ್ದಾರೆ.
ಕಳೆದ ಬಾರಿಯೂ ಕೂಡ ಶೇ. 82 ರಷ್ಟು ಫಲಿತಾಂಶ ಜಿಲ್ಲೆ ಪಡೆದಿತ್ತು. ಗುಣಮಟ್ಟದ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದರು.ಅವರ ಮಾರ್ಗದರ್ಶನದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸುವ ಕಾರ್ಯ ನಡೆಸಲಾಗಿತ್ತು.
ಮುಂದಿನ ಬಾರಿಯು ಕೂಡ ಶಿವಮೊಗ್ಗ ಜಿಲ್ಲೆಯು ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಈಗಿನಿಂದಲೇ ಸಿದ್ದತೆಗಳನ್ನು ಪ್ರಾರಂಭಿಸಲಾಗಿದೆ.ಈ ನಿಟ್ಟಿನಲ್ಲಿ ಇಂದು ಜಿಪಂ ಸಿಇಓ ಅವರು ಡಯಟ್ ನಲ್ಲಿ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದ್ದಾರೆ.