ಶಿವಮೊಗ್ಗ ನಗರದ ಪ್ರತಿಷ್ಠಿತ ಶಾಲೆಯಾದ ಆದಿಚುಂಚನಗಿರಿ ಶಾಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ ಜೀಶನ್ ಅಹ್ಮದ್ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 620 ಅಂಕ ಗಳಿಸಿ ರಾಜ್ಯಕ್ಕೆ ರ್ಯಾಂಕ್ ವಿದ್ಯಾರ್ಥಿಯಾಗಿದ್ದಾರೆ.
ಆದಿಚುಂಚನಗಿರಿ ಶಾಲೆಯ ಸಹಿಷ್ಣು ಎಂಬ ವಿದ್ಯಾರ್ಥಿ ಈ ಬಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವುದನ್ನ ಸಹ ಇಲ್ಲಿ ಗಮನಿಸಬಹುದಾಗಿದೆ.

ಆದರೆ ವಿಷಯ ಏನಂದರೆ ಈ ಬಾರಿ ಫಲಿತಾಂಶ ಪ್ರಕಟವಾದ ಸಮಯದಲ್ಲಿ ಜೀಶನ್ ವಿದ್ಯಾರ್ಥಿಗೆ ಶಾಕ್ ಕಾದಿತ್ತು, ಅದೇನು ಅಂದರೆ ಇಂಗ್ಲಿಷ್ ಹಿಂದಿ ಹಾಗೂ ಗಣಿತದಲ್ಲಿ 100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿ ಸಮಾಜ ವಿಜ್ಞಾನದಲ್ಲಿ ಮಾತ್ರ 34 ಅಂಕ ಎಂದು ತಪ್ಪಾಗಿ ನಮೂದಾಗಿತ್ತು ತದ ನಂತರ ಶಾಲೆಗೆ ಪೋಷಕರಾದ ಇಮ್ತಿಯಾಜ್ ಅಹ್ಮದ್ ರೊಂದಿಗೆ ಹೋಗಿ ವಿಚಾರಿಸಿದಾಗ, ಶಾಲಾ ಶಿಕ್ಷಕರು ನಿಮ್ಮ ಮಗ ಅಷ್ಟು ಕಡಿಮೆ ಅಂಕ ಪಡೆಯಲು ಸಾಧ್ಯವೆವಿಲ್ಲ, ಸ್ಕ್ಯಾನ್ ಅಥವಾ ಫೋಟೋ ಕಾಪಿ ತೆಗಿಸಿ ಎಂದು ತಿಳಿಸಿದರು.

ಅದರಂತೆ ಬಂದಿರುವ ಫೋಟೋ ಕಾಪಿಯಲ್ಲಿ ವಿದ್ಯಾರ್ಥಿಗೆ ಮೌಲ್ಯಮಾಪಕರ ಎಡವಟ್ಟಿಂದ ಸಮಾಜ ವಿಜ್ಞಾನದಲ್ಲಿ 80ಕ್ಕೆ 80 ಅಂಕ ನೀಡುವ ಬದಲು 34 ಅಂಕ ಎಂದು ತಪ್ಪಾಗಿ ನಮೂದು ಆಗಿರುವುದು ತಿಳಿದುಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲರು ನಮ್ಮ ‘ಈದಿನ.ಕಾಮ್’ ನೊಂದಿಗೆ ಮಾತನಾಡಿ, ‘ಜೀಶನ್ ವಿದ್ಯಾರ್ಥಿ ಓದಿನಲ್ಲಿ ತುಂಬಾ ಟ್ಯಾಲೆಂಟ್ ಇದ್ದರೂ ಯಾಕೆ ಹೀಗಾಯ್ತು ಎಂದು ಬೇಸರವಾಯಿತು, ಆದರೆ ನಮಗೆ ಇಷ್ಟು ಕಡಿಮೆ ಮಾರ್ಕ್ಸ್ ಬಗ್ಗೆ ಅನುಮಾನವಿತ್ತು’ ಎಂದರು.
ಹಾಗಾಗಿ ಫೋಟೋ ಕಾಪಿ ತೆಗಿಸಲು ಪೋಷಕರಿಗೆ ತಿಳಿಸಿದ್ದು ಅದರಂತೆ ಈಗ ವಿದ್ಯಾರ್ಥಿಗೆ 620 ಅಂಕ ಬಂದಿರುವುದು ಖಚಿತವಾಗಿದೆ. ಇದರ ಜೊತೆಗೆ ನಮ್ಮ ಶಾಲೆಯಲ್ಲಿ ಇನ್ನು ಮೂರು ನಾಲ್ಕು ವಿದ್ಯಾರ್ಥಿಗಳಿಗೆ ಇದೆ ರೀತಿ ಅನ್ಯಾಯವಾಗಿರಬಹುದೇನೋ ಎಂಬ ಅನುಮಾನ ಕಾಡುತ್ತಿದೆ ಎಂದರು.

ಇದರ ಜೊತೆಗೆ ಈ ರೀತಿಯ ಬೇಜವಾಬ್ದಾರಿ ಮೌಲ್ಯಮಾಪನ ಮಾಡುವುದು ಸರಿಯಲ್ಲ, ಮೌಲ್ಯಮಾಪನವನ್ನು ಪುನರವರ್ತನೆ ಪರಿಶೀಲನೆ ಮಾಡಬೇಕು. ಇದರಿಂದ ವರ್ಷ ಪೂರ್ತಿ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ತುಂಬಾ ತೊಂದರೆ ಆಗುತ್ತದೆ ಹೀಗೆ ಆಗದಂತೆ ಮುಂದಿನ ದಿನಗಳಲ್ಲಿ ಎಚ್ಚರವಹಿಸುವುದು ಸೂಕ್ತ ಎಂಬ ಅಭಿಪ್ರಾಯಪಟ್ಟರು.
ಸಮಾಜ ವಿಜ್ಞಾನ ಶಿಕ್ಷಕರು ಮಾತನಾಡಿ ಚೆನ್ನಾಗಿ ಓದುವ ವಿದ್ಯಾರ್ಥಿಗಳಿಗೆ ಸಮಸ್ಯೆ ಅಗಲಿದೆ ಮುಂದಿನ ಶೈಕ್ಷಣಿಕ ಜೀವನ ಹಾಗಾಗಿ ತಪ್ಪುಗಳು ಆಗದಂತೆ ಸೂಕ್ತ ಎಚ್ಚರವಹಿಸಬೇಕು ಇದರಿಂದ ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀಳಲಿದೆ ಎಂದರು.

ಪೋಷಕರು ಹಾಗೂ ಶಿವಮೊಗ್ಗ ನಗರದ ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲರಾದ ಇಮ್ತಿಯಾಜ್ ಅಹ್ಮದ್ ನಮ್ಮೊಂದಿಗೆ ಮಾತನಾಡಿ ನನ್ನ ಮಗ ಫಲಿತಾಂಶ ಬಂದ ದಿನದಿಂದ ಸಮಾಜ ವಿಜ್ಞಾನ ಅಂಕ ನೋಡಿ ತುಂಬಾ ಬೇಸರಗೊಂಡು ದುಃಖ ಪಡುತ್ತಿದ್ದ ಶಾಲೆಯಲ್ಲಿ ಪತ್ರಿಕೆಗಳಲ್ಲಿ ಎಲ್ಲಾ ಕಡೆ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರಶಂಸೆ ಹರಿದುಬರುತ್ತಿತ್ತು ಆದರೆ ಮೌಲ್ಯಮಾಪಕರ ಎಡವಟ್ಟಿನಿಂದ ನನ್ನ ಮಗ ದುಃಖಿತನಾಗಿದ್ದ ಮನೆಯಿಂದ ಸಹ ಆಚೆ ಬರುತ್ತಿರಲಿಲ್ಲ.
ಈಗ ನಾವೆಲ್ಲರೂ ಸಂತಯಿಸಿದ್ದೇವೆ ಆದರೂ ನಮಗೆ ಸಹ ಯಾರು ಮುಂದೆ ಸಹ ಮಗ ಜಸ್ಟ್ ಪಾಸ್ ಎಂದು ಹೇಳಲು ಮುಜುಗರದ ಪರಿಸ್ಥಿತಿ ಎದುರಾಗಿತ್ತು. ಯಾರದೋ ಎಡವಟ್ಟು ಮಕ್ಕಳು ಹಾಗೂ ಪೋಷಕರಿಗೆ ಆಗುವ ನೋವು ಅಷ್ಟಿಷ್ಟಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಜೊತೆಗೆ ಮಕ್ಕಳ ಜೀವನ ಜೊತೆ ಬೇಜವಾಬ್ದಾರಿ ಹಾಗೂ ಚೆಲ್ಲಾಟ ಆಡಬಾರದು ಮೌಲ್ಯಮಾಪನ ಶಿಸ್ತುಯಿಂದ ಆಗಬೇಕು ಎಂದರು.
ನನ್ನ ಮಗನಿಗೆ ಅಷ್ಟೇ ಅಲ್ಲ ಯಾವ ವಿದ್ಯಾರ್ಥಿಗಳಿಗು ಈ ರೀತಿ ಅನ್ಯಾಯ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿ ಜೀಶನ್ ನಮ್ಮ ಜೊತೆ ಮಾತನಾಡಿ ನಾನು ತುಂಬಾ ನೋವಲ್ಲಿದ್ದೆ ಶಾಲೆಯ ವಾಲ್ ಫ್ಲೆಕ್ಸ್ಗಳಲ್ಲಿ ಮೊದಲು ಸಾಲಿನಲ್ಲಿ ಬರಬೇಕಾದ ಹೆಸರು ಇರಲಿಲ್ಲಾ ನಾನು ನನ್ನ ಸಹಪಾಠಿ ಹಾಗೂ ಸಂಬಂಧಿಕರೊಂದಿಗೆ ಅಂತರ ಕಾಯ್ದು ಕೊಂಡಿದ್ದೆ ಮಾನಸಿಕವಾಗಿ ಕುಗ್ಗಿದ್ದೆ ಇಷ್ಟೆಲ್ಲಾ ನೋವಾಗಿರುವ ನನಗೆ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ನ್ಯಾಯ ಒದಗಿಸಿಕೊಡಬೇಕು ತಪ್ಪು ಎಡವಟ್ಟು ಅಂತ ಹೇಳುವುದಕ್ಕಿಂತ ಇದನ್ನು ಏನೋ ಒಂದೋ ಎರಡು ಅಂಕ ವ್ಯತ್ಯಾಸ ಆಗಿದ್ದರೆ ಅದು ಕಣ್ಣು ತಪ್ಪಿನಿಂದ ಆಗಿರಬಹುದು ಅಂದುಕೊಳ್ಳಬಹುದು.
ಆದರೆ 80 ಅಂಕಕ್ಕೆ 34 ಅಂಕ ನಮೂದು ಮಾಡಿರುವುದು ಅಜಾಗಜಂತರ ವ್ಯತ್ಯಾಸವಾಗಿದೆ. ಹೀಗಾಗಿ ನನಗೆ ನ್ಯಾಯ ಒದಗಿಸಿ ಜೊತೆಗೆ ಬೇರೆ ಯಾವ ವಿದ್ಯಾರ್ಥಿಗಳಿಗು ಸಹ ಈ ರೀತಿ ಆಗದಂತೆ ಜವಾಬ್ದಾರಿ ವಹಿಸಬೇಕು.
ಫಲಿತಾಂಶದ ದಿನ ರಾಜ್ಯದಲ್ಲಿ ಎಲ್ಲ ರ್ಯಾಂಕ್ ವಿದ್ಯಾರ್ಥಿಗಳಿಗೆ ಸಿಕ್ಕ ಖುಷಿ ನಾನು ಸಹ ರ್ಯಾಂಕ್ ವಿದ್ಯಾರ್ಥಿ ಎಂಬ ಖುಷಿ ಅನುಭವಿಸಲು ಆಗಲಿಲ್ಲ.
ಈ ರೀತಿಯಲ್ಲಿ ವಿದ್ಯಾರ್ಥಿಗಳ ಜೀವನ ಜೊತೆ ಚೆಲ್ಲಾಟ ಆಡುವ ಮೌಲ್ಯಮಾಪನ ಮಾಡುವುವರಿಗೆ ಕ್ರಮ ಜರುಗಿಸಬೇಕು ಜೊತೆಗೆ ನಮ್ಮ ಪೋಷಕರು ಶಿಕ್ಷಕರು ನನ್ನ ಮೇಲೆ ಭರವಸೆ ಇಟ್ಟು ಫೋಟೋ ಕಾಪಿ ತೆಗಿಸಿದ ಕಾರಣ ನನಗೆ ಮಾಹಿತಿ ದೊರೆಯಿತು, ಇಲ್ಲವಾದಲ್ಲಿ ನನ್ನ ಮುಂದಿನ ಶಿಕ್ಷಣದ ಪರಿಸ್ಥಿತಿ ಬಗ್ಗೆ ಯೋಚಿಸಬೇಕಾಗಿತ್ತು ಎಂದು ತಿಳಿಸಿದರು.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.