ಶಿವಮೊಗ್ಗ ನಗರದ ಕೆ ಎಸ್ ಆರ್ ಟಿ ಬಸ್ ಸ್ಟಾಂಡ್ ಒಳಗೆ 3 ಶೌಚಾಲಯ ವಿರುತ್ತದೆ ಆದರೆ ಇಲ್ಲಿ ಇಂದು ಒಂದು ಶೌಚಾಲಯದಲ್ಲಿ ಮಹಿಳಾ ಪ್ರಯಾಣಿಕರಿಗೆ ಶೌಚಾಲಯ ಬಳಕಗೆ ಸಿಬ್ಬಂದಿ ನೀರು ಇಲ್ಲದಾಗಿದೆ ಹಾಗಾಗಿ 10₹ ಪಾವತಿಸಿ ಎಂದು ಪ್ರಯಾಣಿಕರಿಗೆ ಕಿರಿ ಕಿರಿ ಅನುಚಿತ ವರ್ತನೆ ಉಂಟು ಮಾಡುತ್ತಿದ್ದು ಕಂಡುಬಂದಿದೆ. ಶೌಚಾಲಯ ಸಿಬ್ಬಂದಿ ಯಾರಿಗೋ ಕರೆ ಮಾಡಿ ಕರೆಸಲು ನೋಡಿದ್ದು ಕಂಡ ಪ್ರಯಾಣಿಕರು ಯಾರನ್ನು ಕರೆಸುತ್ತಿಯ ಕರೆಸು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಯಾಣಿಕರು ತೊಂದರೆ ಆಗುತ್ತಿದೆ ಎಂದು ತಿಳಿಸಿದರೆ ಯಾರಿಗೋ ಕರೆ ಮಾಡಿ ಬರಲು ತಿಳಿಸಿದ್ದು ಪ್ರಯಾಣಿಕರ ಆಕ್ರೋಶ ಹೆಚ್ಚು ಮಾಡಿದೆ.
ಅದರಂತೆ ಬೇರೆ ಊರಿಂದ ಬಂದಿದ್ದ ಕುಟುಂಬ ಹಾಗೂ ಶೌಚಾಲಯ ಸಿಬ್ಬಂದಿಯೊಂದಿಗೆ ಕೆಲಕಾಲ ಜಗಳವಾಗಿದೆ, ಶೌಚಾಲಯ ಸಿಬ್ಬಂದಿ, ಇದು ನಾನು ನಿರ್ಮಿಸಿರುವ ಶೌಚಾಲಯ ಎಂದು ವಾಗ್ವದಕ್ಕೆ ಇಳಿದಿದ್ದ, ತದ ನಂತರ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದು ಕೊನೆಗೆ ಮಹಿಳಾ ಪ್ರಯಾಣಿಕರು ಹಾಗೂ ಕುಟುಂಬದವರು ಅಸಹಾಯಕರಾಗಿ ತೆರಳಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ನೀರಿಲ್ಲ ಹಾಗಾಗಿ ಶೌಚಾಲಯ ಬಳಸುವುದಕ್ಕೆ 10₹ ಪಾವತಿ ಮಾಡಿ ಎಂದು ಬೋರ್ಡ್ ಹಾಕಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.
ಹಾಗೆ ದಿನ ನಿತ್ಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇರುವ ಶೌಚಾಲಯಗಳ ಬಳಸುವ ವಿಚಾರಕ್ಕೆ ಮನಸೋ ಇಚ್ಛೆ ಹಣ ಕೇಳುತ್ತಾರೆ ಹಾಗೆ ಪ್ರಯಾಣಿಕರೊಂದಿಗೆ ಜಗಳ ಕಿರಿ ಕಿರಿ ತೊಂದರೆ ಅನುಚಿತ ವರ್ತನೆ ಮಾಡುತ್ತಾರೆ, ಇದರ ಕುರಿತು ದಿನ ನಿತ್ಯ ಮನಸಿಗೆ ಕಿರಿ ಕಿರಿ ಮಾಡಿಕೊಂಡು ಹೋಗಬೇಕಾಗಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಶೌಚಾಲಯ ವ್ಯವಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಸ್ಯೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದಷ್ಟು ಬೇಗ ಈ ಯಾಕೆ ನೀರಿನ ಸಮಸ್ಯೆ ಆಗಿದೆ? ಎಂದುಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕಾಗಿದೆ. ಮತ್ತು ನಿರ್ದಿಷ್ಟ ಹಣದ ಬೋರ್ಡ್ ಹಾಕಿ ಬೇಕಾಬಿಟ್ಟಿ ಹಣ ಪೀಕುವುದನ್ನ ತಡೆಯಬೇಕಾಗಿದೆ ಎಂಬುದು ಪ್ರಯಾಣಿಕರು ಹಾಗೂ ಸಾರ್ವಜನಿಕರ ಆಗ್ರಹವಾಗಿದೆ.

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.
Idu kevala sivamogga dali alla rajyada ella kade ide reti agitide