ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ರವರು, ಮತ್ತು ಮೋಹನ್ ಎ.ಎಸ್.ಐ. ಮತ್ತು ಸಿಬ್ಬಂದಿಯೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಮುಂಭಾಗದ ಆಟೋ ನಿಲ್ದಾಣದಲ್ಲಿನ ಆಟೋಗಳ ದಾಖಲಾತಿಗಳನ್ನು ಪರಿಶೀಲಿಸಿದ್ದಾರೆ,

ಅದರಂತೆ ಎಫ್ ಸಿ ಮತ್ತು ಇನ್ಸೂರೆನ್ಸ್ ಇಲ್ಲದ ಮತ್ತು ದಾಖಲಾತಿ ಇಲ್ಲದ ಆಟೋಗಳನ್ನು ಠಾಣೆಗೆ ತಂದು ಎಲ್ಲಾ ವಾಹನಗಳಿಗೆ ನೋಟಿಸ್ ನೀಡಿ, ನಂತರ ಎಫ್ ಸಿ ಮತ್ತು ಇನ್ಸೂರೆನ್ಸ್ ಮಾಡಿಸಿಕೊಂಡು ತೋರಿಸಿದ ನಂತರ ದಂಡವನ್ನು ವಿಧಿಸಿರುತ್ತಾರೆ,

ಹಾಗೂ ಎಲ್ಲಾ ಆಟೋ ಚಾಲಕ ಮತ್ತು ಮಾಲೀಕರಿಗೆ ಖಡ್ಡಾಯವಾಗಿ ಮೀಟರ್ ಹಾಕಿಕೊಂಡು ಬಾಡಿಗೆ ಮಾಡುವುದು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವುದು ದಾಖಲಾತಿಗಳನ್ನು ಸರಿಯಾಗಿ ಇಟ್ಟುಕೊಳ್ಳುವುದರ ಬಗ್ಗೆ ಮತ್ತು ಸಂಚಾರಿ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಿ ಕಳುಹಿಸಿಕೊಡಲಾಗಿರುತ್ತದೆ.
ಪೊಲೀಸ್ ಡ್ರೆಸ್ ಹಾಕದೆ ನಾರ್ಮಲ್ ಡ್ರೆಸ್ ನಲ್ಲಿ ಹೋಗಿ ಚೆಕ್ ಮಾಡಿ, ಮೀಟರ್ ಹಾಕಿದ್ದರೋ ಇಲ್ಲ ಹಣ ಜಾಸ್ತಿ ಕೇಳುತ್ತಾರೋ ಎಂದು ಅವರು ಆಡಿದ್ದೇ ಆಟ