ಶಿವಮೊಗ್ಗ, ಜಿಲ್ಲಾ ಒಕ್ಕಲಿಗರ ಸಂಘದ ಖಜಾಂಚಿ ಆಗಿದ್ದ ಸ್ನೇಹ ಮಯಿ ಸರಳ ವ್ಯಕ್ತಿತ್ವದ ಸುಂದರೇಶ್ ಹೃದಯಘಾತದಿಂದ ಅಗಲಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಸ್ನೇಹಿತರು ಬಂಧುಗಳು ಹಾಗೂ ಸಮುದಾಯದ ಹಲವು ಪ್ರಮುಖರು ಸಂತಾಪ ಸೂಚಿಸಿದ್ದು ಅವರ ಕುಟುಂಬಕ್ಕೆ ಈ ದುಃಖವನ್ನು ಬರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಒಕ್ಕಲಿಗರ ಜಿಲ್ಲಾ ಘಟಕದಲ್ಲಿ ಸಂತಾಪ ಸೂಚಿಸಿ ನಂತರ ಮೃತರ ಸ್ವಗೃಹ ಲಕ್ಕಿನಕೊಪ್ಪದಲ್ಲಿ ಇಂದು ಸಂಜೆ 6:00 ಗಂಟೆಗೆ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು ಎಂದು ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ರಮೇಶ ಹೆಗಡೆ ತಿಳಿಸಿದ್ದಾರೆ.