ತುಮಕೂರು | ದಲಿತ ವಿರೋಧಿ ಹೇಳಿಕೆ : ಯತ್ನಾಳರ ಶಾಸಕ ಸ್ಥಾನ ವಜಾಕ್ಕೆ ಭೀಮ್ ಆರ್ಮಿ ಆಗ್ರಹ

Date:

ದಸರಾ ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ ಅವರ ದಲಿತ ವಿರೋಧಿ ಮನಸ್ಥಿತಿಯನ್ನು ಭೀಮ್ ಆರ್ಮಿ ಜಿಲ್ಲಾ ಸಂಘಟನೆ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅಯ್ಯನಪಾಳ್ಯ ಅವರು ಹೇಳಿದರು.

- Advertisement -

ತುಮಕೂರು ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ದಸರಾದಲ್ಲಿ ಚಾಮುಂಡಿ ದೇವಿಗೆ ಸನಾತನ ಧರ್ಮದವರು ಮಾತ್ರ ಹೂ ಮುಡಿಸಬೇಕು ಹೊರತು ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಜನಪ್ರತಿನಿಧಿಯಾಗಿ ಜನಾಂಗೀಯ ದ್ವೇಷ ಬಿತ್ತುವ ಬದಲು ಸರ್ವಜನಾಂಗಗಳನ್ನು ಬೆಸೆಯುವ ಕೆಲಸ ಮಾಡಬೇಕು. ಎಲ್ಲ ಧರ್ಮದವರನ್ನು ಭಾರತೀಯರೆಂದೇ ನೋಡುವಂತೆ ಈಗ ಕೋರ್ಟ್ ಕೂಡ ಚಾಟಿ ಬೀಸಿದೆ. ನಿತ್ಯ ಕೋಮು ಸೌಹಾರ್ದ ಕೆಡಿಸಲು ಪ್ರಯತ್ನಿಸುತ್ತಿರುವ ಬಸನಗೌಡ ಪಾಟೀಲ ಯತ್ನಾಳರನ್ನು ಈಗಾಗಲೇ ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದ್ದರೂ ಇವರ ನಾಲಿಗೆ ಉದ್ದ ಕಡಿಮೆಯಾಗಿಲ್ಲ. ಆದರೆ, ಈತನನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ಸನಾತನ ಧರ್ಮದವರು ಎಂದರೆ ಯಾರು? ಬ್ರಾಹ್ಮಣ, ಲಿಂಗಾಯತರು ಮಾತ್ರವಾ? ದಲಿತರು ಹಿಂದೂಗಳಲ್ಲವೇ? ಹಿಂದುತ್ವವಾದಿಗಳ ನಿಕೃಷ್ಟ ಮನಸ್ಥಿತಿ ಯತ್ನಾಳ್ ಹೇಳಿಕೆಯಿಂದ ಬಹಿರಂಗಗೊಂಡಿದೆ. ದಲಿತರನ್ನು ಅಸ್ಪೃಷ್ಯರನ್ನಾಗಿಯೇ ಉಳಿಸುವ ಆರ್‌ಎಸ್‌ಎಸ್ ಕುತಂತ್ರ ಫಲಿಸದು. ರಾಜ್ಯದ ಯಾವುದೇ ಮೂಲೆಯಲ್ಲಿ ದಲಿತ ವಿರೋಧಿ ಮನಸ್ಥಿತಿಗಳು ಚುನಾವಣೆಗೆ ನಿಂತರೆ ಠೇವಣಿ ಕಳೆದುಕೊಳ್ಳಲಿದ್ದಾರೆ. ಅಂತೆಯೇ ಮುಂದಿ‌ನ ಚುನಾವಣೆಯಲ್ಲಿ ಯತ್ನಾಳ್ ಅವರನ್ನು ಹೀನಾಯವಾಗಿ ಸೋಲಿಸಲಿದ್ದೇವೆ ಎಂದು ಭೀಮ್ ಆರ್ಮಿ ಸಂಘಟನೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅಯ್ಯನಪಾಳ್ಯ ಅವರು ಎಚ್ಚರಿಕೆ ನೀಡಿದರು.

ಬಹುತ್ವಕ್ಕೆ ಹೆಸರಾಗಿರುವ ಕರ್ನಾಟಕದಲ್ಲಿ ಕೋಮು ದ್ವೇಷ ಹರಡುತ್ತಿರುವ ಇಂಥ ನೀಚ ಮನಸ್ಥಿತಿಯವರನ್ನು ಸರ್ಕಾರ ಗುರುತಿಸಿ ರಾಜ್ಯದಿಂದಲೇ ಗಡಿಪಾರು ಮಾಡಿ ಆದೇಶ ಹೊರಡಿಸಬೇಕು ಹಾಗೂ ಇಂತಹ ಕೋಮು ಕ್ರಿಮಿಗಳ ಬಗ್ಗೆ ಬಾಲಿಷ ಧೋರಣೆ ತಾಳದೆ ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಆಗ್ರಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಜಿಲ್ಲಾ ಮಟ್ಟದ ಕಬಡ್ಡಿಯಲ್ಲಿ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳ ಗೆಲುವು

ಜಿಲ್ಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲಕರ ಜಿಲ್ಲಾ ಮಟ್ಟದ...

ಉಡುಪಿ | ತೈಲದ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡಲು ಹಸಿರು ಹೈಡ್ರೋಜನ್ ಸಹಕಾರಿ

ಪರ್ಯಾಯ ಇಂಧನವಾಗಿ ಹಸಿರು ಹೈಡ್ರೋಜನ್ ಭಾರತಕ್ಕೆ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ತೈಲದ...

ಎಂಆರ್‌ಪಿಎಲ್ ಸ್ಫೋಟ: ಮೃತ ಮನೀಶ್ ಕುಟುಂಬಕ್ಕೆ ಸಾಂತ್ವನ, ಹಾನಿಗೊಳಗಾದ ಚರ್ಚ್‌ಗೆ ಪ್ರಶಾಂತ್ ಜತ್ತನ್ನ ಭೇಟಿ

ಎಂಆರ್‌ಪಿಎಲ್‌ನ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ (ಸಿಎಚ್‌ಟಿಯು)ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಮುಲ್ಕಿ...

ರಾಯಚೂರು | ಪ್ರವಾಸಕ್ಕೆ ತೆರಳಿದ್ದ ಕಾರು ಅಪಘಾತ: ಇಬ್ಬರು ಸಾವು, ಇಬ್ಬರಿಗೆ ಗಂಭೀರ ಗಾಯ

ಪ್ರವಾಸಕ್ಕೆ ತೆರಳಿದ್ದ ಕಾರು ಅಪಘಾತಕ್ಕೀಡಾಗಿ ನಾಲ್ವರ ಪೈಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು,...