ಶಿವಮೊಗ್ಗ,ಸುಮಾರು 65 ರಿಂದ 70 ವರ್ಷದ ಅನಾಮಧೇಯ ವ್ಯಕ್ತಿಯು ಆಯನೂರು ಗೇಟ್ ಬಳಿಯ ಕ್ರಿಶ್ಚಿಯನ್ ಸ್ಮಶಾನದಲ್ಲಿ ಮೃತ ಪಟ್ಟಿರುವುದು ಕಂಡು ಬಂದಿದೆ. ಈ ಅನಾಮಧೇಯ ವ್ಯಕ್ತಿಯು ಸುಮಾರು 03 ತಿಂಗಳಿನಿಂದ ಇಲ್ಲಿಯೇ ಸುತ್ತಮುತ್ತ ಭಿಕ್ಷೆ ಬೇಡಿ ಸ್ಮಶಾನದಲ್ಲಿ ಹೆಣ ಇಟ್ಟು ಪೂಜೆ ಮಾಡುವ ಆರ್‌ಸಿಸಿ ಕೋಣೆ/ಚಾರ್ಪಲ್‌ನಲ್ಲಿ ವಾಸ ಮಾಡಿಕೊಂಡಿದ್ದ.
ಮಾನಸಿಕವಾಗಿ ಅಸ್ವಸ್ಥನಂತೆ ಕಂಡು ಬರುತ್ತಿದ್ದು, ಅವನ ಹೆಸರು, ವಿಳಾಸ ಯಾರಿಗೂ ತಿಳಿದಿರುವುದಿಲ್ಲ. ದಿ: 27-06-2025 ರಂದು ಇದೇ ಸ್ಮಶಾನದಲ್ಲಿ ಮೃತಪಟ್ಟಿರುತ್ತಾನೆ.ಮೃತ ವ್ಯಕ್ತಿಯು ಅಂದಾಜು 5.3 ಅಡಿ ಎತ್ತರ, ದುಂಡು ಮುಖ, ತೆಳುವಾದ ಮೈಕಟ್ಟು, ತಲೆಯಲ್ಲಿ ಸುಮಾರು 03 ಇಂಚು ಬಿಳಿ ಕೂದಲು, ತೇಳುವಾದ ಮೈಕಟ್ಟು, ತಲೆಯಲ್ಲಿ ಸುಮಾರು 03 ಇಂಚು ಬಿಳಿ ಕೂದುಲು, ತೆಳುವಾದ ಮೈಕಟ್ಟು, ಬಿಳಿ ಮೀಸೆ, ಬಿಳಿ ಹುಬ್ಬು, ಬಿಳಿ ಗಡ್ಡ, ಗೋಧಿ ಮೈಬಣ್ಣ, ಮೈಮೇಲೆ ಕಾಫಿ ಬಣ್ಣದ ರೌಂಡ್‌ನೆಕ್‌ನ ತುಂಬು ತೋಳಿನ ಟೀ-ಶರ್ಟ್, ಸಿಮೆಂಟ್ ಬಣ್ಣದ ನೈಟ್ ಪ್ಯಾಂಟ್ ಹಾಕಿರುತ್ತಾನೆ.
ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ತುಂಗಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದೆ.