ಶಿವಮೊಗ್ಗ ಮಹಾನಗರ ಪಾಲಿಕೆಯು ಸೆ. 22 ಮತ್ತು 23 ರಂದು ಕುವೆಂಪು ರಂಗಮಂದಿರ, ಎನ್.ಇ.ಎಸ್. ಮೈದಾನ ಹಾಗೂ ಅಂಬೇಡ್ಕರ್ ಭವನದಲ್ಲಿ ಮಕ್ಕಳ ದಸರಾ ಅಂಗವಾಗಿ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಸೆ. 22 ರಂದು ಬೆಳಗ್ಗೆ 9.00ಕ್ಕೆ ಕುವೆಂಪು ರಂಗಮಂದಿರ ಹಾಗೂ ಎನ್.ಇ.ಎಸ್. ಮೈದಾನದಲ್ಲಿ 5 ರಿಂದ 7ನೇ ತರಗತಿ ವಿಧ್ಯಾರ್ಥಿಗಳಿಗೆ ಮತ್ತು 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ದೆ, ಶಿವಮೊಗ್ಗ ದಸರಾ ವೈವಿದ್ಯತೆ ಬಗ್ಗೆ ಪ್ರಬಂಧ ಸ್ಪರ್ಧೆ, ಛದ್ಮವೇಷ, 1 ನಿಮಿಷದಲ್ಲಿ ಪ್ಲಾಸ್ಟಿಕ್ ಬಾಟಲಿಗೆ ಬೊಗಸೆಯಿಂದ ನೀರು ತುಂಬಿಸುವುದು, ದೇಶಭಕ್ತಿ ಗೀತೆ ಸ್ಪರ್ದೆ, ಶಾಟ್‌ಪುಟ್ ಸ್ಪರ್ದೆ ಹಾಗೂ 100&200 ಮೀ.
ಸೆ. 23 ರಂದು ಬೆಳಗ್ಗೆ 9.00ಕ್ಕೆ ಮಕ್ಕಳ ಜಾಥಾ ಹಮ್ಮಿಕೊಂಡಿದ್ದು ಡಿ.ವಿ.ಎಸ್. ಶಾಲೆಯಿಂದ ಶಿವಮೂತಿ ಸರ್ಕಲ್ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಕೃಷಿ ಇಲಾಖೆಯಿಂದ ಓ.ಟಿ.ರಸ್ತೆಯ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಮಿಳಘಟ್ಟ ಕಡೆಯಿಂದ ಅಶೋಕವೃತ್ತದ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ, ಹೊಳೆ ಬಸ್ ಸ್ಟಾಪ್ ರಸ್ತೆಯ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ ಹಾಗೂ ಜೈಲ್ ರಸ್ತೆಯಿಂದ ಗೋಪಿ ವೃತ್ತದ ಮಾರ್ಗವಾಗಿ ಶಿವಪ್ಪ ನಾಯಕ ವೃತ್ತದವರೆಗೆ ಸಾಗುತ್ತದೆ.
ಅಂದು ಸಂಜೆ 5.00ಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಮಾರೋಪ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಕ್ಕಳ ದಸರಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.